More

    ಭಾಷೆಗೆ ಕನಕರ ಕೊಡುಗೆ ಬಗ್ಗೆ ಅಧ್ಯಯನ ಅವಶ್ಯ

    ಶಿವಮೊಗ್ಗ: ಕನಕದಾಸರ ಕಾವ್ಯಗಳಲ್ಲಿರುವ ಮೌಲ್ಯಗಳು, ಅವರು ಭಾಷೆಗೆ ನೀಡಿರುವ ಕೊಡುಗೆಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಬೇಕಾದ ಅವಶ್ಯಕತೆಯಿದೆ ಎಂದು ಸಾಹಿತಿ, ಸಂಶೋಧಕ ಡಾ.ಕಬ್ಬಿನಾಲೆ ವಸಂತ ಭಾರಧ್ವಾಜ್ ಅಭಿಪ್ರಾಯಪಟ್ಟರು.
    ನಗರದ ಕರ್ನಾಟಕ ಸಂಘದಲ್ಲಿ ಶನಿವಾರ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಕನಕದಾಸರ ಕಾವ್ಯ ಭಾಷೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಕನಕದಾಸರ ಕಾವ್ಯ ಭಾಷೆಯನ್ನು ಹೊಸ ಆಲೋಚನೆಯೊಂದಿಗೆ ಅಭ್ಯಾಸ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.
    ಇಂದು ಭಾಷಾ ಪ್ರಯೋಗದಲ್ಲಿ ಅನೇಕ ದೋಷಗಳನ್ನು ಕಾಣುತ್ತಿದ್ದೇವೆ. ದಶಕದ ಹಿಂದೆ ಮಾಧ್ಯಮಗಳ ಕಚೇರಿಯಲ್ಲಿ ಭಾಷಾ ಪಂಡಿತರನ್ನೇ ನೇಮಕ ಮಾಡಿಕೊಳ್ಳುವ ಪರಿಪಾಠವಿತ್ತು. ಆದರೆ ಇಂದು ಆ ಪರಿಪಾಠ ಕಾಣದಾಗಿದೆ. ವಿದ್ಯುನ್ಮಾನ ಮಾಧ್ಯಮಗಳಲ್ಲಂತೂ ಅನೇಕ ದೋಷಗಳು ಕಂಡು ಬರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
    ಭಾಷೆಯ ಬಗ್ಗೆ ಒಂದರ್ಥದಲ್ಲಿ ಅವಜ್ಞೆ ತೋರುತ್ತಿದ್ದೇವೆ. ಅಪರೂಪದ ಶಬ್ಧ ಭಂಡಾರವನ್ನೇ ಕಳೆದುಕೊಳ್ಳುತ್ತಿದ್ದೇವೆ. ಇದರ ಜತೆಯಲ್ಲೇ ಭಾಷೆಯ ಬೆಳವಣಿಗೆ ಬಗ್ಗೆ ಭಾಷಣವನ್ನೂ ಮಾಡುತ್ತಿದ್ದೇವೆ. ಕನಕದಾಸರ ಕಾವ್ಯ ವೈಭವವನ್ನು ಹೊಸ ತಲೆಮಾರಿ ಪರಿಚಯಿಸಬೇಕಾದ ವ್ಯವಸ್ಥೆಯೇ ನಮ್ಮಲ್ಲಿ ಇಲ್ಲದಾಗಿದೆ. ಶಿಕ್ಷಣದ ಮೂಲಕವೂ ಮಕ್ಕಳಿಗೆ ಇದನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ. ಕರ್ನಾಟಕ ಸಂಘದಂತಹ ಸಂಸ್ಥೆಗಳಲ್ಲಿ ಕಾರ್ಯಕ್ರಮ ಆಯೋಜಿಸಿದರೆ ಅಲ್ಲಿಗೆ ಹೊಸ ತಲೆಮಾರಿನವರು ಬರುವುದೇ ಇಲ್ಲ ಎಂದು ವಾಸ್ತವ ಸಂಗತಿಯನ್ನು ವಿವರಿಸಿದರು.
    ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ ರಾಜ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಪ್ರೊ.ಎಂ.ಆಶಾಲತಾ ಉಪಸ್ಥಿತರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts