More

    ಶಿವಮೊಗ್ಗ ಫುಟ್‌ಪಾತ್‌ನಲ್ಲಿ ಹೊಗೆ, ಸ್ಥಳೀಯರಲ್ಲಿ ಆತಂಕ !

    ಶಿವಮೊಗ್ಗ: ಸ್ಮಾರ್ಟ್‌ಸಿಟಿ ಯೋಜನೆಯಡಿ ಒಂದಿಲ್ಲೊಂದು ಅವಾಂತರಗಳು ಬೆಳಕಿಗೆ ಬರುತ್ತಲೇ ಇವೆ. ಇತ್ತೀಚೆಗೆ ಹೊಸಮನೆಯ ಕೆಲ ಮನೆಗಳಲ್ಲಿ ವಿದ್ಯುತ್ ಪಾಸ್ ಆಗಿತ್ತು. ಇದೀಗ ವಿನೋಬನಗರ 100 ಅಡಿ ರಸ್ತೆಯ ಫುಟ್‌ಪಾತ್‌ನಡಿ ಶಬ್ದದೊಂದಿಗೆ ಹೊಗೆ ಕಾಣಿಸಿಕೊಂಡು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿತ್ತು.
    ವಿನೋಬನಗರ 100 ಅಡಿ ರಸ್ತೆಯ ನಿರ್ಮಲಾ ಆಸ್ಪತ್ರೆ ಬಳಿ ಸ್ಮಾರ್ಟ್‌ಸಿಟಿಯಿಂದ ಫುಟ್‌ಪಾತ್ ನಿರ್ಮಿಸಿದ್ದು ಗುರುವಾರ ಭೂಮಿಯೊಳಗಿನಿಂದ ಬುಸುಗುಟ್ಟುವ ಶಬ್ದದೊಂದಿಗೆ ಹೊಗೆ ಮೇಲೇದ್ದಿದೆ. ಫುಟ್‌ಪಾತ್‌ನಡಿ ಯುಜಿ (ಅಂಡರ್‌ಗ್ರೌಂಡ್) ಕೇಬಲ್ ಅಳವಡಿಸಿದ್ದು,ಶಾರ್ಟ್ ಸರ್ಕ್ಯೂಟ್‌ನಿಂದ ಹೊಗೆ ಕಾಣಿಸಿಕೊಂಡಿತ್ತು. ಇದು ಸ್ಥಳೀಯರಲ್ಲಿ ಭಯ ಆವರಿಸುವಂತೆ ಮಾಡಿತ್ತು.
    ನೆಲದಡಿ ವಿದ್ಯುತ್ ಕೇಬಲ್ ಅಳವಡಿಸಲಾಗುತ್ತಿದೆ. ಈ ನಡುವೆ ವಿದ್ಯುತ್ ಶಾರ್ಟ್‌ಸರ್ಕ್ಯೂಟ್ ಸಂಭವಿಸುತ್ತಿದ್ದು, ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಲಾಕಿಂಗ್ ಟೈಲ್ಸ್ ಹಾಕುವ ಸಂದರ್ಭದಲ್ಲಿ ನೆಲ ಸಮತಟ್ಟು ಮಾಡುವಾಗ ಜೆಸಿಬಿ ಬಳಸಿದ್ದು ವಿದ್ಯುತ್ ಕೇಬಲ್‌ಗಳು ಸ್ಕಿನ್‌ಔಟ್ ಆಗಿ, ಶಾರ್ಟ್‌ಸರ್ಕ್ಯೂಟ್ ಆಗುತ್ತಿರಬಹುದು ಎನ್ನಲಾಗುತ್ತಿದೆ. ಹೊಗೆ ಬರುವ ದೃಶ್ಯವನ್ನು ಕೆಲವರು ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದು ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಅಧಿಕಾರಿಗಳು ಮತ್ತು ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ರಿಪೇರಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts