More

    ಸೈನಿಕ ಸೇವೆಯೇ ನಿಜವಾದ ದೇಶ ಭಕ್ತಿ: ಜಿಪಂ ಸಿಇಒ ಎಂ.ಎಲ್.ವೈಶಾಲಿ

    ಶಿವಮೊಗ್ಗ: ಸೈನಿಕರ ಸೇವೆಯೇ ನಿಜವಾದ ದೇಶ ಭಕ್ತಿ. ಹಾಗಾಗಿ ಇಂದಿನ ಯುವ ಪೀಳಿಗೆ ಸೈನಿಕರನ್ನು ಆದರ್ಶವಾಗಿಟ್ಟುಕೊಂಡು ದೇಶ ಸೇವೆಗೆ ಮುಂದಾಗಬೇಕು ಎಂದು ಜಿಪಂ ಸಿಇಒ ಎಂ.ಎಲ್.ವೈಶಾಲಿ ಸಲಹೆ ನೀಡಿದರು.
    ನಗರದ ಸೈನಿಕ ಪಾರ್ಕ್‌ನಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಜಿಲ್ಲಾ ಶಾಖೆ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಸಹಯೋಗದೊಂದಿಗೆ ಸೋಮವಾರ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಹುತಾತ್ಮ ಸೈನಿಕರ ಕಲಾಕೃತಿಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಕಾರ್ಗಿಲ್ ವಿಜಯೋತ್ಸವ ಎಂಬುದೇ ಹುರುಪು, ಅಭಿಮಾನ ಮತ್ತು ದೇಶಪ್ರೇಮದ ಭಾವನೆ ಮೂಡುತ್ತದೆ. ತಮ್ಮ ಕುಟುಂಬದಿಂದ ದೂರವಾಗಿ ತಾಯ್ನಡಿನ ರಕ್ಷಣೆಗೆ ಚಳಿ, ಮಳೆ, ಗಾಳಿ ಲೆಕ್ಕಿಸದೇ ದೇಶ ಕಾಯುವ ಸೈನಿಕರ ಸೇವೆಯೇ ಗೌರವಯುತವಾದದ್ದು. ದೇಶ ಭಕ್ತಿ ಬರೀ ಮಾತಲ್ಲಿ ಹೇಳಿದರೆ ಸಾಲದು. ತಾಯ್ನಡಿಗಾಗಿ ತ್ಯಾಗ ಮಾಡಲು ಯುವ ಪೀಳಿಗೆ ಸೇನೆಗೆ ಸೇರಿದಾಗ ಮಾತ್ರ ಈ ದಿನಕ್ಕೆ ಅರ್ಥ ಬರುತ್ತದೆ ಎಂದರು.
    ವಿಜಯೋತ್ಸವ ನಿಮಿತ್ತ ಆಯೋಜಿಸಿದ್ದ ಚಿತ್ರಕಲೆ-ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಡಿಸಿ ಡಾ. ನಾಗೇಂದ್ರ ಹೊನ್ನಳ್ಳಿ, ಎಎಸ್ಪಿ ಡಾ. ಎಚ್.ಟಿ.ಶೇಖರ್, ಸೈನಿಕ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ. ಸಿ.ಎ.ಹಿರೇಮಠ, ಶಿವಮೊಗ್ಗ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಯುವಜನ ಸೇವೆ ಸಹಾಯಕ ನಿರ್ದೇಶಕ ಎಚ್.ಮಂಜುನಾಥ್, ನಿವೃತ್ತ ಕರ್ನಲ್‌ಗಳಾದ ರಾಮಚಂದ್ರ, ರಘುನಾಥ ರಾವ್, ಸೈನಿಕ ಸಂಘದ ಅಧ್ಯಕ್ಷ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್, ರಾಜ್ಯ ಉಪಾಧ್ಯಕ್ಷ ತೇಜಸ್ವಿ, ಚೂಡಪ್ಪ, ಉದಯ, ಬಾಪಟ್, ಜಿಲ್ಲಾಧ್ಯಕ್ಷ ಪಿ.ವಿ.ಕೃಷ್ಣಾರೆಡ್ಡಿ, ಸಮನ್ವಯ ಟ್ರಸ್ಟ್‌ನ ಕಾಶಿನಾಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts