More

    ಸ್ವಾತಂತ್ರ್ಯ ಅಮೃತೋತ್ಸವಕ್ಕೆ ಮಲೆನಾಡು ಸಜ್ಜು

    ಶಿವಮೊಗ್ಗ: ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಮಲೆನಾಡು ಶಿವಮೊಗ್ಗ ಜಿಲ್ಲೆಯೂ ಸಜ್ಜಾಗುತ್ತಿದೆ. ಈಗಾಗಲೇ ಪ್ರತಿ ಮನೆಯಲ್ಲೂ ತಿರಂಗಾ ಹಾರಿಸಲು ರ‌್ಯಾಲಿ ಸೇರಿದಂತೆ ಹಲವು ಬಗೆಯಲ್ಲಿ ಸಿದ್ಧತೆ ನಡೆಸಿದ್ದು ಜಿಲ್ಲಾಡಳಿತ, ರಾಜಕೀಯ ಪಕ್ಷಗಳು, ಮಹಾನಗರ ಪಾಲಿಕೆಯಿಂದ ಸರ್ಕಾರಿ ಅಧಿಕಾರಿಗಳು, ಜನರು ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರಮುಖರಿಗೆ ರಾಷ್ಟ್ರಧ್ವಜಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ಭರದಿಂದ ಸಾಗಿದೆ.
    ಬಿಜೆಪಿಯಿಂದ ಜಿಲ್ಲೆಯಾದ್ಯಂತ 4.5 ಲಕ್ಷ ಕಾರ್ಯಕರ್ತರ ಮನೆಗಳಿಗೆ ತಿರಂಗಾ ವಿತರಣೆಗೆ ಯೋಜನೆ ರೂಪಿಸಿಕೊಳ್ಳಲಾಗಿದೆ. ಜಿಲ್ಲಾಡಳಿತದಿಂದಲೂ ನೌಕರರಿಗೆ ಹಾಗೂ ಮಹಾನಗರ ಪಾಲಿಕೆಯಿಂದ ಆಯಾ ವಾರ್ಡ್‌ಗಳ ಕಾರ್ಪೋರೇಟರ್ ಮೂಲಕ ಮನೆ ಮನೆಗೆ ರಾಷ್ಟ್ರಧ್ವಜ ತಲುಪಿಸುವ ಕೆಲಸ ಆಗುತ್ತಿದೆ. ಜನರು ಕೂಡ ಖುಷಿಯಿಂದಲೇ ರಾಷ್ಟ್ರಧ್ವಜ ಸ್ವೀಕಾರ ಮಾಡುತ್ತಿದ್ದು ಆ.13ರಿಂದ 15ರ ಸಂಜೆವರೆಗೂ ಮನೆಗಳ ಮೇಲೆ ಹಾರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
    ಅದರಂತೆ ಗುರುವಾರ ಹೊಸಮನೆ ಬಡಾವಣೆಯಲ್ಲಿ ಪಾಲಿಕೆ ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ್ ಹರ ಘರ್ ತಿರಂಗಾ ವಿತರಣೆಗೆ ಚಾಲನೆ ನೀಡಿದರು. ಹೊಸಮನೆ ವಾರ್ಡಿನ ವಜ್ರೇಶ್ವರಿ ಗಣಪತಿ ದೇವಸ್ಥಾನದಿಂದ ಮನೆ ಮನೆಗೆ ತೆರಳಿ ತ್ರಿವರ್ಣ ಧ್ವಜ ನೀಡಿದರು. ಯುವ ಮುಖಂಡ ಕೆ. ರಂಗನಾಥ್, ಪಾಲಿಕೆ ಅಧಿಕಾರಿಗಳಾದ ಯಶ್ವಂತ, ಕುಪ್ಪರಾಜ್, ಭೋಜರಾಜ್, ವಾರ್ಡ್ ಪ್ರಮುಖರಾದ ಗೋಪಿ, ಚಂದ್ರು ಗೆಡ್ಡೆ, ಪವನ್ ಮತ್ತಿತರರಿದ್ದರು.
    2ನೇ ವಾರ್ಡ್‌ನಲ್ಲಿ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ ನೇತೃತ್ವದಲ್ಲಿ ಎನ್‌ಇಎಸ್ ಕಾಲೇಜಿನ ಎದುರು ಭಾಗದ ಎ ಬ್ಲಾಕ್ ಹಾಗೂ ರೆಡ್ಡಿ ಬಡಾವಣೆಯ ನಿವಾಸಿಗಳಿಗೆ ರಾಷ್ಟ್ರಧ್ವಜ ವಿತರಣೆ ಮಾಡಿದರು. ಸ್ಥಳೀಯರಾದ ಕೆ.ಎನ್.ಪ್ರಸನ್ನ, ಪ್ರಕಾಶ್, ನಾಗರಾಜ್, ಅನಿಲ್, ರಾಜ್ ಪ್ರಕಾಶ್, ನಾಗಭೂಷಣ, ಸುಗುಣಾ ಸತೀಶ್, ನಿಖಿತಾ, ಭೀರಪ್ಪ ಹಾಜರಿದ್ದರು.
    ಸರ್ಕಾರಿ ನೌಕರರಿಗೆ ಧ್ವಜ ಹಸ್ತಾಂತರ: ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರಿ ನೌಕರರ ಸಂಘದಿಂದ ತಿರಂಗಾವನ್ನು ಭೂಮಾಪನಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಸ್ತಾಂತರಿಸಲಾಯಿತು. ಇದೇ ವೇಳೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಯೋಧರನ್ನು ಸ್ಮರಿಸಲಾಯಿತು. ಎಡಿಎಲ್‌ಆರ್ ಲಲ್ಲೂ ಪ್ರಸಾದ್, ಭೂಮಾಪನ ಇಲಾಖಾ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ವೇಣುಗೋಪಾಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎನ್.ಪ್ರಸನ್ನ, ತಾಲೂಕು ಅಧ್ಯಕ್ಷ ಮನ್ನತ್, ಮಂಜುನಾಥ್‌ಸಿಂಗ್, ಸೋಮಶೇಖರ್, ಸುಪ್ರಿಯಾ, ರೇಷ್ಮಾಬಾನು, ಸಹನಾ, ಪೂಜಾ, ದೀಪಾ, ಭೃಂದಾ, ಪರಮೇಶ್ವರಪ್ಪ, ಮೋಹನ್, ಸತೀಶ್, ಪ್ರವೀಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts