More

    ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿರುದ್ಧ ದಸಂಸ ಪ್ರತಿಭಟನೆ

    ಶಿವಮೊಗ್ಗ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮತ್ತು ಸಾಂವಿಧಾನಿಕ ಹುದ್ದೆಗೆ ಅಪಮಾನ ಮಾಡಿದ ರಾಯಚೂರು ಜಿಲ್ಲಾ ನ್ಯಾಯಾಧೀಶರ ವರ್ತನೆ ಅಂಬೇಡ್ಕರ್ ಅಭಿಮಾನಿಗಳಿಗೆ ನೋವುಂಟು ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಂಗಳವಾರ ದಲಿತ ಸಂಘರ್ಷ ಸಮಿತಿ ಸದಸ್ಯರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
    ಗಣರಾಜ್ಯೋತ್ಸವ ದಿನದಂದು ರಾಯಚೂರಿನ ಪ್ರಧಾನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಅಂಬೇಡ್ಕರ್ ಭಾವಚಿತ್ರ ತೆಗೆದರೆ ಮಾತ್ರ ಧ್ವಜಾರೋಹಣ ಮಾಡುತ್ತೇನೆ. ಇಲ್ಲವಾದರೆ ಬರುವುದಿಲ್ಲ ಎಂದು ಹೇಳಿ ಅಂಬೇಡ್ಕರ್ ಭಾವಚಿತ್ರವನ್ನು ಕಾರ್ಯಕ್ರಮದ ಮುಖ್ಯಸ್ಥಳದಿಂದ ತೆಗೆಸಿದ್ದಾರೆ ಎಂದು ದೂರಿದರು.
    ನ್ಯಾಯಾಂಗದ ಪ್ರತಿನಿಧಿಯಾಗಿ ಸಂವಿಧಾನದ ಅನುಚ್ಛೇದ 233ರ ಅಡಿಯಲ್ಲಿ ಜಿಲ್ಲಾ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯಿಂದ ಆಯ್ಕೆಯಾದ ಅವರ ಈ ನಡೆ ನಾಗರಿಕ ಸಮಾಜಕ್ಕೆ ನೋವು ತಂದಿದೆ. ಪೂರ್ವಗ್ರಹ ಪೀಡಿತ ಮನಸ್ಥಿತಿ ಇರುವ ನ್ಯಾಯಧೀಶರಿಂದ ನಿಸ್ಪಕ್ಷಪಾತ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ದೂರಿದರು.
    ಆದ್ದರಿಂದ ನ್ಯಾಯಾಧೀಶರ ವಿಚಾರಣಾ ಕಾಯ್ದೆ 1968 ಮತ್ತು ವಿಚಾರಣಾ ಅಧಿನಿಯಮ 1969ರ ಅನುಸಾರ ಅಸಮರ್ಥತೆ ಮತ್ತು ಅನುಚಿತ ವರ್ತನೆ ಆಧಾರದಲ್ಲಿ ನ್ಯಾಯಾಧೀಶರ ಹುದ್ದೆಯಿಂದ ವಜಾ ಮಾಡಬೇಕು. ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
    ಜಿಲ್ಲಾ ಸಂಚಾಲಕ ಚಿನ್ನಯ್ಯ, ರಾಜ್ಯ ಖಜಾಂಚಿ ಭದ್ರಾವತಿ ಸತ್ಯ, ಪ್ರಮುಖರಾದ ಗುರುರಾಜ್, ಕೆ.ಎ. ರಾಜಕುಮಾರ್, ಎಂ.ರಂಗಪ್ಪ, ಪ್ರಕಾಶ್ ಲಿಗಾಡಿ, ವಿ.ವಿನೋದ್, ಶಾಂತಿ, ಕಾಣಿಕ್ಯರಾಜ್, ರಂಗನಾಥ್, ನರಸಿಂಹಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts