More

    ಶಿವಮೊಗ್ಗ, ಭದ್ರಾವತಿ ಶಾಂತ, ಆದ್ರೂ ನಿಷೇಧಾಜ್ಞೆ ಮುಂದುವರಿಕೆ

    ಶಿವಮೊಗ್ಗ: ಶಿವಮೊಗ್ಗ ಮತ್ತು ಭದ್ರಾವತಿ ನಗರದಲ್ಲಿ ಸಂಪೂರ್ಣ ಶಾಂತವಾಗಿದೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಶಿವಮೊಗ್ಗ ನಗರದಲ್ಲಿ ಆ.19ರ ರಾತ್ರಿ 10ರವರೆಗೆ ನಿಷೇಧಾಜ್ಞೆ ಮುಂದುವರಿಯಲಿದೆ ಎಂದು ಪೂರ್ವ ವಲಯದ ಐಜಿಪಿ ಕೆ.ತ್ಯಾಗರಾಜನ್ ತಿಳಿಸಿದರು.
    ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸ್ಥಿತಿ ಹತೋಟಿಯಲ್ಲಿದೆ. ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಹೆಚ್ಚುವರಿಯಾಗಿ ಬಂದ ಎಲ್ಲ ಪೊಲೀಸ್ ತುಕಡಿಗಳು ಕಾರ್ಯನಿರ್ವಹಿಸುತ್ತಿವೆ. ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಿದ್ದೇವೆ. ಯಾವುದೇ ಪಡೆಗಳನ್ನು ವಾಪಸ್ ಕಳಿಸಿಲ್ಲ. ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಗಲಭೆಗೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ ಎಂದರು.
    ಹೊರ ಜಿಲ್ಲೆಗಳಿಂದ ಬಂದ ಪೊಲೀಸ್ ಸಿಬ್ಬಂದಿಗಳನ್ನು ಶುಕ್ರವಾರ ಒಂದು ದಿನ ನೋಡಿ ವಾಪಸ್ ಕಳಿಸುವ ಬಗ್ಗೆ ತೀರ್ಮಾನಿಸಲಾಗುವುದು. ನಗರ ಸಂಪೂರ್ಣ ಸಹಜ ಸ್ಥಿತಿಗೆ ಬಂದ ನಂತರ ಸೆಕ್ಷನ್ ಮುಂದುವರಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
    ಬೆಳಗ್ಗೆ ಮತ್ತು ಸಂಜೆ 2 ಹೊತ್ತು ವಿವಿಧ ಪಡೆಗಳು ಪಥಸಂಚಲನ ಮಾಡಲಿದ್ದಾರೆ. ಸಂಜೆ 7ರೊಳಗೆ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುವಂತೆ ವಿನಂತಿಸಿದ್ದು, ರಾತ್ರಿ ಬಿಗಿ ಪೊಲೀಸ್ ಬಂದೋಬಸ್ತ್ ಇರಲಿದೆ. ರಾತ್ರಿ ನಿಷೇಧಾಜ್ಞೆಯೂ ಮುಂದುವರೆಯಲಿದೆ ಎಂದರು. ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ್, ಎಎಸ್ಪಿ ಡಾ. ಎಚ್.ಟಿ.ಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts