More

    ಬಸವ ಕೇಂದ್ರದಿಂದ ಒಂದು ತಿಂಗಳು ಚಿಂತನಾ ಕಾರ್ತಿಕ

    ಶಿವಮೊಗ್ಗ: ಬಸವಕೇಂದ್ರದಿಂದ 16ನೇ ವರ್ಷದ ಚಿಂತನಾ ಕಾರ್ತಿಕ-2022 ಶಿವಮೊಗ್ಗ ನಗರ ಮತ್ತು ತಾಲೂಕಿನ ಹಲವೆಡೆ ಅ. 29ರಿಂದ ನ.27ರ ವರೆಗೆ ನಡೆಯಲಿದೆ ಎಂದು ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ತಿಳಿಸಿದರು.
    ಶರಣರ ತತ್ವಗಳನ್ನು ಪಸರಿಸುವ ನಿಟ್ಟಿನಲ್ಲಿ ಚಿಂತನಾ ಕಾರ್ತಿಕ ಆಯೋಜಿಸಿದ್ದು ಒಂದು ತಿಂಗಳ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಅ.29ರಂದು ಸಂಜೆ 6.30ಕ್ಕೆ ಬಸವ ಕೇಂದ್ರದಲ್ಲಿ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಮಾಜಿ ಸಚಿವ ಎಸ್.ಎಸ್.ಪಾಟೀಲ್ ಚಿಂತನಾ ಕಾರ್ತಿಕಕ್ಕೆ ಚಾಲನೆ ನೀಡುವರು. ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ ಅಧ್ಯಕ್ಷತೆ ವಹಿಸುವರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ಉಪಾಧ್ಯಕ್ಷ ಎಚ್.ಎಲ್.ಷಡಾಕ್ಷರಿ, ಅಕ್ಕನ ಬಳಗದ ಅಧ್ಯಕ್ಷೆ ಜಯಮ್ಮ ಕುಬಸದ್ ಮುಖ್ಯ ಅತಿಥಿಗಳಾಗಿರುವರು ಎಂದರು.
    ಅ.30ರಂದು ಬೆಳಗ್ಗೆ 11ಕ್ಕೆ ಮಡಿಕೆ ಚೀಲೂರಿನಲ್ಲಿ ರಂಗಕರ್ಮಿ ಗಣೇಶ್ ಆರ್.ಕೆಂಚನಾಲ, ಸಂಜೆ 6.30ಕ್ಕೆ ಯಲವಟ್ಟಿಯಲ್ಲಿ ಎಂ.ವಿರೂಪಾಕ್ಷಪ್ಪ ಉಪನ್ಯಾಸ ನೀಡುವರು. ಉಳಿದಂತೆ ನ.7ರಂದು ಮಲ್ಲೇಶ್ವರನಗರದಲ್ಲಿ ಉಪನ್ಯಾಸಕ ಕಲೀಂವುಲ್ಲಾ, 8ರಂದು ಸವಳಂಗ ರಸ್ತೆಯ ಕೃಷಿ ನಗರದಲ್ಲಿ ಬಾಣೂರು ಚನ್ನಪ್ಪ, 9ರಂದು ದೇವಕಾತಿಕೊಪ್ಪದಲ್ಲಿ ಡಾ. ಕೆ.ಜಿ.ವೆಂಕಟೇಶ್, 10ರಂದು ಸೋಮಿನಕೊಪ್ಪದಲ್ಲಿ ಡಾ. ಶಂಭು ಬಳಿಗಾರ, 11ರಂದು ಗೋಪಾಲಗೌಡ ಬಡಾವಣೆಯಲ್ಲಿ ಉಪನ್ಯಾಸಕ ಚನ್ನಯ್ಯ ಬಿ. ಮಾರವಳ್ಳಿ, 12ರಂದು ಕೆಎಚ್‌ಬಿ ಕಾಲನಿಯಲ್ಲಿ ಬಾರಂದೂರು ಪ್ರಕಾಶ್ ಉಪನ್ಯಾಸ ನೀಡುವರು ಎಂದರು.
    19ರಂದು ಶರಾವತಿ ನಗರದಲ್ಲಿ ಶೀಲಾ ಸುರೇಶ್, 20ರಂದು ಬಸವಕೇಂದ್ರದಲ್ಲಿ ಡಾ. ಬಿ.ಜಿ.ಧನಂಜಯ, 21ರಂದು ಅಬ್ಬಲಗೆರೆ ರತ್ನಗಿರಿ ಲೇಔಟ್‌ನಲ್ಲಿ ಶ್ರೀರಂಜಿನಿ ದತ್ತಾತ್ರಿ, 23ರಂದು ವಿನೋಬನಗರದಲ್ಲಿ ಅನಿತಾ ಜವಳಿ, 24ರಂದು ತೇವರಚಟ್ನಹಳ್ಳಿಯಲ್ಲಿ ಡಾ. ಎಂ.ಬಸವರಾಜಪ್ಪ, 25ರಂದು ಜಯದೇವ ಬಡಾವಣೆಯಲ್ಲಿ ಡಾ. ಡಿ.ಬಿ.ಶಿವರುದ್ರಪ್ಪ ಉಪನ್ಯಾಸ ನೀಡುವರು. ಈ ಎಲ್ಲ ಉಪನ್ಯಾಸಗಳು ಪ್ರತಿದಿನ ಸಂಜೆ 6.30ಕ್ಕೆ ನಡೆಯಲಿವೆ. ಆಯಾ ಬಡಾವಣೆಯ ಪ್ರಮುಖರು ಆತಿಥ್ಯ ವಹಿಸುವರು. ನ.26ರಂದು ಸಂಜೆ 6.30ಕ್ಕೆ ಸಮಾರೋಪ ನಡೆಯಲಿದೆ ಎಂದು ಹೇಳಿದರು. ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ, ಪ್ರೊ. ಚಂದ್ರಶೇಖರ್, ಎಚ್.ಎನ್.ಮಹಾರುದ್ರ, ರುದ್ರಮುನಿ ಸಜ್ಜನ್, ಜಯಮ್ಮ ಕುಬಸದ್, ಚಂದ್ರಶೇಖರ ತಳಗಿಹಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts