More

    ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗದ ಆಮೀಷ, ಮತ್ತೊಬ್ಬರಿಗೆ ವಂಚನೆ

    ಶಿವಮೊಗ್ಗ: ಉದ್ಘಾಟನೆಗೆ ಸಜ್ಜಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಭದ್ರಾವತಿಯ ವ್ಯಕ್ತಿಯೊಬ್ಬರಿಗೆ 52,600 ರೂ. ವಂಚನೆ ಮಾಡಲಾಗಿದೆ. ಇದರೊಂದಿಗೆ ಒಂದೇ ವಾರದಲ್ಲೇ ಸಿಇಎನ್ ಠಾಣೆಯಲ್ಲಿ ದಾಖಲಾದ ಎರಡನೇ ವಂಚನೆ ಪ್ರಕರಣ ಇದಾಗಿದೆ.
    ಭದ್ರಾವತಿಯ ರಫಿಕ್ ಉದ್ದೀನ್ ಎಂಬುವರು ವಂಚನೆಗೆ ಒಳಗಾದವರು. ರಫೀಕ್ ಅವರು ತಮ್ಮ ಮಗಳಿಗೆ ಇಂಡಿಗೋ ಏರ್‌ಲೈನ್ಸ್ ಪ್ರೈವೇಟ್ ಲಿಮಿಟೆಡ್ ವಿಮಾನಯಾನ ಸಂಸ್ಥೆಯ ಗ್ರೌಂಡ್ ಸ್ಟಾಫ್ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸಲಾಗಿದೆ.
    ದಾಖಲಾತಿ ಶುಲ್ಕ, ಆನ್‌ಲೈನ್ ಸಂದರ್ಶನ ಶುಲ್ಕ, ಯೂನಿಫಾರಂ ಶುಲ್ಕ, ಐಡಿ ಕಾರ್ಡ್ ಶುಲ್ಕ ಸೇರಿದಂತೆ ನಾನಾ ಕಾರಣಗಳನ್ನು ನೀಡಿ ಜನವರಿ 24ರಿಂದ 27ರವರೆಗೆ ಫೋನ್ ಪೇ ಮೂಲಕ 52,600 ರೂ. ಹಾಕಿಸಿಕೊಂಡಿದ್ದಾರೆ. ಮತ್ತಷ್ಟು ಹಣ ಕೇಳಿದಾಗ ಅನುಮಾನಗೊಂಡಿದ್ದು ರಫೀಕ್ ಅವರು ಈ ಬಗ್ಗೆ ಸಿಇಎನ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಕಳೆದ ಮಂಗಳವಾರವಷ್ಟೇ ಹೊಳಲೂರಿನ ಯುವಕನಿಗೆ 70 ಸಾವಿರ ರೂ. ವಂಚಿಸಿರುವುದು ಬೆಳಕಿಗೆ ಬಂದಿತ್ತು.
    ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಉದ್ಯೋಗಾವಕಾಶಗಳಿವೆ ಎಂಬ ಜಾಹೀರಾತು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬಗ್ಗೆ ಸ್ವತಃ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರೇ ಸುಳ್ಳು ಮಾಹಿತಿ ಎಂದು ಸ್ಪಷ್ಟಪಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts