More

    ಮಹಾತ್ಮ ಗಾಂಧೀಜಿ ಜೀವನ ಅರಿಯೋಣ

    ಶಿಗ್ಗಾಂವಿ: ಸತ್ಯ ಮತ್ತು ಅಹಿಂಸೆ ಮಾರ್ಗದಲ್ಲಿ ಬದುಕಿದ ಮಹಾತ್ಮ ಗಾಂಧೀಜಿ ಅವರ ಜೀವನ ಅರಿತರೆ ಸತ್ಯವನ್ನು ಅರಿತುಕೊಂಡಂತೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಹೇಳಿದರು.
    ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.
    ಕುಲಸಚಿವ ಸಿ.ಟಿ. ಗುರುಪ್ರಸಾದ ಮಾತನಾಡಿ, ಹೋರಾಟ, ಅಸಹಕಾರ ಚಳವಳಿ ಮೂಲಕ ದೇಶಕ್ಕೆ ಸ್ವಾತಂತ್ರೃ ತಂದು ಕೊಟ್ಟ ಮಹಾತ್ಮ ಗಾಂಧೀಜಿ ಅವರ ತತ್ವ ಸಿದ್ಧಾಂತಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಅವರ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು.
    ಸಹಾಯಕ ಪ್ರಾಧ್ಯಾಪಕ ಡಾ. ನಾಗರಾಜ ಎಸ್., ಶಹಜಹಾನ್ ಮುದಕವಿ, ಡಾ. ಸುಮಂಗಲಾ ಅತ್ತಿಗೇರಿ, ಡಾ. ಮಲ್ಲಿಕಾರ್ಜುನ ಮಾನ್ಪಡೆ, ಬಸವರಾಜ ಜವಳಗಟ್ಟಿ, ಡಾ. ಎಚ್.ಎಚ್. ನದಾಫ್, ಡಾ. ರಾಜಶೇಖರ ದೊಂಬರಮತ್ತೂರ, ಶಿವಾನಂದ ದೊಡ್ಡಮನಿ, ಅಭಿನಯ ಎಚ್.,ಡಾ. ಅಭಿಲಾಷ ಎಚ್.ಕೆ., ಡಾ. ಶಿಲೀನಾ ಕೋಟೆ, ಗೋವಿಂದಪ್ಪ ತಳವಾರ, ರಾಕೇಶ ಮಾನ್ಪಡೆ, ಶ್ರೀಗುರುಪ್ರಕಾಶ, ಶರಣಪ್ಪ ಮಡಿವಾಳರ, ಸುರೇಶ ಲಮಾಣಿ ಇದ್ದರು.

    Related articles

    Share article

    Latest articles