More

    ಮದುವೆ ದುಂದುವೆಚ್ಚಕ್ಕೆ ಕಡಿವಾಣ ಹಾಕಿ

    ಝಳಕಿ: ಸರಳ ಸಾಮೂಹಿಕ ವಿವಾಹ ಮಾಡಿಕೊಳ್ಳುವ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸಮಾಜದಲ್ಲಿ ಇತರರಿಗೆ ಮಾದರಿಯಾಗುವಂತೆ ಜೀವನ ಮಾಡಬೇಕು. ಸಾಮೂಹಿಕ ವಿವಾಹ ಬಡವರ ಮದುವೆ ಅಲ್ಲ, ಅದು ಭಾಗ್ಯವಂತರ ಮದುವೆ ಎಂದು ಜೈನಾಪುರದ ರೇಣುಕ ಶಿವಾಚಾರ್ಯರು ಹೇಳಿದರು.
    ಶಿಗಣಾಪುರ ಗ್ರಾಮದ ರುದ್ರಮಹಾಶಿವಯೋಗಿಗಳ 17ನೇ ವರ್ಷದ ಜಾತ್ರಾ ಮಹೋತ್ಸದ ಅಂಗವಾಗಿ ಬುಧವಾರ ಹಮ್ಮಿಕೊಂಡ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
    ಸಡಗರದಿಂದ ವಿವಾಹ ಮಾಡಿಕೊಂಡು 3 ದಿನದಲ್ಲಿ ಮದುವೆಗೆ ಮಾಡಿದ ಸಾಲವನ್ನು ತೀರಿಸಲು ನರಕಯಾತನೆ ಮಾಡಬೇಕಾಗುತ್ತದೆ. ಆದ್ದರಿಂದ ಸಾಮೂಹಿಕ ವಿವಾಹದಲ್ಲಿ ತೊಡಗಿ ಸುಖಕರ ಜೀವನ ಸಾಗಿಸಬಹುದು ಎಂದರು.
    ಮಾಜಿ ಶಾಸಕ ವಿಠ್ಠಲ ಕಟಕಧೋಂಡ, ಅಧ್ಯಕ್ಷತೆ ವಹಿಸಿದ್ದ ಬಂಥನಾಳದ ವಿರಕ್ತಮಠದ ವೃಷಭಲಿಂಗ ಮಹಾಸ್ವಾಮಿಗಳು ಮಾತನಾಡಿದರು.
    ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ರಾಜು ಆಲಗೂರ, ಜಿಪಂ ಸದಸ್ಯ ಶಿವಶರಣ ಭೈರಗೊಂಡ, ಚಡಚಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಕೆಎಂಎ್ ಅಧ್ಯಕ್ಷ ಸಂಭಾಜಿರಾವ ಮಿಸಾಳೆ, ತಾಪಂ ಅಧ್ಯಕ್ಷ ಅಣ್ಣಾರಾಯ ಬಿದ್ದರಕೋಟಿ, ಗ್ರಾಪಂ ಸದಸ್ಯ ಸಂತೋಷ ಪಾಟೀಲ, ಅಪ್ಪುಗೌಡ ಪಾಟೀಲ, ರವಿ ಬಿರಾದಾರ, ಪ್ರಕಾಶ ಪಾಟೀಲ, ಸುನೀಲ ಪಾಟೀಲ, ಶ್ರೀಶೈಲ ಪಾಟೀಲ, ಅನೀಲ ಬಿರಾದಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts