More

    ಐಸ್​ಕ್ರೀಮ್​ಗೆ ಇಲಿ ಪಾಷಾಣ ಬೆರೆಸಿ ಆತ್ಮಹತ್ಯೆಗೆ ಯತ್ನಿಸಿದಳು; ಸತ್ತಿದ್ದು ಮಗ ಮತ್ತು ತಂಗಿ…

    ಕೇರಳ: ಆತ್ಮಹತ್ಯೆ ಮಾಡಿಕೊಳ್ಳಲೆಂದು ಮಹಿಳೆಯೊಬ್ಬಳು ಐಸ್​ಕ್ರೀಮ್​ಗೆ ಇಲಿ ಪಾಷಾಣ ಬೆರೆಸಿ ತಿಂದಿದ್ದಾಳೆ. ಆದರೆ ದುರದೃಷ್ಟವಶಾತ್ ಪ್ರಾಣ ಬಿಟ್ಟಿದ್ದು ಮಾತ್ರ ಆಕೆಯ ಮಗ ಹಾಗೂ ತಂಗಿ. ಇದೀಗ ಆತ್ಮಹತ್ಯೆ ಪ್ರಯತ್ನದ ಮೇರೆಗೆ ಆಕೆಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.

    ಕೇರಳದ ಕಾಸರಗೋಡು ಜಿಲ್ಲೆಯ ಕನ್ನಂಗಾಡ್​ನಲ್ಲಿನ ವರ್ಷಾ ಎಂಬ 25 ವರ್ಷದ ಯುವತಿ ಆತ್ಮಹತ್ಯೆಗೆ ಯತ್ನಿಸಿಯೂ ಬದುಕಿದ್ದು, ಆಕೆಯ ಐದು ವರ್ಷದ ಪುತ್ರ ಅದ್ವೈತ್ ಹಾಗೂ 19 ವರ್ಷದ ತಂಗಿ ದೃಶ್ಯ ಮೃತಪಟ್ಟಿದ್ದಾರೆ. ವರ್ಷ ಫೆಬ್ರವರಿ 11ರಂದು ಐಸ್​ ಕ್ರೀಮ್​ ತರಿಸಿ ಅದಕ್ಕೆ ಇಲಿ ಪಾಷಾಣ ಬೆರೆಸಿ ತಿಂದಿದ್ದಳು. ಆದರೆ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಒಂಥರ ಅನಿಸಿದ ಕಾರಣ ಆಕೆ ಕೋಣೆಗೆ ತೆರಳಿ ಮಲಗಿದ್ದಳು. ಆದರೆ ಆ ಬಳಿಕ ಐಸ್​ಕ್ರೀಮ್​ ನೋಡಿದ ಆಕೆಯ ಮಗ ಹಾಗೂ ತಂಗಿ ಇಬ್ಬರೂ ಅದರಲ್ಲಿ ವಿಷ ಬೆರೆಸಿರುವುದು ಗೊತ್ತಿಲ್ಲದೆ ಅದನ್ನು ತಿಂದಿದ್ದರು. ಆ ನಂತರ ಇಬ್ಬರೂ ಹೋಟೆಲ್​ನಿಂದ ಬಿರಿಯಾನಿ ತರಿಸಿ ತಿಂದಿದ್ದರು. ಅದನ್ನು ತಿಂದ ಬಳಿಕ ಅದ್ವೈತ್​ಗೆ ವಾಂತಿ ಬಂದಂತಾಗಿ ಅಸ್ವಸ್ಥಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾಗ್ಯೂಫೆ. 12ರಂದು ಅದ್ವೈತ್ ಕೊನೆಯುಸಿರೆಳೆದಿದ್ದ.

    ಇದನ್ನೂ ಓದಿ: ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!

    ಅದ್ವೈತ್​ ಮರಣದ ಬಳಿಕ ದೃಶ್ಯ ಕೂಡ ಅನಾರೋಗ್ಯಗೊಂಡಿದ್ದು ಆಕೆಯನ್ನೂ ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದರು. ಜೀವನ್ಮರಣ ಹೋರಾಟದಲ್ಲಿದ್ದ ದೃಶ್ಯ ಇಂದು ಕೊನೆಯುಸಿರೆಳೆದಿದ್ದಾಳೆ. ಈ ಮಧ್ಯೆ ವರ್ಷಾ ಸಂಬಂಧಿ ಫೆ. 17ರಂದು ವರ್ಷಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಇಂದು ದೃಶ್ಯ ಮೃತಪಡುತ್ತಿದ್ದಂತೆ ಪೊಲೀಸರು ವರ್ಷಾಳನ್ನು ಬಂಧಿಸಿದ್ದಾರೆ.

    ವಿಚಿತ್ರವೆಂದರೆ ವರ್ಷಾ ವಿಷ ಬೆರೆಸಿದ್ದ ಐಸ್​ಕ್ರೀಮ್​ ತಿಂದರೂ ಅವಳಿಗೆ ಏನೂ ಆಗಿರಲಿಲ್ಲ. ಮಾತ್ರವಲ್ಲ ಆಕೆ ಆತ್ಮಹತ್ಯೆ ಪ್ರಯತ್ನದ ಬಗ್ಗೆ ಮನೆಯವರಿಗೆ ಯಾರಿಗೂ ಹೇಳಿರಲಿಲ್ಲ. ಅದ್ವೈತ್​ ಹಾಗೂ ದೃಶ್ಯ ಬಿರಿಯಾನಿ ತಿಂದ ಬಳಿಕ ಅನಾರೋಗ್ಯಗೊಂಡಿದ್ದರಿಂದ ಬಿರಿಯಾನಿಯಿಂದಲೇ ಹಾಗಾಗಿರಬೇಕು ಎಂದು ಮನೆಯವರು ಭಾವಿಸಿದ್ದರು. ಇಲಿ ಪಾಷಾಣ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುವುದು ಹಾಗೂ ಅದು ವಯಸ್ಕರಲ್ಲಿ ನಿಧಾನವಾಗಿ ಒಳಗಿಂದಲೇ ದುಷ್ಪರಿಣಾಮ ಬೀರಿ ದಿನ ಅಥವಾ ವಾರಗಳ ಬಳಿಕ ಜೀವ ತೆಗೆಯಬಲ್ಲದು ಎಂದು ವಿಷಯ ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ. ವರ್ಷ ತಾಯಿ-ತಂಗಿ ಜತೆ ಇರಲು ತವರಿಗೆ ಆಗಮಿಸಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಂಥ ಕಾರಣವೇನಿತ್ತು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಆಕೆಯ ವಿರುದ್ಧ ಪ್ರಕರಣ ದಾಖಲಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಸಮುದ್ರಕ್ಕೆ ನೆಗೆದ ರಾಹುಲ್​ ಗಾಂಧಿ; ಬಲೆ ಹಾಕುತ್ತಿದ್ದ ಮೀನುಗಾರರೊಂದಿಗೆ ನೀರಲ್ಲಿ ಮೋಜು

    ನಾಡಿದ್ದು ಭಾರತ್ ಬಂದ್​: ಜಿಎಸ್​ಟಿ, ತೈಲ ಬೆಲೆ ಏರಿಕೆ ಇತ್ಯಾದಿ ವಿರುದ್ಧ 8 ಕೋಟಿ ವ್ಯಾಪಾರಸ್ಥರ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts