More

    ಶರವು ಶ್ರೀ ಮಹಾಗಣಪತಿ ದೇವರಿಗೆ ಸಂಭ್ರಮದ ಬ್ರಹ್ಮಕಲಶಾಭಿಷೇಕ

    ಮಂಗಳೂರು: ಇತಿಹಾಸ ಪ್ರಸಿದ್ಧ ಶ್ರೀ ಶರವು ಶ್ರೀ ಶರಭೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮ ಕಲಶಾಭಿಷೇಕವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇ.ಮೂ. ಬಡಾಜೆ ಗೋಪಾಲಕೃಷ್ಣ ತಂತ್ರಿ ಹಾಗೂ ವೇ.ಮೂ. ಪೆರಾರ ಪ್ರಶಾಂತ ಆಚಾರ್ ಪೌರೋಹಿತ್ಯದಲ್ಲಿ ನೆರವೇರಿತು.


    ಬ್ರಹ್ಮ ಕಲಶಾಭಿಷೇಕದ ಮೊದಲು ಶ್ರೀ ದೇವರಿಗೆ 31 ಸಂಖ್ಯೆಯ ಬೇರೆ ಬೇರೆ ದ್ರವ್ಯ ಮಿಳಿತ ರಜತ ಕಲಶಾಭಿಷೇಕ ಜರುಗಿ ಬೆಳಗ್ಗೆ 8:51ರ ಮಿಥುನ ಲಗ್ನ ಸುಮಹೂರ್ತದಲ್ಲಿ ಶ್ರೀ ಮಹಾಗಣಪತಿ ದೇವರಿಗೆ ಪ್ರಧಾನ ಬ್ರಹ್ಮ ಕಲಶಾಭಿಷೇಕವು ನೆರವೇರಿತು. ಆ ಬಳಿಕ ಪ್ರಸನ್ನ ಪೂಜೆ, ಶ್ರೀ ಮಹಾಗಣಪತಿಗೆ ಅಷ್ಟ ದ್ರವ್ಯ ವಿಶೇಷ ನೈವೇದ್ಯ ಪಾಯಸ, ವಿವಿಧ ಬಗೆಯ ಭಕ್ಷ್ಯ, ಕದಳಿ ಬಾಳೆಹಣ್ಣು, ತೆಂಗಿನ ಕಾಯಿಯ ಪಲ್ಲಪೂಜೆ ಸಮರ್ಪಣೆಗೊಂಡು ಶ್ರೀ ಮಹಾಪೂಜೆ ಜರಗಿತು.


    ಈ ಸಂದರ್ಭ ಕ್ಷೇತ್ರದಲ್ಲಿ ಅತಿ ವಿಶಿಷ್ಟವಾದ ಚಂಡಿಕಾ ಹೋಮ ನೆರವೇರಿತು. ಬಳಿಕ ಅನ್ನ ಛತ್ರದಲ್ಲಿ ಪಲ್ಲ ಪೂಜೆಯಾಗಿ ಮಧ್ಯಾಹ್ನ ಸುಮಾರು 5 ಸಹಸ್ರಕ್ಕೂ ಮಿಕ್ಕಿ ಭಕ್ತರು ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ಸಂಜೆ ವಿಶೇಷವಾದ ಶ್ರೀಚಕ್ರ ಪೂಜೆ, ಕಲಶ ಮಂಡಲ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಾಗೇಶ್ ಬಪ್ಪನಾಡು ಮತ್ತು ಬಳಗದವರಿಂದ ನಾಗಸ್ವರ ವಾದನ, ಮಾತೆಯರ ವಿವಿಧ ಭಜನಾ ಮಂಡಳಿಗಳಿಂದ ಹರಿನಾಮ ಸಂಕೀರ್ತನೆ ಹಾಗೂ ತೆಂಕು ತಿಟ್ಟಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಬಳಗ ಕಾಸರಗೋಡು ಇವರಿಂದ ಯಕ್ಷಗಾನ ಬೊಂಬೆಯಾಟ ಜರಗಿತು.


    ಕ್ಷೇತ್ರದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ, ಡಾ.ಸುದೇಶ್ ಶಾಸ್ತ್ರಿ, ಡಾ.ರಾಹುಲ್ ಶಾಸ್ತ್ರಿ, ಪ್ರಮೀಳಾ ಶಾಸ್ತ್ರಿ. ಅಕ್ಷಯ ಶಾಸ್ತ್ರಿ,ಪದ್ಮಾವತಿ ಶಾಸ್ತ್ರಿ, ಶರವು ಗಣೇಶ ಭಟ್, ಅಶ್ವತ್ಥಾಮ ಭಟ್, ರಾಘವೇಂದ್ರ ಭಟ್, ಪ್ರದೀಪ್ ಕುಮಾರ್ ಕಲ್ಕೂರ, ಎಂ.ಬಿ.ಪುರಾಣಿಕ್, ಸುಧಾಕರ ರಾವ್ ಪೇಜಾವರ, ಪ್ರಭಾಕರರಾವ್ ಪೇಜಾವರ, ವಾಸುದೇವ ರಾವ್ ಕುಡುಪು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts