More

    ಸೆನ್ಸೆಕ್ಸ್ 250 ಪಾಯಿಂಟ್ ಜಂಪ್​, ನಿಫ್ಟಿ 12,800ರ ಮೇಲಕ್ಕೆ..

    ಮುಂಬೈ: ಸತತ ಏರಿಕೆ ದಾಖಲಿಸಿ ಸಾರ್ವಕಾಲಿಕ ದಾಖಲೆಯ ಹೆಜ್ಜೆ ಗುರುತು ಮೂಡಿಸುತ್ತ ಬಂದ ಬಿಎಸ್​ಇ ಸೆನ್ಸೆಕ್ಸ್ ಮತ್ತು ಎನ್​ಎಸ್​ಇ ನಿಫ್ಟಿ ಗುರುವಾರ ಕುಸಿತ ದಾಖಲಿಸಿದರೂ, ಶುಕ್ರವಾರದ ವಹಿವಾಟಿನಲ್ಲಿ ಮತ್ತೆ ಏರಿಕೆ ದಾಖಲಿಸಿವೆ. ಸೆನ್ಸೆಕ್ಸ್ ಒಂದೇ ಸಲ 200 ಕ್ಕೂ ಹೆಚ್ಚು ಅಂಶ ಮೇಲೇರಿದರೆ, ನಿಫ್ಟಿ 12,800ರ ಗಡಿ ದಾಟಿದೆ. ಜಾಗತಿಕ ಷೇರುಪೇಟೆಯಲ್ಲೂ ಏರಿಳಿತಗಳ ಮಿಶ್ರ ವಹಿವಾಟು ಕಂಡುಬಂದಿದ್ದು, ಅದರ ಪರಿಣಾಮ ಭಾರತೀಯ ಷೇರುಪೇಟೆಯ ಮೇಲೂ ಆಗಿದೆ ಎನ್ನುತ್ತಿದ್ದಾರೆ ಪರಿಣತರು.

    ಬೆಳಗ್ಗೆ 9.20ಕ್ಕೆ ವಹಿವಾಟು ಆರಂಭವಾಗುತ್ತಲೇ ಸೆನ್ಸೆಕ್ಸ್ 246 ಅಂಶ (0.57%) ಏರಿಕೆಯೊಂದಿಗೆ 43,846.30 ಅಂಶ ತಲುಪಿ ವಹಿವಾಟು ಆರಂಭಿಸಿದೆ. ನಿಫ್ಟಿ ಕೂಡ 72.45 ಅಂಶ (0.57%) ಏರಿಕೆಯೊಂದಿಗೆ 12,844.15 ಅಂಶ ತಲುಪಿ ವಹಿವಾಟು ಮುಂದುವರಿಸಿದೆ. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 282.07 ಅಂಶ (0.65%) ಏರಿಕೆಯೊಂದಿಗೆ ವಹಿವಾಟು ನಡೆಸಿತ್ತು. ಇದೇ ರೀತಿ ನಿಫ್ಟಿ ಕೂಡ 78.45 (0.61%) ಅಂಶ ಏರಿ 12,850.12 ಅಂಶದಲ್ಲಿ ವಹಿವಾಟು ಮುಂದುವರಿಸಿತ್ತು.

    ಇದನ್ನೂ ಓದಿ: ಹನಿಟ್ರ್ಯಾಪಲ್ಲಿ ಬಿಜೆಪಿ ಮುಖಂಡ; ಸ್ವಪಕ್ಷೀಯರಿಂದಲೇ ಬ್ಲ್ಯಾಕ್​ಮೇಲ್, ಚಿಪ್ ಇಟ್ಕೊಂಡು 1 ಕೋಟಿ ರೂ. ಕೇಳಿದ್ರು!

    ಸೆನ್ಸೆಕ್ಸ್ ಪಟ್ಟಿಯಲ್ಲಿ ಬಜಾಜ್ ಫಿನ್​ಸರ್ವ್​ ಗರಿಷ್ಠ ಶೇಕಡ 2 ಲಾಭಾಂಶ ಗಳಿಸಿ ವಹಿವಾಟು ಆರಂಭಿಸಿದರೆ, ಟಾಟಾ ಸ್ಟೀಲ್​, ಟೈಟಾನ್, ಬಜಾಜ್ ಫೈನಾನ್ಸ್​, ಎಚ್​ಡಿಎಫ್​ಸಿ ಎರಡೂ ಷೇರುಗಳು, ಕೊಟಾಕ್ ಬ್ಯಾಂಕ್ ಷೇರುಗಳು ಲಾಭಾಂಶದಲ್ಲಿ ವಹಿವಾಟು ಶುರುಮಾಡಿಕೊಂಡಿವೆ. ಆದರೆ, ಐಸಿಐಸಿಐ ಬ್ಯಾಂಕ್​, ಒಎನ್​ಜಿಸಿ, ಏಕ್ಸಿಸ್ ಬ್ಯಾಂಕ್​, ಎಸ್​ಬಿಐ ಮತ್ತು ಇಂಡಸ್ಇಂಡ್ ಬ್ಯಾಂಕುಗಳ ಷೇರುಗಳು ನಷ್ಟದಲ್ಲಿ ವಹಿವಾಟು ಶುರುಮಾಡಿವೆ. (ಏಜೆನ್ಸೀಸ್)

    ಸೆನ್ಸೆಕ್ಸ್ 580 ಅಂಶ ಕುಸಿತ, ನಿಫ್ಟಿ 12,800ಕ್ಕಿಂತ ಕೆಳಕ್ಕೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts