More

    ಹಿರಿಯ ನಾಗರಿಕರಿಂದ ಧರಣಿ ಸತ್ಯಾಗ್ರಹ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹುಬ್ಬಳ್ಳಿ ಮಿನಿ ವಿಧಾನಸೌಧದ ಎದುರು ನಿವೃತ್ತ ನೌಕರರು ಮತ್ತು ಹಿರಿಯ ನಾಗರಿಕರು ಸೋಮವಾರ ಧರಣಿ ಸತ್ಯಾಗ್ರಹ ನಡೆಸಿದರು.

    ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಆಯೋಜಿಸಿದ್ದ ಧರಣಿ ಸತ್ಯಾಗ್ರಹದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಡೇರಿಸಬಹುದಾದ ಬೇಡಿಕೆಗಳ ಪ್ರತ್ಯೇಕವಾದ ಭಿತ್ತಿ ಪತ್ರ ವಿತರಿಸಿ ಘೊಷಣೆ ಕೂಗಲಾಯಿತು.

    ಸಂಘದ ರಾಜ್ಯಾಧ್ಯಕ್ಷ ಬಿ.ಎ. ಪಾಟೀಲ ಮಾತನಾಡಿ, ಪ್ರತಿಯೊಬ್ಬ ಹಿರಿಯ ನಾಗರಿಕನಿಗೆ ಪ್ರತಿ ತಿಂಗಳು 10,000 ರೂ. ಸಹಾಯ ಧನ ನೀಡಬೇಕು. ಎಲ್ಲ ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ವಿಜ್ಞಾನ ಕಾಲೇಜು ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕವಾದ, ಉಚಿತವಾದ ಚಿಕಿತ್ಸಾ ವಿಭಾಗ ಆರಂಭಿಸಬೇಕು. ಎಲ್ಲ ಪೊಲೀಸ್ ಠಾಣೆಗಳಲ್ಲಿ ಹಿರಿಯ ನಾಗರಿಕರ ಸಮಿತಿ ರಚಿಸಬೇಕು. ಹಿರಿಯ ನಾಗರಿಕರ ದೌರ್ಜನ್ಯಗಳನ್ನು ತಡೆಗಟ್ಟಲು ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

    ಎಲ್ಲ ಹಿರಿಯ ನಾಗರಿಕರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು. ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಹಿರಿಯ ನಾಗರಿಕರ ಭವನ ಕಟ್ಟಲು ಬಜೆಟ್​ನಲ್ಲಿ ಹಣ ಒದಗಿಸಬೇಕು ಎಂದು ಹೇಳಿದರು.

    ಧರಣೇಂದ್ರ ಜವಳಿ, ಎಂ.ಪಿ. ಕುಂಬಾರ, ಎಸ್. ಎಂ. ಕೊಳೂರ, ಆರ್.ಟಿ. ದೊಡಮನಿ, ಪಿ.ಬಿ. ಹಿರೇಮಠ, ಎಸ್.ಎಂ. ಬಿದರಿ, ಡಿ.ಟಿ. ಪಾಟೀಲ, ಸುನಂದಾ ಬೆನ್ನೂರ, ಜಯಲಕ್ಷ್ಮೀ ಉಮಚಗಿ, ವಿಠ್ಠಲ್ ಖೈರೆ, ಎಂ.ಡಿ. ನದಾಫ ಮುಂತಾದವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts