More

    ನಿಗದಿತ ದರದಲ್ಲಿ ಮಾರಾಟ ಮಾಡಿ

    ಲಕ್ಷ್ಮೇಶ್ವರ: ರಾಸಾಯನಿಕ ಗೊಬ್ಬರ ಮತ್ತು ಇತರ ಕೃಷಿ ಪರಿಕರಗಳನ್ನು ನಿಗದಿತ ದರದಲ್ಲಿಯೇ ಮಾರಾಟ ಮಾಡಬೇಕು. ಇದಕ್ಕೆ ತಪ್ಪಿದ್ದಲ್ಲಿ ಅಂತವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕ ರಫೀಕ್ ಕಾಂಟ್ರ್ಯಾಕ್ಟರ್ ಎಚ್ಚರಿಕೆ ನೀಡಿದರು.

    ಪಟ್ಟಣದಲ್ಲಿ ಬೀಜ, ಗೊಬ್ಬರ ಮಾರಾಟಗಳ ಅಂಗಡಿಗಳಿಗೆ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕೃಷಿ ಪರಿಕರ ಮಾರಾಟಗಾರರಿಗೆ ಸೂಚನೆ ನೀಡಿದರು.

    ರಸಗೊಬ್ಬರಗಳ ದರ ಈ ನಡುವೆ ಏರಿಕೆಯಾಗಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರ ಸಬ್ಸಿಡಿ ಹೆಚ್ಚಿಸಿದ್ದರಿಂದ ಗೊಬ್ಬರದ ದರ ಯತಾಸ್ಥಿತಿಯಾಗಿದೆ. ಈಗಾಗಲೇ ಕೃಷಿ ಇಲಾಖೆ ಗೊಬ್ಬರಗಳ ದರಗಳನ್ನು ತಿಳಿಸಿದ್ದು, ಅದರಂತೆ ರೈತರಿಗೆ ಮಾರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಅಧಿಕ ಬೆಲೆ ಪಡೆಯಬಾರದು. ಅಂತಹ ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಹಳೆಯ ಗೊಬ್ಬರ ದಾಸ್ತಾನು ಇದ್ದರೂ, ನಿರ್ದಿಷ್ಟಪಡಿಸಿದ ದರದಲ್ಲಿ ಮಾರಾಟ ಮಾಡಬೇಕು. ಗೊಬ್ಬರದ ಹೊಸ ದಾಸ್ತಾನು ತರಿಸಿ ಹೊಸ ದರದಲ್ಲಿ ಮಾರಾಟ ಮಾಡಿ ಎಂದು ವ್ಯಾಪಾರಸ್ಥರಿಗೆ ತಿಳಿಸಲಾಗಿದೆ. ಅಲ್ಲದೆ ರಾಸಾಯನಿಕಗಳು, ಕೀಟನಾಶಕಗಳನ್ನು ನಿರ್ದಿಷ್ಟಪಡಿಸಿದ ದರದಲ್ಲಿ ಮಾರಾಟ ಮಾಡಲು ಸೂಚಿಸಲಾಗಿದೆ. ಗೊಬ್ಬರದ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡುವಂತೆ ಪೂರೈಕೆದಾರರಿಗೆ ತಿಳಿಸಲಾಗಿದೆ. ರೈತರಿಗೆ ಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.

    ಈ ಸಂದರ್ಭದಲ್ಲಿ ಗೊಬ್ಬರ ಅಂಗಡಿ ಮಾಲೀಕರೊಬ್ಬರು, ಹುಬ್ಬಳ್ಳಿ-ಲಕ್ಷ್ಮೇಶ್ವರ ಮಾರ್ಗ ಬಂದ್ ಆಗಿದ್ದು, ಗೊಬ್ಬರ ದಾಸ್ತಾನು ಬರುತ್ತಿಲ್ಲ. ಬೇಡಿಕೆ ಹೆಚ್ಚಿದರೆ ಪೂರೈಸಲು ಕಷ್ಟವಾಗುತ್ತದೆ. ಸುತ್ತಿ ಬಳಸಿ ಬಂದರೆ ಸಾರಿಗೆ ವೆಚ್ಚ ಹೆಚ್ಚಾಗುತ್ತಿರುವುದರಿಂದ ಪೂರೈಕೆದಾರರು ಹೆಚ್ಚಿನ ವಾಹನ ಬಾಡಿಗೆ ಹಣ ಕೇಳುತ್ತಿದ್ದಾರೆ. ಆದರೆ, ಪಟ್ಟಣದ ವ್ಯಾಪಾರಸ್ಥರು ನಿಗದಿತ ದರಕ್ಕೆ ಗೊಬ್ಬರ, ಬೀಜ ಮಾರಾಟ ಮಾಡುತ್ತಿದ್ದೇವೆ. ಈ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಹುಬ್ಬಳ್ಳಿ ರಸ್ತೆ ಸಂಪರ್ಕ ಆದಷ್ಟು ಶೀಘ್ರ ಪ್ರಾರಂಭಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಸಾಗಣೆ ವೆಚ್ಚ ಹೆಚ್ಚಿದ್ದರೂ, ಯಾವೊಂದು ಅಂಗಡಿಯಲ್ಲಿ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡಿ, ರೈತರ ಮೇಲೆ ಒತ್ತಡ ಹೇರುವುದಿಲ್ಲ ಎಂದರು.

    ಕೃಷಿ ಸಹಾಯಕ ನಿರ್ದೇಶಕ ಮಹೇಶಬಾಬು ಎಚ್.ಎಂ., ಕೃಷಿ ಅಧಿಕಾರಿ ಎಂ.ಎಚ್. ಹಣಗಿ, ಡಿ.ಕೆ. ಅಚಲಕರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts