More

    ‘ಮುತ್ತಿಟ್ಟು ಕರೊನಾ ಸೋಂಕು ನಿವಾರಿಸುತ್ತೇನೆ ಬನ್ನಿ’ ಎಂದು ಕರೆಯುತ್ತಿದ್ದ ಬಾಬಾ ಕೊವಿಡ್​-19ನಿಂದಲೇ ಸಾವು

    ನವದೆಹಲಿ: ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ಸ್ವಯಂ ಘೋಷಿತ ದೇವಮಾನವನೊಬ್ಬ ತಾನು ಕರೊನಾವನ್ನು ಗುಣವಾಗಿಸುತ್ತೇನೆ ಎಂದು ಹೇಳುತ್ತ…ಈಗ ಅದರಲ್ಲೇ ಸಾವನ್ನಪ್ಪಿದ್ದಾನೆ.

    ಈತನ ಹೆಸರು ಅಸ್ಲಾಂ ಬಾಬಾ. ವಶೀಕರಣ ವಿದ್ಯೆಗಳನ್ನು ಅಭ್ಯಾಸ ಮಾಡಿದ್ದ. ತನಗೆ ತಂತ್ರ-ಮಂತ್ರಗಳು ಗೊತ್ತು. ನನ್ನ ಶಕ್ತಿಯಿಂದ ನಾನು ಕರೊನಾ ರೋಗಿಗಳ ಕೈ ಮೇಲೆ ಮುತ್ತಿಡುವ ಮೂಲಕ ಅವರಲ್ಲಿನ ಸೋಂಕು ನಿವಾರಣೆ ಮಾಡುತ್ತೇನೆ ಎಂದು ಹೇಳಿದ್ದ. ಅದನ್ನು ನಂಬಿ ಕೆಲವರು ಬಾಬಾ ಬಳಿ ಹೋಗಿದ್ದರು.

    ಅಸ್ಲಾಂ ಬಾಬಾನಿಗೆ ಜೂ.3ರಂದು ಕರೊನಾ ಇರುವುದು ದೃಢಪಟ್ಟಿತ್ತು. ಇದೀಗ ಅವನು ಮೃತಪಟ್ಟಿದ್ದಾನೆ. ಈಗ ಅವನ ಸುಮಾರು 20 ಕ್ಕೂ ಹೆಚ್ಚು ಬೆಂಬಲಿಗರಲ್ಲಿ ಕರೊನಾ ದೃಢಪಟ್ಟಿದೆ. ಇದನ್ನೂ ಓದಿ: ಗರ್ಭಿಣಿ ಆನೆ ಸಾವಿನಲ್ಲಿ ಮುಸ್ಲಿಮರ ಹೆಸರು: ಪತ್ರಕರ್ತನಿಂದ ಕ್ಷಮೆಯಾಚನೆ

    ಬಾಬಾ ಸಾವಿನ ಬಳಿಕ ಅವರ ಸಂಪರ್ಕಕ್ಕೆ ಬಂದಿದ್ದ 50 ಮಂದಿಯನ್ನು ಟ್ರೇಸ್​ ಮಾಡಲಾಗಿದೆ. ಅವರನ್ನೆಲ್ಲ ಕ್ವಾರಂಟೈನ್​ ಮಾಡಲಾಗಿದೆ. ಈ ಬಾಬಾ ನಯಾಪುರ ಎಂಬಲ್ಲಿ ವಾಸವಾಗಿದ್ದ. ಹಾಗಾಗಿ ಅಲ್ಲಿನ 150ಕ್ಕೂ ಹೆಚ್ಚು ಜನರನ್ನು ಸದ್ಯ ಕ್ವಾರಂಟೈನ್​ ಮಾಡಲಾಗಿದ್ದು, ಸ್ಕ್ರೀನ್​ ಟೆಸ್ಟ್​​ಗೆ ಒಳಪಡಿಸಲಾಗಿದೆ. ಆ ಪ್ರದೇಶವನ್ನು ಕ್ವಾರಂಟೈನ್​ ಝೋನ್​ ಎಂದು ಪರಿಗಣಿಸಲಾಗಿದೆ ಎಂದು ರತ್ಲಂ ಎಸ್​​ಪಿ ಗೌರವ್​ ತಿವಾರಿ ತಿಳಿಸಿದ್ದಾರೆ.

    ಕರೊನಾ ವಿರುದ್ಧ ಹೋರಾಟಕ್ಕೆ ಮಧ್ಯಪ್ರದೇಶ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದರೆ, ಮತ್ತೊಂದೆಡೆ ರತ್ಲಂ ಮತ್ತು ಸುತ್ತಮುತ್ತ ಪ್ರದೇಶದ ಹಲವು ಜನರು ಈ ಬಾಬಾನನ್ನು ನಂಬಿ ಹೋಗಿದ್ದರು. ಮೂಢನಂಬಿಕೆಗಳ ಮೊರೆ ಹೋಗಿದ್ದರು. ಇದೀಗ ಅದೇ ಕರೊನಾ ಹೆಚ್ಚಲು ಕಾರಣವಾಗಿದೆ. ಸದ್ಯ ಸುತ್ತಲಿನ ಏರಿಯಾಗಳಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್ ಮಾಡಲಾಗಿದೆ. (ಏಜೆನ್ಸೀಸ್​) ಇದನ್ನೂ ಓದಿ: 2019ರ ಜೂನ್​ 7ರಂದು ಮೇಘನಾ ಹಾಕಿದ್ದ ಇನ್ಸ್ಟಾಗ್ರಾಂ ಪೋಸ್ಟ್​ನ್ನು ಈ ಜೂ.7ರಂದು ಕ್ರೂರ ವಿಧಿ ನಿಜ ಮಾಡಿತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts