More

    ಸೆಪ್ಟಂಬರ್​ 5ರಂದು ಶಾಲಾ- ಕಾಲೇಜುಗಳ ಮರು ಆರಂಭ; ಎಲ್ಲಿ? ಯಾರು ಹೇಳಿದ್ದು?

    ಬೆಂಗಳೂರು: ರಾಜ್ಯದಲ್ಲಿ ಶಾಲಾ – ಕಾಲೇಜುಗಳ ಆರಂಭದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್​ಕುಮಾರ್​ ಸ್ಪಷ್ಟಪಡಿಸಿದ್ದಾರೆ.

    ಸೆಪ್ಟಂಬರ್​ ಶಾಲೆಗಳನ್ನು ಆರಂಭಿಸಲಾಗುತ್ತದೆ ಎಂದು ಹೇಳಲಾಗಿತ್ತಾರೂ, ಸರ್ಕಾರದ ಮಟ್ಟದಲ್ಲಿ ಅಂಥ ಚರ್ಚೆಗಳು ನಡೆದಿಲ್ಲ. ಕರೊನಾ ಸಂಕಷ್ಟ ಸಹಜ ಸ್ಥಿತಿಗೆ ಬಂದ ಬಳಿಕ ಈ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ ಎಂದೂ ಸುರೇಶ್​ಕುಮಾರ್​ ಹೇಳಿದ್ದಾರೆ.

    ಇದನ್ನೂ ಓದಿ; ಸೆಪ್ಟಂಬರ್​ನಲ್ಲಿ ಶುರುವಾಗುತ್ತಾ ಶಾಲೆ; ಸಚಿವ ಸುರೇಶ್‌ಕುಮಾರ್ ಹೇಳಿದ್ದೇನು? 

    ಈ ನಡುವೆ, ಸೆಪ್ಟಂಬರ್​ 5ರಿಂದ ಶಾಲಾ- ಕಾಲೇಜುಗಳನ್ನು ಆರಂಭಿಸುವುದಾಗಿ ಆಂಧ್ರ ಪ್ರದೇಶ ಸರ್ಕಾರ ಘೋಷಿಸಿದೆ. ಈ ಬಗ್ಗೆ ಶಿಕ್ಷಣ ಸಚಿವರೇ ಮಾಹಿತಿ ನೀಡಿದ್ದಾರೆ.

    ಆಗಸ್ಟ್​ ಅಂತ್ಯಕ್ಕೆ ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಈ ಹಿಂದೆಯೇ ಸಚಿವ ಆದಿಮುಲಪು ಸುರೇಶ್​ ಹೇಳಿದ್ದರು. ಈಗ ಸೆ.5 ದಿನಾಂಕ ಪ್ರಕಟಿಸಿದ್ದಾರೆ.

    ಇದನ್ನೂ ಓದಿ; ವರ್ಷಾಂತ್ಯವರೆಗೆ ಶಾಲಾ- ಕಾಲೇಜು ಆರಂಭ ಅನುಮಾನ…? ಆನ್​​ಲೈನ್​ ಕ್ಲಾಸ್​ಗಳೇ ಅನಿವಾರ್ಯ 

    ಆಂಧ್ರಪ್ರದೇಶದಲ್ಲಿ ಒಟ್ಟು 53,724 ಕೋವಿಡ್​ ಪ್ರಕರಣಗಳಿದ್ದು, ಇದರಲ್ಲಿ 28,800 ಸಕ್ರಿಯ ಪ್ರಕರಣಗಳಾಗಿವೆ. 24,228 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದರೆ, 696 ಜನರು ಮೃತಪಟ್ಟಿದ್ದಾರೆ.

    https://www.vijayavani.net/he-used-matrimony-sites-to-cheat-women/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts