More

    ಸಾವಿತ್ರಿಬಾಯಿ ಫುಲೆ ಎಂದಿಗೂ ಸ್ಮರಣೀಯ

    ಅಥಣಿ: ಮಹಿಳಾ ಸಮಾನತೆಗೆ ಧ್ವನಿ ಎತ್ತಿದ ಸಾವಿತ್ರಿಬಾಯಿ ಫುಲೆ ಅವರು ಎಂದಿಗೂ ಚಿರಸ್ಮರಣೀಯ ಎಂದು ಕೇಂದ್ರ ಸಾಹಿತ್ಯ ಆಕಾಡೆಮಿ ಸದಸ್ಯ ಡಾ.ಬಾಳಾಸಾಹೇಬ ಲೋಕಾಪುರ ಅವರು ಸ್ಮರಿಸಿದ್ದಾರೆ.

    ಪಟ್ಟಣದ ಪ್ರಧಾನಮಂತ್ರಿ ಉದ್ಯೋಗ ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಜೆ.ಪಿ.ದೊಡಮನಿ ಅವರ ಅನುವಾದಿತ ಎಂಟನೆಯ ಪುಸ್ತಕ ‘ಸಾವಿತ್ರಿಬಾಯಿ ಫುಲೆ ಕೃತಿ’ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ, ಅನಾಚಾರಗಳನ್ನು ದೂರಮಾಡಿದ ಫುಲೆ ಅವರ ಕುರಿತು ಜೆ.ಪಿ.ದೊಡಮನಿ ಅವರು ಅನುವಾದಿಸಿ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ. ಶಿಕ್ಷಣದಿಂದ ಜಾತಿಕಂದಕ ದಾಟಲು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ ಸಾವಿತ್ರಿಬಾಯಿ ಫುಲೆ ಅವರು ಅಂದಿನ ಕಾಲದ ಮಹಾನ್ ಸಮಾಜ ಸುಧಾರಕರ ಅಗ್ರಪಂಕ್ತಿಯಲ್ಲಿ ಪ್ರಮುಖರು ಎಂದರು.

    ಕವಲಗುಡ್ಡದ ಅಮರೇಶ್ವರ ಮಹಾರಾಜರು ಮಾತನಾಡಿ, ಇಂದಿನ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಸಮಯ ವ್ಯರ್ಥಮಾಡುವುದನ್ನು ಬಿಟ್ಟು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪಾಲಕರು ಸಹ ಮಕ್ಕಳಿಗೆ ಶಿಕ್ಷಣದೊಂದಿಗೆ ಸಾಹಿತ್ಯ, ಧಾರ್ಮಿಕತೆಯ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು. ಉಪನ್ಯಾಸಕಿ ಪ್ರಿಯಂವದಾ ಅಣೆಪ್ಪನವರ ಮಾತನಾಡಿ, ಸ್ತ್ರೀ ಮರ್ಯಾದೆಯನ್ನು ಉಳಿಸಿ ಇಂದು ಮಹಿಳಾ ಕುಲವೇ ತಲೆಯೆತ್ತಿ ಬದುಕುವಂತೆ ಮಾಡಿದ ಶ್ರೇಯಸ್ಸು ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ ಎಂದರು.

    ಡಾ.ಜೆ.ಪಿ.ದೊಡಮನಿ, ಅರುಣಕುಮಾರ ಯಲಗುದ್ರಿ, ಪ್ರಕಾಶ ಮಹಾಜನ, ಪ್ರವೀಣಕುಮಾರ ತುಬಚಿ, ಪ್ರಭಾವತಿ ಬೋರಗಾವ, ಶಶಿಕಾಂತ ದೊಡಮನಿ, ಶಿವಪುತ್ರ ಯಾದವಾಡ, ಎಸ್.ಕೆ.ಹೊಳೆಪ್ಪನವರ, ಅಪ್ಪಾಸಾಹೇಬ ಅಲಿಬಾದಿ, ಮಲ್ಲಿಕಾರ್ಜುನ ಕನಶೆಟ್ಟಿ ಮತ್ತಿತರರು ಸಮಾರಂಭದಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts