More

    ಸಾವಿತ್ರಿಬಾಯಿ ಫುಲೆ ಶೋಷಿತ ಮಹಿಳೆಯರ ದನಿ

    ಬೀರೂರು: ಹೆಣ್ಣು ಮಕ್ಕಳಿಗೆ ಶಿಕ್ಷಣ ನಿರಾಕರಿಸುತ್ತಿದ್ದ ಕಾಲದಲ್ಲಿ ಸಮಾಜವನ್ನು ಎದುರಿಸಿ ಹೆಣ್ಣು ಮಕ್ಕಳಿಗಾಗಿಯೇ ಶಾಲೆ ತೆರೆದು ಅಕ್ಷರದ ಜ್ಞಾನವನ್ನು ಉಣಬಡಿಸಿದ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಎಂದು ಬೀರೂರು ಶೈಕ್ಷಣಿಕ ವಲಯದ ಬಿಇಒ ಎಚ್.ಗಂಗಾಧರ್ ಬಣ್ಣಿಸಿದರು.

    ಪಟ್ಟಣದ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ಶಾಲೆ ತೆರೆಯುವ ವಿಷಯದಲ್ಲಿ ಅನೇಕ ನೋವು, ಅವಮಾನ ಉಂಟಾದರೂ ಮೆಟ್ಟಿ ನಿಂತರು ಎಂದರು.
    ಇಂದು ಶಿಕ್ಷಣ ಮತ್ತು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಮಾನ ಹಕ್ಕು ಪಡೆಯಲು ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರೇ ಕಾರಣ. ಅಂದು ಸಮಾಜದಲ್ಲಿ ತುಂಬಿದ್ದ ಮೌಢ್ಯ, ಕಂದಾಚಾರ, ಶೋಷಣೆಯಂತಹ ಸಮಸ್ಯೆಗಳ ವಿರುದ್ಧ ತನ್ನ ಪತಿಯೊಂದಿಗೆ ಹೋರಾಟ ಮಾಡಿ ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ವ್ಯಕ್ತಿ. ಹಾಗಾಗಿ ಸಾವಿತ್ರಿಬಾಯಿ ಫುಲೆ ಅವರಿಗೆ ಇಂದಿನ ಮಹಿಳೆಯರು ಎಂದಿಗೂ ಚಿರಋಣಿ ಆಗಿರಬೇಕು ಎಂದು ಹೇಳಿದರು.
    ಕ್ಷೇತ್ರ ಸಮನ್ವಯ ಅಧಿಕಾರಿ ಶೇಖರಪ್ಪ, ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷೆ ಸೀತಾಲಕ್ಷ್ಮೀ, ಉಪಾಧ್ಯಕ್ಷೆ ಜಿ.ಟಿ.ಕುಸುಮಾ, ಸುವರ್ಣಾ ಒಡೆಯರ್, ಕಾರ್ಯದರ್ಶಿ ಎಚ್.ಆರ್.ಕವಿತಾ, ಗೌರಾವಾಧ್ಯಕ್ಷೆ ಸೌಭಾಗ್ಯಮ್ಮ, ಶಿಕ್ಷಕಿಯರಾದ ಶಂಕರಮ್ಮ, ಶಶಿರೇಖಾ, ರೂಪಾ, ಬಳ್ಳಿಗನೂರು ಪ್ರೌಢಶಾಲಾ ಮುಖ್ಯಶಿಕ್ಷಕಿ ಪ್ರೇಮಕುಮಾರಿ, ಸವಿತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts