More

    ಉಚಿತ ಸಾಮೂಹಿಕ ವಿವಾಹ ನ.20ರಂದು


    ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ದಿವಾಕರ್ ಮಾಹಿತಿ

    ಸಂಡೂರು: ಪಟ್ಟಣದಲ್ಲಿ ನ.20ರಂದು 306 ಜೋಡಿ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ದಿವಾಕರ್ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ನ.19ರಂದು ಸಂಜೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿವಾಹ ಕಾರ್ಯಕ್ರಮಕ್ಕೆ ಮಂತ್ರಾಲಯದ ಶ್ರೀಸುಬುಧೇಂದ್ರ ತೀರ್ಥರು, ಶ್ರೀಆನಂದ್ ಗುರೂಜಿ, ಶ್ರೀಪ್ರಸನ್ನಾನಂದ ಪುರಿ ಸ್ವಾಮೀಜಿ, ಶ್ರೀಪ್ರಭು ಸ್ವಾಮೀಜಿ, ಶ್ರೀ ಗಂಗಾಧರ ದೇವರು, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಸಂಡೂರು ರಾಜ ಮನೆತನದ ಕಾರ್ತಿಕ್ ಘೋರ್ಪಡೆ ಇತರರು ಪಾಲ್ಗೊಳ್ಳವರು. ವಿವರಗಳಿಗಾಗಿ 9380496196, 6360086277, 7259558249ಗೆ ಕರೆ ಮಾಡಿ ಅ.20 ರೊಳಗೆ ಸಾಮೂಹಿಕ ವಿವಾಹಕ್ಕೆ ನೋಂದಣಿ ಮಾಡಿಸಲು ತಿಳಿಸಿದರು.

    ಎನ್‌ಎಂಡಿಸಿ ನೇಮಕಾತಿ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ ಇದೊಂದು ರಾಜಕೀಯ ಪ್ರೇರಿತ ಪ್ರಹಸನವೆಂದರು. ಎನ್‌ಎಂಡಿಸಿಯ 150 ಪೋಸ್ಟ್‌ಗಳಲ್ಲಿ ಬಳ್ಳಾರಿ ಜಿಲ್ಲೆಗೆ 50 ಪೋಸ್ಟ್ ಕೊಟ್ಟಿದ್ದಾರೆ. ಅದರಲ್ಲೂ ಸಂಡೂರು ತಾಲೂಕಿಗೆ 40 ಪೋಸ್ಟ್ ಕೊಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಬಳ್ಳಾರಿ 10, ನರಸಿಂಗಾಪುರ 16, ಭುಜಂಗನಗರ 1, ರಣಜೀತ್ ಪುರ 1, ಎನ್‌ಎಂಡಿಸಿ 7, ಸಂಡೂರು 7, ಹುಬ್ಬಲಗಂಡಿ 2, ಕುಡಿತಿನಿ 2 ಹುದ್ದೆಗಳನ್ನು ನೀಡಲಾಗಿದೆ ಎಂದರು. ಸಾವಿರಾರು ಹುದ್ದೆಗಳಿರುವ ಜಿಂದಾಲ್ ಬಗ್ಗೆ ಇವರು ಯಾಕೆ ಪ್ರಸ್ತಾಪಿಸುತ್ತಿಲ್ಲ ಮಾಜಿ ಸಚಿವ ಸಂತೋಷ್ ಲಾಡ್ ಕಾರ್ಮಿಕ ಸಚಿವರಾಗಿದ್ದಾಗ ತೋರಣಗಲ್‌ನಲ್ಲಿ ಉದ್ಯೋಗ ಮೇಳವನ್ನು ಮಾಡಿದರು. ಎಷ್ಟು ಜನಕ್ಕೆ ಕೆಲಸ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

    ಬುಡಕಟ್ಟು ಜನಾಂಗದ ಮಹಿಳೆ ದ್ರೌಪದಿ ಮುರ್ಮು ರಾಷ್ಟ್ರಪತಿಯಾದ ಹಿನ್ನೆಲೆಯಲ್ಲಿ ಇವರ 10 ಸಾವಿರಕ್ಕೂ ಹೆಚ್ಚು ಭಾವಚಿತ್ರ ಗಳನ್ನು ತಾಲೂಕಾದ್ಯಂತ ವಿತರಿಸಲಾಗುತ್ತಿದೆ ಎಂದರು. ಕೃಷ್ಣಾನಗರ ತಿಪ್ಪೇಸ್ವಾಮಿ, ಎಚ್.ಅಂಬರೀಷ್, ಬೊಪ್ಪಕಾನ್ ಆನಂದ, ಬಿ.ಚಂದ್ರಶೇಖರ್, ಓಂಕಾರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts