More

    ರೋಗಿಗಳ ಸುರಕ್ಷತೆಗೆ ಆದ್ಯತೆ ನೀಡಿ; ಕ್ಷೇತ್ರ ಆರೋಗ್ಯಾಧಿಕಾರಿ ಶಿವಪ್ಪ ಸಲಹೆ

    ಸಂಡೂರು: ಚಿಕಿತ್ಸೆ ಪಡೆಯುವ ರೋಗಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಕ್ಷೇತ್ರ ಆರೋಗ್ಯಾಧಿಕಾರಿ ಶಿವಪ್ಪ ಹೇಳಿದರು.

    ಹೊಸ ದರೋಜಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ರೋಗಿಗಳ ಸುರಕ್ಷತೆ ದಿನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಅನವಶ್ಯ ತಿರುಗಾಡಿಸುವುದು, ಆರೈಕೆಯಲ್ಲಿ ನಿರ್ಲಕ್ಷ್ಯ, ತಾರತಮ್ಯ ಮಾಡುವುದು ಸಲ್ಲ. ಹಾನಿಗಳನ್ನು ತಡೆಗಟ್ಟುವುದು ಮತ್ತು ಹಾನಿಗಳನ್ನು ಕಡಿಮೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ರೋಗಿಗಳ ಜತೆ ಉತ್ತಮ ಬಾಂಧವ್ಯ ಹೊಂದಿ, ಅವರಲ್ಲಿ ಭರವಸೆ ಮೂಡಿಸಿದರೆ ಬೇಗ ಗುಣಮುಖರಾಗುತ್ತಾರೆ ಎಂದರು.

    ಕಾರ್ಯಕ್ರಮದಲ್ಲಿ ನಿ-ಕ್ಷಯ್ ಮಿತ್ರರಾಗಲು ಗ್ರಾಪಂ ಸದಸ್ಯರಿಗೆ ಮನವರಿಕೆ ಮಾಡಿಕೊಡಲಾಯಿತು ಸರ್ಕಾರದ ನಿಯಮದಂತೆ ನೋಂದಣಿ ಮಾಡಿಕೊಂಡು ಕ್ಷಯ ರೋಗಿಗಳಿಗೆ ಅಹಾರ ಸಾಮಗ್ರಿಗಳನ್ನು ಕೊಡಿಸಲು ಒಪ್ಪಿಗೆ ಸೂಚಿಸಿದರು. ಕರ್ನಾಟಕ ಹೆಲ್ತ್ ಪ್ರೊಮೋಷನಲ್ ಟ್ರಸ್ಟ್ ಬೆಂಗಳೂರು ಇವರಿಂದ ಸಾರವರ್ಧಕ ಶಕ್ತಿ ವಿಟಾ ಪಾಕೇಟ್‌ಗಳನ್ನು ಕ್ಷಯರೋಗಿಗಳಿಗೆ ವಿತರಿಸಲಾಯಿತು.

    ಗ್ರಾಪಂ ಸದಸ್ಯರಾದ ಹೊನ್ನೂರಸ್ವಾಮಿ, ತಿಮ್ಮಪ್ಪ, ಬಾಬಯ್ಯ, ಮೆಹಬೂಬ್ ಬಾಷಾ, ಕೆಎಚ್‌ಪಿಟಿ ಪ್ರದೀಪ್, ರಾಜು, ಮಂಗಳಗೌರಿ, ಆರೋಗ್ಯ ನಿರೀಕ್ಷಣಾಧಿಕಾರಿ ಇಸ್ಮಾಯಿಲ್, ಸತ್ಯಮ್ಮ, ಸಿಎಚ್‌ಒ ಎರ‌್ರಿಸ್ವಾಮಿ, ರೇಣುಕಾ, ಆಶಾ ಕಾರ್ಯಕರ್ತೆ ಲತಾ, ಶ್ರೀದೇವಿ, ಮಹಾಂತಮ್ಮ, ಅಂಜಿನಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts