More

    ಚುನಾವಣೆ ಕರ್ತವ್ಯಕ್ಕೆ ನಿಯೋಜಿಸದಿರಿ

    ಸಂಡೂರು: ಮುಂಬರುವ ಲೋಕಸಭಾ ಚುನಾವಣೆ ಕರ್ತವ್ಯದಿಂದ ಅನಾರೋಗ್ಯ ಸೇರಿ ಇತರ ಸಮಸ್ಯೆಗಳಿರುವ ಶಿಕ್ಷಕರಿಗೆ ವಿನಾಯಿತಿ ನೀಡುವಂತೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಶುಕ್ರವಾರ ಬಿಇಒ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿತು.

    ಸಂಘದ ಅಧ್ಯಕ್ಷೆ ಕೆ.ಪ್ರೇಮಾ ಮಾತನಾಡಿ, ಲೊಕಸಭಾ ಚುನಾವಣೆ ಕರ್ತವ್ಯ ನಿರ್ವಹಿಸಲು ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವಶಿಕ್ಷಕ-ಶಿಕ್ಷಕಿಯರಿಗೆ ವಿನಾಯಿತಿ ನೀಡಬೇಕು. ತಾಲೂಕಿನ ಪ್ರತಿ ಭಾಗಗಳಿಗೆ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಹಾಜರಾಗುವ ದಿನಗಳಂದು ಸೂಕ್ತ ಸಾರಿಗೆ ವ್ಯವಸ್ಥೆ ಮಾಡಬೇಕು. 55 ವರ್ಷ ಮೇಲ್ಪಟ್ಟ ಶಿಕ್ಷಕರು, 50 ವರ್ಷ ವಯಸ್ಸಿನ ಶಿಕ್ಷಕಿಯರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು, ಅನಾರೋಗ್ಯದಿಂದ ಬಳಲುತ್ತಿರುವರಿಗೆ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಬಾರದು. ಅನುದಾನವಿಲ್ಲದೆ ಶಾಲೆಯ ಮುಖಶಿಕ್ಷಕರಿಗೆ ಬಿಸಿಯೂಟ ಆರ್ಥಿಕ ಹರೆಯಾಗುತ್ತಿದೆ. ಮೊಟ್ಟೆ, ಬಾಳೆಹಣ್ಣು ಅನುದಾನವನ್ನು ಪ್ರತಿ ತಿಂಗಳು ಮುಂಗಡವಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

    ಬಿಇಒ ಡಾ.ಐ.ಆರ್.ಅಕ್ಕಿ ಮಾತನಾಡಿ, ಒಂದು ವರ್ಷದ ಮಗು ಹೊಂದಿದ್ದರೆ ಮಗುವಿನ ಪ್ರಮಾಣ ಪತ್ರ, 6 ತಿಂಗಳು ಗರ್ಭಿಣಿ ಇರುವ ಮಹಿಳೆಯರು ಅಗತ್ಯ ವೈದ್ಯಕೀಯ ವರದಿ ನೀಡಬೇಕು. 6 ತಿಂಗಳಲ್ಲಿ ನಿವೃತ್ತಿ ಹೊಂದುತ್ತಿರುವ ಶಿಕ್ಷಕರು ಮಾಹಿತಿ ನೀಡಬೇಕು, ತೀವ್ರವಾದ ಕಾಯಿಲೆಗೆ ತುತ್ತಾಗಿದ್ದರೆ ವೈದ್ಯಕೀಯ ದಾಖಲೆ ಸಲ್ಲಿಸಬೇಕು. ಅಂಗವಿಕಲರಿದ್ದಲ್ಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಬೇಕು. ಬಿಎಲ್‌ಒ ಆಗಿರುವ ಶಿಕ್ಷಕರು ಈಗಾಗಲೇ ಚುನಾವಣೆ ಎಚ್.ಆರ್.ಎಂ.ಎಸ್‌ಗೆ ಕೇಳಿದ ನಮೂನೆಯಲ್ಲಿ ದಾಖಲೆ ಸಲ್ಲಿಸಬೇಕು. ಎಲ್ಲವನ್ನೂ ಫೆ.15ರೊಳಗಾಗಿ ಕಚೇರಿಗೆ ಸಲ್ಲಿಸಬೇಕು ಎಂದು ತಿಳಿಸಿದರು.

    ಸಂಘದ ಪ್ರಮುಖರಾದ ಅನ್ನಪೂರ್ಣ, ಶೋಭಾ, ತೇಜಸ್ವಿ, ಪದ್ಮಾವತಿ, ಕಾಮಾಕ್ಷಮ್ಮ, ಅರುಣಾ, ಭಾರತಿ, ಗಂಗಾ ಪಾಟೀಲ್, ನೀಲಾಂಬಿಕೆ, ವಾಣಿ ರಘು, ಬಡ್ತಿ ಮುಖ್ಯಶಿಕ್ಷಕರ ಸಂಘದ ಕೆ.ಬಿ.ಪ್ರಕಾಶ್, ಯರ‌್ರಿಸ್ವಾಮಿ, ಬಿ.ಎಂ.ಶಶಿಧರ, ಉಮೇಶ್, ಶ್ರೀನಿವಾಸ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts