More

    ಸಂದೇಶಖಾಲಿ ಪ್ರಕರಣ: ಇಡಿಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ

    ಕೋಲ್ಕತ್ತ: ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಕಲ್ಕತ್ತಾ ಹೈಕೋರ್ಟ್ ಬುಧವಾರ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಅನುಮತಿ ನೀಡಿದೆ.

    ಇದನ್ನೂ ಓದಿ: ಎಣ್ಣೆ ಬಾಟಲ್​ಗೆ ಹೀರೋಯಿನ್​ ಪೂಜೆ!: ಖ್ಯಾತ ಜ್ಯೋತಿಷಿ ಹೀಗೇಕೆ ಮಾಡಿಸಿದ್ರು? ವಿವರ ಇಲ್ಲಿದೆ..

    ನ್ಯಾಯಾಲಯದ ಆದೇಶದ ಹೊರತಾಗಿಯೂ ಅಮಾನತುಗೊಂಡಿರುವ ಟಿಎಂಸಿ ನಾಯಕ ಶಾಜಹಾನ್ ಶೇಖ್ ಕಸ್ಟಡಿಯನ್ನು ಸಿಬಿಐಗೆ ಹಸ್ತಾಂತರಿಸಲು ರಾಜ್ಯ ಪೊಲೀಸರು ವಿಫಲವಾಗಿದ್ದಕ್ಕೆ ನಿಂದನೆ ಅರ್ಜಿ ಸಲ್ಲಿಸಲು ಇಡಿಗೆ ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದೆ

    ಇಡಿ ಅಧಿಕಾರಿಗಳ ಮೇಲಿನ ಗುಂಪು ದಾಳಿಯ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಹೈಕೋರ್ಟ್ ಮಂಗಳವಾರ ಆದೇಶಿಸಿತ್ತು.

    ಇಡಿಯನ್ನು ಪ್ರತಿನಿಧಿಸಿದ ಡೆಪ್ಯುಟಿ ಸಾಲಿಸಿಟರ್ ಜನರಲ್ ಧೀರಜ್ ತ್ರಿವೇದಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಅನುಮತಿ ಕೋರಿದರು. ಶೇಖ್ ಕಸ್ಟಡಿಯನ್ನು ಸಿಬಿಐಗೆ ವರ್ಗಾಯಿಸುವಲ್ಲಿ ಕಾಲಹರಣ ಮಾಡಿರುವುದಕ್ಕೆ ತುರ್ತು ವಿಚಾರಣೆಗೆ ಒತ್ತಾಯಿಸಿದರು.

    ಪಡಿತರ ಹಗರಣದ ತನಿಖೆಗೆ ಸಂಬಂಧಿಸಿದಂತೆ ಜನವರಿ 5 ರಂದು ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯಲ್ಲಿರುವ ಶೇಖ್ ಮನೆಯ ಆವರಣದಲ್ಲಿ ಇಡಿ ಅಧಿಕಾರಿಗಳ ಮೇಲೆ ಗುಂಪು ದಾಳಿ ನಡೆದ ನಂತರ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ಹೈಕೋರ್ಟ್ ಈ ಹಿಂದೆ ಆದೇಶಿಸಿತ್ತು.

    ಈ ನಡುವೆ ಸಂದೇಶಖಾಲಿ ಪ್ರಕರಣ ಕುರಿತು ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತುರ್ತು ವಿಚಾರಣೆ ಕೋರಿ ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂಕೋರ್ಟ್​ ಮೆಟ್ಟಿಲೇರಲು ತೀರ್ಮಾನಿಸಿದೆ.

    ಆದರೆ ಸಿಐಡಿಯು ಇದೇ ದಿನ ಸಂಜೆ 4:30 ರೊಳಗೆ ಷಹಜಹಾನ್ ಮತ್ತು ಎಲ್ಲಾ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ನ್ಯಾಯಾಲಯ ಉಲ್ಲೇಖಿಸಿದೆ. ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ಅವರ ವಿಭಾಗೀಯ ಪೀಠವು ನಜತ್ ಮತ್ತು ಬಸಿರ್‌ಹತ್ ಪೊಲೀಸ್ ಠಾಣೆಗಳ ಮೂರು ಎಫ್‌ಐಆರ್‌ಗಳನ್ನು ಕೇಂದ್ರೀಯ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಆದೇಶಿಸಿದೆ.

    ನ್ಯಾಯಾಲಯದ ಆದೇಶದ ನಂತರ ಸಿಬಿಐ ಅಧಿಕಾರಿಗಳು ಕೇಂದ್ರ ಪಡೆಗಳೊಂದಿಗೆ ಷಹಜಹಾನ್‌ನನ್ನು ಇರಿಸಲಾಗಿರುವ ಭಬಾನಿ ಭಾಬನ್‌ಗೆ ತಲುಪಿದ್ದರು. ಆದರೆ 2ಗಂಟೆ ಕಾದ ನಂತರ ಬರಿಗೈಯಲ್ಲಿ ಮರಳಬೇಕಾಯಿತು ಎಂದು ಸಿಬಿಐ ಮೂಲಗಳು ತಿಳಿಸಿವೆ.

    ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಿಐಡಿಯು ಷಹಜಹಾನ್ ನನ್ನು ಹಸ್ತಾಂತರಿಸಲು ನಿರಾಕರಿಸಿತು. ಬಹುಕೋಟಿ ಪಡಿತರ ವಿತರಣಾ ಹಗರಣಕ್ಕೆ ಸಂಬಂಧಿಸಿದಂತೆ ಜನವರಿ 5 ರಂದು ಇಡಿ ಅಧಿಕಾರಿಗಳು ಷಹಜಹಾನ್ ಮನೆ ಮೇಲೆ ದಾಳಿ ಮಾಡಲು ಹೋದಾಗ ಗುಂಪು ದಾಳಿ ಮಾಡಿತ್ತು.

    ರಾಮ್​ಚರಣ್​ ಜೋಡಿಯಾಗಿ ಜಾಹ್ನವಿ..ಅಧಿಕೃತವಾಗಿ ಪ್ರಕಟಿಸಿದ ತಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts