ಅರ್ಜುನ್ ಸರ್ಜಾ ನಿರ್ದೇಶನದ, ನಿರಂಜನ್ ಸುಧೀಂದ್ರ, ಐಶ್ವರ್ಯಾ ಅರ್ಜುನ್ ಅಭಿನಯದ ‘ಸೀತಾ ಪಯಣ’ ಪ್ರೇಮಿಗಳ ದಿನದಂದು (ಫೆ..14) ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ನಟ ಧ್ರುವ ಸರ್ಜಾ ಕೂಡ ಅತಿಥಿ ಪಾತ್ರದಲ್ಲಿದ್ದಾರೆ. ಧ್ರುವ ಇರುವ ‘ಬಸವಣ್ಣ’ ಎಂದು ಸಾಗುವ ರಿಲೀಸ್ ಮಾಡಲಾಗಿದೆ. ಭರತ್ ಜನನಿ ರಚಿಸಿರುವ ಹಾಡಿಗೆ ಅನೂಪ್ ರುಬೆನ್ ಸಂಗೀತ ಸಂಯೋಜಿಸಿದ್ದು, ನಕಾಶ್ ಅಜೀಜ್, ಕೀರ್ತನಾ ಧ್ವನಿಯಾಗಿದ್ದಾರೆ. ‘ಮಾಸ್ತಿಗುಡಿ’ ಬಳಿಕ ನಟಿ ಅಮೂಲ್ಯ ‘ಪೀಕಬೂ’ ಮೂಲಕ ಸ್ಯಾಂಡಲ್‌ವುಡ್‌ಗೆ ರಿ-ಎಂಟ್ರಿಯಾಗಿದ್ದು ಗೊತ್ತೇ ಇದೆ. ಮಂಜು ಸ್ವರಾಜ್ ನಿರ್ದೇಶನದ ಈ ಚಿತ್ರದಲ್ಲಿ ಅಮೂಲ್ಯ ಜೋಡಿಯಾಗಿ ‘ಹೊಂದಿಸಿ ಬರೆಯಿರಿ’ ನಟ ಶ್ರೀರಾಮ್ ಅಭಿನಯಿಸಲಿದ್ದಾರೆ. ಅವರ ಪಾತ್ರವನ್ನು ಸ್ವತಃ ಅಮೂಲ್ಯ ಅವರೇ ಪರಿಚಯಿಸಿದ್ದಾರೆ.