

ಬೆಂಗಳೂರು: ಯುವ ನಿರ್ದೇಶಕ ವೈಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿರುವ ಸಿನಿಮಾ "ಲಾರ್ಡ್ ಗಾಗ'. ಟೈಟಲ್ ಹೇಳುವಂತೆ ಇದೊಂದು ಕಲ್ಟ್ ಚಿತ್ರವಾಗಿದ್ದು, ಪ್ರೀತಿ, ಪ್ರೇಮ, ಪ್ರಣಯ, ಭಾವನೆ, ವ್ಯಸನ ಹಾಗೂ ಆಯ್ಕೆಯ ಅಂಶಗಳಿವೆ. ಈ ಚಿತ್ರದಲ್ಲಿ "ಹೆಡ್ಬುಷ್' ನಿರ್ದೇಶಕ ಶೂನ್ಯ ನಾಯಕನಾಗಿದ್ದು, ಅವರಿಗೆ ಸ್ವರೂಪಿಣಿ, ದಿಶಾ ಇಬ್ಬರು ಜೋಡಿಯಾಗಿದ್ದಾರೆ. ಸದ್ದಿಲ್ಲದೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡವು ಇದೀಗ ರಿಲೀಸ್ಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ.
"ರಿವರ್ಸ್ ಸ್ಕ್ರೀನ್ಪ್ಲೇಯಲ್ಲಿ ಚಿತ್ರ ಸಾಗುತ್ತದೆ. ರೊಮ್ಯಾಂಟಿಕ್ ಜತೆಗೆ ಸೈಕಾಲಜಿಕಲ್ ಥ್ರಿಲ್ಲರ್ ಮೂಲಕ ಕಥೆಯನ್ನು ನಿರೂಪಿಸಿದ್ದೇವೆ. ಇದೊಂದು ಕಾಲಾತೀತ ಚಿತ್ರವಾಗಿದ್ದು, ಅಹಂಕಾರವೇ ಕೇಂದ್ರಿತವಾಗಿದೆೆ' ಎಂದು ನಿರ್ದೇಶಕ ವೈ.ಕೆ. ಮಾಹಿತಿ ನೀಡುತ್ತಾರೆ. ಉಡುಪಿ, ಗೋಕರ್ಣ, ಹಾಸನ ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಸದ್ಯ ಪೋಸ್ಟ್- ಪ್ರೊಡಕ್ಷನ್ ಕೆಲಸಗಳು ಕೊನೆಯ ಹಂತದಲ್ಲಿದ್ದು, ಶ್ರೀದಲ್ಲೆ ಚಿತ್ರ ಸೆನ್ಸಾರ್ಗೆ ಹೋಗಲಿದೆ. ಇನ್ನು "ಲಾರ್ಡ್ ಗಾಗ' ಚಿತ್ರವನ್ನು ಕನ್ನಡದ ಜತೆಗೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ, ಭೋಜಪುರಿಯಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ಅಂದುಕೊಂಡಂತಾದರೆ, 2027ರ ಮಾರ್ಚ್ಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.