More

    ಸಮುದಾಯಕ್ಕೆ ಸಿಕ್ಕಿಲ್ಲ ಸ್ಥಾನಮಾನ: ವಿಶ್ವಕರ್ಮ ಸಮಾಜದ ರಾಜ್ಯ ಅಧ್ಯಕ್ಷ ಉಮೇಶ್ ಬೇಸರ

    ರಾಮನಗರ: ರಾಜಕಾರಣದಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಇದುವರೆಗೂ ಪ್ರಾತಿನಿಧ್ಯ ಲಭಿಸದಿರುವುದು ಬೇಸರದ ಸಂಗತಿ ಎಂದು ವಿಶ್ವಕರ್ಮ ಸಮಾಜದ ರಾಜ್ಯ ಅಧ್ಯಕ್ಷ ಬಿ.ಉಮೇಶ್ ಬೇಸರ ವ್ಯಕ್ತಪಡಿಸಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕಚೇರಿ ಸಂಕೀರ್ಣದಲ್ಲಿ ನಡೆದ ವಿಶ್ವಕರ್ಮಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯಲ್ಲಿ ಮಾತನಾಡಿದರು.

    ಭೂಮಿಯ ಮೇಲೆ ಸ್ವರ್ಗವನ್ನು ಸೃಷ್ಟಿಸುವ ಕಲಾ ನೈಪುಣ್ಯತೆ ಮತ್ತು ನಮ್ಮ ನಾಡಿದ ಸಾಂಸ್ಕೃತಿಕ ಪರಂಪರೆಗೆ ಕೊಡುಗೆ ನೀಡಿರುವ ವಿಶ್ವಕರ್ಮ ಜನಾಂಗ ಇಂದಿಗೂ ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ ಎಂದರು.

    ರಾಜ್ಯದಲ್ಲಿ ಸುಮಾರು 40 ಲಕ್ಷ ವಿಶ್ವಕರ್ಮ ಸಮುದಾಯದ ಜನರಿದ್ದರೂ ರಾಜಕೀಯ ಸ್ಥಾನಮಾನ ಸಿಕ್ಕದಿರುವುದು ನೋವಿನ ಸಂಗತಿ, ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಆರ್ಥಿಕವಾಗಿ ಶೇ.50ರಷ್ಟು ರಿಯಾಯಿತಿ ದೊರಕುವಂತಾಗಬೇಕು ಎಂದರು. ಜಿಲ್ಲಾ ಕೇಂದ್ರದಲ್ಲಿ ಸಮುದಾಯದವರು ಕಾರ್ಯಕ್ರಮ ನಡೆಸಲು ಡಿ.ದೇವರಾಜು ಅರಸು ಭವನ ಅಥವಾ ವಿಶ್ವಕರ್ಮ ಸಮಾಜ ಭವನ ನಿರ್ಮಾಣಕ್ಕೆ ಯಾರೂ ಮುಂದಾಗಿಲ್ಲ. ಮಾಡಿದ ಮನವಿಗಳಿಗೂ ಮನ್ನಣೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಭವನ ನಿರ್ಮಾಣಕ್ಕಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಉಮೇಶ್ ತಿಳಿಸಿದರು.

    ಕನ್ನಡ ಪ್ರಾಧ್ಯಾಪಕ ಡಾ.ಅಂಕನಹಳ್ಳಿ ಪಾರ್ಥ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಚಂದ್ರಶೇಖರ್, ವಿಶ್ವ ಕರ್ಮ ಸಮಾಜದ ರಾಮನಗರ ತಾಲೂಕು ಅಧ್ಯಕ್ಷ ಪಿ.ಲಿಂಗಾಚಾರ್, ಪ್ರಧಾನ ಕಾರ್ಯದರ್ಶಿ ಎಸ್. ಶ್ರೀನಿವಾಸಮೂರ್ತಿ, ವಿಶ್ವಕರ್ಮ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಉಮೇಶ್, ಸಂಚಾಲಕ ಪ್ರಭುಚನ್ನಬಸವಚಾರ್, ಖಜಾಂಚಿ ರಮೇಶ್, ನಿರ್ದೇಶಕ ಪ್ರಭಾಕರ್ ಮುಂತಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts