More

    ನಿಮ್ಮನ್ನು ಎಂದಾದರೂ ಅರ್ಜುನ್​ ಔಟ್​ ಮಾಡಿದ್ದಾರೆಯೇ? ಸಚಿನ್​ ಕೊಟ್ಟ ಉತ್ತರ ವೈರಲ್​

    ನವದೆಹಲಿ: ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರ ಪುತ್ರ ಅರ್ಜುನ್​ ತೆಂಡೂಲ್ಕರ್, ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​)ಗೆ ಪದಾರ್ಪಣೆ ಮಾಡಿರುವುದು ಸಚಿನ್​ ಅವರ ಅಭಿಮಾನಿಗಳಿಗೆ ಬಹಳ ಖುಷಿ ತರಿಸಿದೆ. ಮುಂಬೈ ಇಂಡಿಯನ್ಸ್​ ಪರ ಆಡಿದ ಮೊದಲ ಪಂದ್ಯದಲ್ಲೇ ಬೌಲಿಂಗ್​ ಮೂಲಕ ಅರ್ಜುನ್ ಗಮನ ಸೆಳೆದರು.

    ಶುಕ್ರವಾರ ಸಚಿನ್​ ಅವರು ಟ್ವಿಟರ್​ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ಸಂವಾದ ನಡೆಸಿದರು. ಈ ವೇಳೆ ಅಭಿಮಾನಿಗಳು ಪ್ರಶ್ನೆಗಳ ಮಹಾಪೂರವನ್ನೇ ಹರಿಸಿದರು. ಎಲ್ಲ ಪ್ರಶ್ನೆಗಳ ನಡುವೆ ಅರ್ಜುನ್​ ಕುರಿತಾದ ಪ್ರಶ್ನೆ ಎಲ್ಲರ ಗಮನ ಸೆಳೆಯಿತು.

    ಇದನ್ನೂ ಓದಿ: ಹೊಟ್ಟೆಪಾಡಿಗಾಗಿ ಸಾಬೂನು ಮಾರಲು ಬಿಡದ ಕಾಮುಕರು: ವಿಡಿಯೋ ಮೂಲಕ ನಟಿ ಐಶ್ವರ್ಯಾ ಬೇಸರ

    ಒಮ್ಮೆ ಲಾರ್ಡ್ಸ್‌ನಲ್ಲಿ

    ಅರ್ಜುನ್​ ಎಂದಾದರೂ ನಿಮ್ಮನ್ನು ಔಟ್​ ಮಾಡಿದ್ದಾರೆಯೇ? ಎಂದು ಸಚಿನ್​ ಅವರನ್ನು ಅಭಿಮಾನಿಯೊಬ್ಬ ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರ ನೀಡಿದ ಸಚಿನ್​, ಹೌದು, ಒಮ್ಮೆ ಲಾರ್ಡ್ಸ್‌ನಲ್ಲಿ ಆದರೆ, ಅರ್ಜುನ್‌ನನ್ನು ನೆನಪಿಸಬೇಡ! ಎಂದು ಉತ್ತರಿಸಿದ್ದಾರೆ. ಸಚಿನ್​ ಉತ್ತರ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

    ಒಂದು ವಿಕೆಟ್​​

    ಅಂದಹಾಗೆ ಅರ್ಜುನ್​ ಎಡಗೈ ಬೌಲರ್​ ಮತ್ತು ಬ್ಯಾಟರ್​ ಆಗಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್​ ಸರಣಿಯಲ್ಲಿ ಈವರೆಗೂ 5 ಓವರ್​ ಎಸೆದಿರುವ ಅರ್ಜುನ್​ ಒಂದು ವಿಕೆಟ್​ ಕಬಳಿಸಿದ್ದಾರೆ. ಆದರೆ, ಬ್ಯಾಟಿಂಗ್​ ಅವಕಾಶ ಇನ್ನು ಸಿಕ್ಕಿಲ್ಲ. ಗಂಟೆಗೆ 120 ಕಿ.ಮೀ ವೇಗದಲ್ಲಿ ಅರ್ಜುನ್​ ಬೌಲ್​ ಮಾಡುತ್ತಾರೆ.

    ಅರ್ಜುನ್​ ಅವರನ್ಉ 30 ಲಕ್ಷ ರೂ.ಗೆ ಮುಂಬೈ ಇಂಡಿಯನ್ಸ್​ ತಂಡ 2022ರಲ್ಲಿ ನಡೆದ ಐಪಿಎಲ್​ ಹರಾಜಿನಲ್ಲಿ ಖರೀದಿ ಮಾಡಿದೆ. ಇನ್ನೊಂದೆಡೆ ಸಚಿನ್​ ಅವರು ಐಪಿಎಲ್​ನಲ್ಲಿ 78 ಪಂದ್ಯಗಳನ್ನು ಆಡಿದ್ದಾರೆ ಮತ್ತು 34.84 ಸರಾಸರಿಯಲ್ಲಿ 2334 ರನ್ ಗಳಿಸಿದ್ದಾರೆ. ಅವರು ಒಂದು ಶತಕ ಮತ್ತು 13 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

    ಇದನ್ನೂ ಓದಿ: ಯುಪಿಐಗೆ ಸಂದ ಜಯ: ಡಿಜಿಟಲ್ ಪಾವತಿಯಲ್ಲಿ ಭಾರತಕ್ಕೆ ಅಗ್ರಸ್ಥಾನ

    ಆಲ್​ ದಿ ಬೆಸ್ಟ್​

    ಅರ್ಜುನ್ ತೆಂಡೂಲ್ಕರ್​ ಅವರ ಐಪಿಎಲ್ ಚೊಚ್ಚಲ ಸಂದರ್ಭದಲ್ಲಿ, ಸಚಿನ್ ಟ್ವಿಟರ್‌ನಲ್ಲಿ ಹೃದಯಸ್ಪರ್ಶಿ ಸಂದೇಶವನ್ನು ಹಂಚಿಕೊಂಡಿದ್ದರು. ಅರ್ಜುನ್, ಇಂದು ನೀವು ಕ್ರಿಕೆಟಿಗರಾಗಿ ನಿಮ್ಮ ಪಯಣದಲ್ಲಿ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದ್ದೀರಿ. ನೀವು ಆಟಕ್ಕೆ ಬೇಕಾದ ಗೌರವವನ್ನು ನೀಡುವುದನ್ನು ಮುಂದುವರಿಸುತ್ತೀರಿ ಮತ್ತು ಆಟವೂ ಕೂಡ ನಿಮಗೆ ಹಿಂತಿರುಗಿ ನೀಡುತ್ತದೆ ಎಂದು ನನಗೆ ತಿಳಿದಿದೆ. ನೀವು ಇಲ್ಲಿಗೆ ತಲುಪಲು ತುಂಬಾ ಶ್ರಮಿಸಿದ್ದೀರಿ ಮತ್ತು ನೀವು ಇದನ್ನು ಮುಂದುವರಿಸುತ್ತೀರಿ ಎಂದು ನನಗೆ ಖಾತ್ರಿಯಿದೆ. ಸುಂದರವಾದ ಪ್ರಯಾಣ ಆರಂಭವಾಗಿದೆ. ಆಲ್ ದಿ ಬೆಸ್ಟ್ ಎಂದು ಸಚಿನ್​ ಮಗನಿಗೆ ಶುಭ ಹಾರೈಸಿದ್ದಾರೆ. (ಏಜೆನ್ಸಿಸ್​)

    ಹಿಂದು ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವಕ! ಕಾರಣ ಹೀಗಿದೆ….

    ಕನ್ನಡ ಸಂತ ಗಳಗನಾಥ: ಇಂದು ಪುಣ್ಯಸ್ಮರಣೆ

    ಚಾರ್​ಧಾಮ್ ಯಾತ್ರೆಗೆ ಇಂದು ಚಾಲನೆ; ಯಾತ್ರಿಕರಿಗೆ ಇಲ್ಲಿದೆ ಸಂಕ್ಷಿಪ್ತ ಚಿತ್ರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts