More

    ಸಚಿನ್​ಗೆ ನನ್ನ ಬಗ್ಗೆ ನಂಬಿಕೆ ಇದೆ; ಬಿಜೆಪಿ ಅವರು ಅವರ ಹಾದಿ ತಪ್ಪಿಸಿ ಸರ್ಕಾರ ಕೆಡವಲು ಯತ್ನಿಸಿತು

    ಜೈಪುರ: ತಮ್ಮ ವಿರುದ್ಧ ಬಂಡಾಯ ಎದ್ದಿದ್ದು, ಇದೀಗ ಪಕ್ಷಕ್ಕೆ ಮರಳಿರುವ ಸಚಿನ್​ ಪೈಲಟ್​ ಅವರಿಗೆ ಮೊದಲಿನಿಂದಲೂ ನನ್ನ ಬಗ್ಗೆ ನಂಬಿಕೆ ಇತ್ತು. ಅವರ ಈ ಕ್ರಮದಿಂದ ನನ್ನ ಬಗ್ಗೆ ಅಷ್ಟೇ ಅಲ್ಲ, ಪಕ್ಷದ ಹೈಕಮಾಂಡ್​ ಬಗ್ಗೆಯೂ ಅವರಿಗೆ ನಂಬಿಕೆ ಇದೆ ಎನ್ನುವುದು ಸಾಬೀತಾಗಿದೆ ಎಂದು ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಹೇಳಿದ್ದಾರೆ.

    ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಬಗ್ಗೆ ಸಚಿನ್​ಗೆ ನಂಬಿಕೆ ಇದ್ದ ಹೊರತಾಗಿಯೂ ಬಿಜೆಪಿಯ ಅವರು ಸಚಿನ್​ ಅವರ ಹಾದಿ ತಪ್ಪಿಸಿದರು. ಅಲ್ಲದೆ, ನಮ್ಮ ಸರ್ಕಾರವನ್ನು ಉರುಳಿಸಲು ಯತ್ನಿಸಿದರು ಎಂದು ಆರೋಪಿಸಿದರು.

    ಸರ್ಕಾರವನ್ನು ಕೆಡವಲು ಬಿಜೆಪಿ ತನ್ನೆಲ್ಲ ಶಕ್ತಿಸಾಮರ್ಥ್ಯಗಳನ್ನು ಬಳಸಿತು. ಆದರೆ, ನಮ್ಮ ಪಕ್ಷದ ಒಬ್ಬೇ ಒಬ್ಬ ಶಾಸಕನನ್ನೂ ತನ್ನೆಡೆಗೆ ಸೆಳೆದುಕೊಳ್ಳಲು ಅದಕ್ಕೆ ಸಾಧ್ಯವಾಗಲಿಲ್ಲ ಎಂದು ಹೇಳಿದರು. ಜೈಸಲ್ಮೇರ್​ನಲ್ಲಿ ನಿಗದಿಯಾಗಿದ್ದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

    ತಮ್ಮಲ್ಲಿ ಅಚಲ ನಂಬಿಕೆಯಿಟ್ಟು ಸರ್ಕಾರ ಉರುಳುದಂತೆ ನೋಡಿಕೊಳ್ಳುವ ಮೂಲಕ ಹೊಸ ಇತಿಹಾಸ ಬರೆದ ಎಲ್ಲ ಶಾಸಕರನ್ನೂ ಅಭಿನಂದಿಸಿದ ಅಶೋಕ್​ ಗೆಹ್ಲೋಟ್​, ತಮ್ಮ ಕೊನೆಯುಸಿರಿನವರೆಗೂ ಈ ಎಲ್ಲ ಶಾಸಕರಿಗೆ ಆಭಾರಿ ಆಗಿರುವುದಾಗಿ ಹೇಳಿದರು.

    ಇದನ್ನೂ ಓದಿ: ಪಾಂಚೋಲಿ ಕೊರಳಿಗೆ ದಿಶಾ ಆತ್ಮಹತ್ಯೆ ಪ್ರಕರಣ!; ದೂರು ದಾಖಲಿಸಿದ ಸೂರಜ್​

    ಬಿಜೆಪಿ ಅವರ ಕುದುರೆ ವ್ಯಾಪಾರದ ಹೊರತಾಗಿಯೂ ನಮ್ಮ ಪಕ್ಷದ ಯಾವೊಬ್ಬ ಶಾಸಕರೂ ಮಾರಾಟವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿತ್ತು. ಈ ಜವಾಬ್ದಾರಿಯನ್ನು ನಾನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದು ತಿಳಿಸಿದರು.

    ಮುಖ್ಯಮಂತ್ರಿಯಾಗಿ ನನ್ನ ವಿರುದ್ಧ ಅಸಮಾಧಾನಗೊಂಡಿರುವ ಶಾಸಕರೆಲ್ಲರನ್ನೂ ಸಮಾಧಾನಿಸುವುದು ನನ್ನ ಜವಾಬ್ದಾರಿಯಾಗಿದೆ. ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಬಂಡಾಯ ಶಾಸಕರ ಅಸಮಾಧಾನಗಳನ್ನು ಬಗೆಹರಿಸಲು ಸಮಿತಿಯೊಂದನ್ನು ರಚಿಸಿದ್ದಾರೆ. ಆ ಸಮಿತಿಯ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳನ್ನು ಆಧರಿಸಿ, ಮುಂದೆ ಸಾಗಬೇಕಾದ ದಾರಿಯನ್ನು ನಿರ್ಧರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

    ಸೋಮವಾರದಂದು ಪಕ್ಷದ ಹೈಕಮಾಂಡ್​ ಅನ್ನು ಭೇಟಿಯಾಗಿದ್ದ ಸಚಿನ್​ ಪೈಲಟ್​ ತಮ್ಮೆಲ್ಲ ಅಸಾಮಾಧಾನಗಳನ್ನು ಹೇಳಿಕೊಂಡು, ಇದನ್ನು ಪರಿಹರಿಸುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಹೈಕಮಾಂಡ್​ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಇದರಿಂದಾಗಿ ಅಂದಾಜು ಒಂದು ತಿಂಗಳಿಂದ ರಾಜಸ್ಥಾನದಲ್ಲಿ ಮೂಡಿದ್ದ ರಾಜಕೀಯ ಅಸ್ಥಿರತೆ ಕೊನೆಗೊಂಡಿತ್ತು.

    ಹಿಂದು ದೇಗುಲದಲ್ಲಿ ಏಸುಕ್ರಿಸ್ತನ ಫೋಟೋ ಇಟ್ಟು ಅರ್ಚಕನಿಂದ ಪೂಜೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts