More

    ಸೇನೆಯಲ್ಲಿ ಮಹಿಳೆಯರಿಗೆ ಭರ್ಜರಿ ಅವಕಾಶ: 100 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಭಾರತೀಯ ಸೇನಾಪಡೆಗೆ ಸೇರ ಬಯಸುವ ಯುವತಿಯರಿಗೆ ಸುವರ್ಣ ಅವಕಾಶವಿದು. ಎಸ್ಸೆಸ್ಸೆಲ್ಸಿ ಮುಗಿಸಿರುವ 100 ಮಹಿಳಾ ಅಭ್ಯರ್ಥಿಗಳನ್ನು ಸೋಲ್ಜರ್​- ಜನರಲ್​ ಡ್ಯೂಟಿ (ವುಮೆನ್​ ಮಿಲಿಟರಿ ಪೊಲೀಸ್​) ಹುದ್ದೆಗೆ ನೇಮಕ ಮಾಡಿಕೊಳ್ಳಲು ರ್ಯಾಲಿ ನಡೆಸಲಾಗುತ್ತಿದೆ. ಗಭಿರ್ಣಿಯರಿಗೆ ಅವಕಾಶ ಇರುವುದಿಲ್ಲ. ಅಗತ್ಯ ದಾಖಲೆಗಳ ಜತೆ ವಿವಾಹಿತೆ ಹಾಗೂ ಅವಿವಾಹಿತೆ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು. ಮೊಣಕೈ ಮೇಲಿರುವ ಹಚ್ಚೆ ಬಿಟ್ಟು ದೇಹದ ಯಾವುದೇ ಭಾಗದಲ್ಲಿ ಶಾಶ್ವತ ಹಚ್ಚೆ ಇದ್ದರೆ ಅಂತಹ ಅಭ್ಯರ್ಥಿಗಳನ್ನು ಆಯ್ಕೆಯಿಂದ ನಿರ್ಬಂಧಿಸಲಾಗುವುದು ಎಂದು ಸೂಚಿಸಲಾಗಿದೆ. ರ್ಯಾಲಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಮೇಲ್​ ಮೂಲಕ ಅಡ್ಮಿಟ್​ ಕಾರ್ಡ್​ ಕಳುಹಿಸಲಾಗುವುದು.

    ಒಟ್ಟು ಹುದ್ದೆಗಳು: 100

    ರ್‍ಯಾಲಿ  ನಡೆಯುವ ಸ್ಥಳಗಳು: ಬೆಳಗಾವಿ, ಪುಣೆ, ಅಂಬಾಲ, ಲಖನೌ, ಜಬಲ್​ಪುರ್​, ಶಿಲ್ಲಾಂಗ್​

    ವಿದ್ಯಾರ್ಹತೆ: ಸೋಲ್ಜರ್​ ಜನರಲ್​ ಡ್ಯೂಟಿಗೆ 10ನೇ ತರಗತಿ ಪಾಸಾಗಿದ್ದು, ಕನಿಷ್ಠ ಶೇ.45 ಅಂಕ ಪಡೆದಿರಬೇಕು. ಮಾನ್ಯತೆ ಪಡೆದ ಶಿಕ್ಷಣ ಮಂಡಳಿಗಳ ಪ್ರಮಾಣಪತ್ರವನ್ನಷ್ಟೇ ಪರಿಗಣಿಸಲಾಗುತ್ತದೆ.

    ವಯೋಮಿತಿ: ಕನಿಷ್ಠ 17 ವರ್ಷ ಆರು ತಿಂಗಳು, ಗರಿಷ್ಠ 21 ವರ್ಷ ವಯೋಮಿತಿ ನಿಗದಿಯಾಗಿದೆ. (2020ರ ಅಕ್ಟೋಬರ್​ 1 ರಿಂದ 2004ರ ಏಪ್ರಿಲ್​ 1ರ ನಡುವೆ ಜನಿಸಿರಬೇಕು). ಸಾವನ್ನಪ್ಪಿರುವ ರಕ್ಷಣಾ ಸಿಬ್ಬಂದಿ ಪತ್ನಿಯರಿಗೆ ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    ದೈಹಿಕ ಅರ್ಹತೆ: ಎತ್ತರ 152 ಸೆಂ. ಮೀಟರ್​ ಇರಬೇಕು. ಸೈನ್ಯದ ವೈದ್ಯಕಿಯ ಮಾನದಂಡಗಳ ಪ್ರಕಾರ ವಯಸ್ಸಿಗೆ ಅನುಗುಣವಾಗಿ ದೇಹದ ತೂಕ ನಿರ್ಧರಿಸಲಾಗುವುದು. ದೈಹಿಕವಾಗಿ, ವೈದ್ಯಕಿಯ ಹಾಗೂ ಮಾನಸಿಕವಾಗಿ ಸದೃಢರಾಗಿರುವ ಪ್ರಮಾಣಪತ್ರ ಸಲ್ಲಿಸಬೇಕು.

    ಆಯ್ಕೆ ಪ್ರಕ್ರಿಯೆ: 1.6 ಕಿ.ಮೀ ಓಟವನ್ನು 7 ನಿಮಿಷ 30 ಸೆಕೆಂಡ್​ಗಳಲ್ಲಿ ಪೂರೈಸಬೇಕು. 10 ಅಡಿ ಉದ್ದ ಜಿಗಿತ, 3 ಅಡಿ ಎತ್ತರ ಜಿಗಿಯುವ ಸಾಮರ್ಥ್ಯ ಹೊಂದಿರಬೇಕು. ಇದಾದ ಬಳಿಕ ವೈದ್ಯಕಿಯ ಪರೀೆ ನಡೆಸಲಾಗುತ್ತದೆ. ನಂತರ ಲಿಖಿತ ಪರೀೆ ಇರುತ್ತದೆ. ಸೈನಿಕರ ಮಗಳು, ಮಾಜಿ ಸೈನಿಕರ ಮಗಳು, ವಿಧವೆಯರಿಗೆ ಅಂಕಗಳಲ್ಲಿ ರಿಯಾಯಿತಿ ನೀಡಲಾಗುವುದು.

    ಇತರ ಸೂಚನೆ: ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಎಂಪಿ ಸೆಂಟರ್​ ಮತ್ತು ಸ್ಕೂಲ್​ನಲ್ಲಿ ತರಬೇತಿ ನೀಡಲಾಗುವುದು. ಈ ತರಬೇತಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪ್ರಯಾಣ ಭತ್ಯೆ ನೀಡಲಾಗುವುದು.

    ಅರ್ಜಿಸಲ್ಲಿಸಲು ಕೊನೇ ದಿನ: 20.7.2021
    ಅಧಿಸೂಚನೆಗೆ: https://bit.ly/34XUEgF

    ಮಾಹಿತಿಗೆ: http://www.joinindianarmy.nic.in

    ಬಿಇ, ಬಿಟೆಕ್‌ ಪದವೀಧರರಿಗೆ ಬಿಇಎಲ್‌ನಲ್ಲಿದೆ ಉದ್ಯೋಗಾವಕಾಶ: ನಾಳೆಯೇ ಕೊನೆಯ ದಿನ

    ಅವಿವಾಹಿತ ಇಂಜಿನಿಯರಿಂಗ್ ಪದವೀಧರರಿಗೆ ಭರ್ಜರಿ ಅವಕಾಶ: 189 ಹುದ್ದೆಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts