More

    ಎಸ್‌ಎಸ್‌ಎಲ್‌ಸಿಯಾದವರಿಗೆ ಎನ್​ಎಲ್​ಸಿಯಿಂದ ಆಪರೇಟರ್ಸ್​ಗಳ ಹುದ್ದೆಗೆ ಅರ್ಜಿ ಆಹ್ವಾನ

    ಎನ್​ಎಲ್​ಸಿ ಇಂಡಿಯಾ ಲಿಮಿಟೆಡ್​ (ಎನ್​ಎಲ್​ಸಿಐಎಲ್​) ನವರತ್ನ ಸಂಸ್ಥೆಗಳಲ್ಲಿ ಒಂದಾಗಿದ್ದು, ಮೈನಿಂಗ್​, ಥರ್ಮಲ್​ ಪವರ್​ ಉತ್ಪಾದನೆ ಮತ್ತು ನವೀಕರಿಸಬಹುದಾದ ಶಕ್ತಿಯ ಗಡಿನಾಡುಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ತಮಿಳುನಾಡಿನಲ್ಲಿರುವ ಟಕದಲ್ಲಿ ಎಸ್​ಎಂಇ ಆಪರೇಟರ್ಸ್​ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
    ಒಟ್ಟು ಹುದ್ದೆಗಳು: 65

    ನೈವೇಲಿ ಲಿಗ್ನೇಟ್​ ಕಾಪೋರ್ರೇಷನ್​ (ಎನ್​ಎಲ್​ಸಿ) ಮುಂದಿನ ವರ್ಷಗಳಲ್ಲಿ ಬೃಹತ್​ ಸಾಮರ್ಥ್ಯ ವೃದ್ಧಿಗಾಗಿ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದು, ತಮಿಳುನಾಡಿನ ನೈವೇಲಿಯ ಗಣಿ/ ಥರ್ಮಲ್​ ಕೇಂದ್ರದಲ್ಲಿ 2 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. 65 ಹುದ್ದೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗೆ 30 ಸ್ಥಾನ, ಎಸ್ಸಿಗೆ 12, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 6, ಇತರ ಹಿಂದುಳಿದ ವರ್ಗಕ್ಕೆ 17 ಸ್ಥಾನ ಮೀಸಲಿರಿಸಲಾಗಿದೆ. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಸ್ವಂತ ಖಚಿರ್ನಲ್ಲಿ ಬರಲು ಸೂಚಿಸಲಾಗಿದೆ. ಅಲ್ಲದೇ ನೇಮಕಾತಿ ಸಮಯದಲ್ಲಿ ಎಲ್ಲ ಮೂಲ ದಾಖಲೆಗಳನ್ನು ಸಲ್ಲಿಸಲು ತಿಳಿಸಲಾಗಿದೆ. ಎಲ್ಲ ದಾಖಲೆಗಳು ಇತರ ಭಾಷೆಯಲ್ಲಿದ್ದರೆ ಅದನ್ನು ಇಂಗ್ಲಿಷ್​/ ಹಿಂದಿಗೆ ತರ್ಜುಮೆ ಮಾಡಿ ತರಲು ಸೂಚಿಸಲಾಗಿದೆ.

    ಶೈಕ್ಷಣಿಕ ಅರ್ಹತೆ: ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಶಿಕ್ಷಣ ಪಡೆದಿರಬೇಕು. ಅಥವಾ ಮೆಕ್ಯಾನಿಕಲ್​/ ಎಲೆಕ್ಟ್ರಿಕಲ್​ ಟ್ರೇಡ್​ನಲ್ಲಿ ಐಟಿಐ ಮಾಡಿರಬೇಕು. ಮೈನಿಂಗ್​ ಎಕ್ವಿಪ್​ಮೆಂಟ್ಸ್​ಗಳನ್ನು ಆಪರೇಟ್​ ಮಾಡಿರುವ ವೃತ್ತಿ ಅನುಭವ ಕೇಳಲಾಗಿದೆ.

    ವಯೋಮಿತಿ: ಗರಿಷ್ಠ ವಯೋಮಿತಿ 63 ವರ್ಷ ನಿಗದಿಪಡಿಸಲಾಗಿದೆ. ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

    ವೇತನ: ಎಫ್‌ 5-ಡಬ್ಲು ಗ್ರೇಡ್​ ಅನುಸಾರ ಮಾಸಿಕ 38,000 ರೂ. ವೇತನ ನಿಗದಿಪಡಿಸಲಾಗಿದ್ದು, ಪಿಎಫ್‌, ವೈದ್ಯಕಿಯ ಸೌಲಭ್ಯ ಹಾಗೂ ಮನೆ ಬಾಡಿಗೆ ಭತ್ಯೆ ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳಿಗೆ ಪ್ರಾಕ್ಟಿಕಲ್​ ಪರೀಕ್ಷೆಗೆ ಆಹ್ವಾನಿಸಲಾಗುವುದು. ಪರೀಕ್ಷೆಯ ದಿನಾಂಕ, ಸ್ಥಳ, ಸಮಯದ ಮಾಹಿತಿಯನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುವುದು. ಪ್ರಾಕ್ಟಿಕಲ್​ ಪರೀಕ್ಷೆಯಲ್ಲಿ ಸಾಮಾನ್ಯವರ್ಗ ಹಾಗೂ ಆಥಿರ್ಕವಾಗಿ ದುರ್ಬಲವಾಗಿರುವ ವರ್ಗದ ಅಭ್ಯರ್ಥಿಗಳು ಶೇ.50 ಅಂಕ, ಉಳಿದ ಅಭ್ಯರ್ಥಿಗಳು ಶೇ.40 ಅಂಕ ಪಡೆಯಬೇಕು. ಪರೀಕ್ಷೆ ನಂತರ ಮೆರಿಟ್​ ಹಾಗೂ ಮೀಸಲಾತಿ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 14.6.2021
    ಅರ್ಜಿ ಸಲ್ಲಿಕೆ ವಿಳಾಸ: ADDITIONAL CHIEF MANAGER (HR) / RECRUITMENT RECRUITMENT CELL, HUMAN RESOURCE DEPARTMENT, CORPORATE OFFICE, NLC INDIA LIMITED BLOCK-1, NEYVELI, TAMILNADU – 607801.

    ಅಧಿಸೂಚನೆಗೆ: https://bit.ly/3pBUNjz

    ಮಾಹಿತಿಗೆ: www.nlcindia.in

    ಎಲ್​ಐಸಿ ಹೌಸಿಂಗ್​ ಫೈನಾನ್ಸ್​ನಿಂದ ಅಸೋಸಿಯೇಟ್‌ ಹುದ್ದೆಗೆ ಅರ್ಜಿ ಆಹ್ವಾನ

    ಕೃಷಿ ವಿಷಯದಲ್ಲಿ ಪದವಿ ಪಡೆದಿರುವಿರಾ? ಧಾರವಾಡದ ವಿವಿಯಿಂದ ವಿವಿಧ ಹುದ್ದೆಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts