More

    ಬೆಂಗಳೂರು, ಉಡುಪಿ, ಧಾರವಾಡದ ಮೂವರು ಸೇರಿ ಎಂಟು ಪ್ರತಿಭಾನ್ವಿತರಿಗೆ ಟೊಟೊ ವಾರ್ಷಿಕ ಪ್ರಶಸ್ತಿ

    ಬೆಂಗಳೂರು: ಟೊಟೊ ಫಂಡ್ಸ್‌ನ ಆರ್ಟ್ಸ್ (ಟಿಎಫ್‌ಎ) ತನ್ನ 18ನೇ ವಾರ್ಷಿಕ ಟೊಟೊ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಕರ್ನಾಟಕದ ಮೂವರು ಕಲಾವಿದರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ವಿಜೇತರ ವಿವರ ಇಂತಿದೆ.

    ಸಂಗೀತ: ರಂಜನಿ ರಾಮದಾಸ್ (ರಂಜ್), ಬೆಂಗಳೂರು- ಪ್ರಶಸ್ತಿ ಮೊತ್ತ ರೂ. 60 ಸಾವಿರ; ಕನ್ನಡದಲ್ಲಿ ಸೃಜನಾತ್ಮಕ ಬರವಣಿಗೆ: ಕೃಷ್ಣ ದೇವಾಂಗಮಠ, ಧಾರವಾಡ- ಪ್ರಶಸ್ತಿ ಮೊತ್ತ ರೂ. 50 ಸಾವಿರ; ಕಿರುಚಿತ್ರ: ಮೇಘಾ ಜೆ. ಶೆಟ್ಟಿ, ಉಡುಪಿ ಮತ್ತು ಶುಭಂ ದಿಲೀಪ್ ಘಾಟಗೆ, ಪುಣೆ- ತಲಾ ರೂ. 50 ಸಾವಿರ.

    ಇಂಗ್ಲಿಷ್‌ನಲ್ಲಿ ಸೃಜನಾತ್ಮಕ ಬರವಣಿಗೆ: ಅಶ್ವಿನ್ ವಿಜಯನ್, ಕೋಯಿಕ್ಕೋಡ್ ಮತ್ತು ಉದಯ ಕನುಂಗೋ, ಭುವನೇಶ್ವರ- ಪ್ರಶಸ್ತಿ ಮೊತ್ತ ತಲಾ ರೂ. 50 ಸಾವಿರ; ಫೋಟೋಗ್ರಫಿ: ಫಾರ್ಹೀನ್ ಫಾತಿಮಾ, ಚಂಡೀಗಢ ಮತ್ತು ಪ್ರಕಾಶ್ ಭೂಯಾನ್, ಗುವಾಹತಿ- ತಲಾ ರೂ. 50 ಸಾವಿರ.

    ಟಿಎಫ್‌ಎ ಸಂಸ್ಥೆ ದೇಶದ 30 ವರ್ಷದೊಳಗಿನ ಯುವ ಕಲಾವಿದರನ್ನು ತನ್ನ ಪ್ರಶಸ್ತಿಗಳು, ಕಾರ್ಯಾಗಾರಗಳು, ಉಪನ್ಯಾಸಗಳು, ಸಾಹಿತ್ಯ ಸಮಾವೇಶಗಳ ಮೂಲಕ ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಕಳೆದ 18 ವರ್ಷಗಳಿಂದ ಮಾಡುತ್ತಿದೆ.

    ವಾಟ್ಸ್‌ಆ್ಯಪ್‌, ಪೇ ಪಾಲ್‌, ಸ್ನ್ಯಾಪ್‌ ಚಾಟ್‌ ಎಲ್ಲಾ ಉಪಯೋಗಿಸ್ತಾ ಇದ್ದೀರಾ? ಹಾಗಿದ್ರೆ ಯೂಕ್ರೇನ್‌ ಬಗ್ಗೆ ಅರಿವಿರಲಿ…

    ಯೂಕ್ರೇನ್ ವಿದ್ಯಾರ್ಥಿಗಳ ರಕ್ಷಣೆಗೆ ನೋಡಲ್ ಅಧಿಕಾರಿ ನೇಮಕ: ಹೆದರಬೇಡಿ ಎಂದು ಭರವಸೆ ತುಂಬಿದ ಸಚಿವ ಕಾರಜೋಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts