More

    ರಿಮೋಟ್​ ಕಂಟ್ರೋಲ್​​ ಸಹಾಯದಿಂದ ನಿದ್ರಿಸುತ್ತಾಳೀಕೆ! 14 ವರ್ಷ ನಿದ್ದೆಗೆಟ್ಟವಳ ವಿಚಿತ್ರ ಕೇಸಿದು…

    ಹೌಗ್​ಟಾನ್​ (ಅಮೆರಿಕ): ಮನುಷ್ಯನ ದೇಹವೇ ವಿಚಿತ್ರವಾದದ್ದು. ಯಾರ್ಯಾರಿಗೆ, ಯಾವಾಗ ಯಾವ ರೀತಿಯ ಕಾಯಿಲೆಗಳು ಒಕ್ಕರಿಸಿಕೊಂಡುಬಿಡುತ್ತವೆ ಎಂದು ಹೇಳುವುದೇ ಕಷ್ಟ. ಅಂಥದ್ದೇ ಒಂದು ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಅಮೆರಿದ ಯುವತಿಯ ಕಥೆ ಇದು…

    ಈಕೆಯ ಹೆಸರು ರೂಬಿ ಚಂಬರ್ಲೇನ್. ಈಕೆಗೀಗ 22 ವರ್ಷ. ಆದರೆ ಇವಳು 8 ವರ್ಷದ ಬಾಲಕಿ ಇದ್ದಾಗಲೇ ವಿಚಿತ್ರ ಕಾಯಿಲೆಯೊಂದು ಆವರಿಸಿಕೊಂಡು ಬಿಟ್ಟಿತು. ಅದರ ಹೆಸರು ಕಾಂಪ್ಲೆಕ್ಸ್ ರೀಜನಲ್​ ಪೇನ್​ ಸಿಂಡ್ರೋಮ್. ಇದರ ಅರ್ಥ ದೇಹದಲ್ಲಿ ವಿಚಿತ್ರ ರೀತಿಯ ನೋವು. ಸಹಿಸಿಕೊಳ್ಳಲಾಗದ ಈ ನೋವಿನಿಂದ ಈಕೆಗೆ ಐದು ನಿಮಿಷವೂ ನಿದ್ದೆ ಮಾಡಲು ಆಗುತ್ತಿರಲಿಲ್ಲ.

    ಸಾಮಾನ್ಯವಾಗಿ ಯಾವುದೇ ರೀತಿಯ ಕಾಯಿಲೆ, ರೋಗಗಳು ಬಂದರೂ ನಿದ್ದೆ ಬಾರದೇ ಇರುವುದು ಸಹಜವೇ. ಆದರೆ ಈಕೆಗೆ ಬಂದಿದ್ದ ಕಾಯಿಲೆ ನೇರವಾಗಿ ನಿದ್ದೆಗೆ ಸಂಬಂಧಿಸಿದ್ದು ಆಗಿದ್ದರಿಂದ ಸತತ 14 ವರ್ಷ ನಿದ್ದೆಗೆಟ್ಟಿದ್ದಾಳೆ ಈಕೆ. ಯಾವ್ಯಾವುದೇ ಪ್ರಸಿದ್ಧ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಂಡರೂ ಈಕೆಯ ಕಾಯಿಲೆ ವಾಸಿಯಾಗಿರಲಿಲ್ಲ. ಈ ಭಯಾನಕ ಕಾಯಿಲೆಯೊಂದಿಗೇ ಈಕೆ ತನ್ನ 14 ವರ್ಷದ ಆಯಸ್ಸನ್ನು ಕಳೆದಿದ್ದಾಳೆ.

    ರಿಮೋಟ್​ ಕಂಟ್ರೋಲ್​​ ಸಹಾಯದಿಂದ ನಿದ್ರಿಸುತ್ತಾಳೀಕೆ! 14 ವರ್ಷ ನಿದ್ದೆಗೆಟ್ಟವಳ ವಿಚಿತ್ರ ಕೇಸಿದು...
    ಸಿಆರ್​ಪಿಎಸ್​ ಎಂಬ ಕಾಯಿಲೆ ಬಗ್ಗೆ ಹೆಚ್ಚೇನು ತಿಳಿಯದ ರೂಬಿ 11ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಒಳಗಾಗಿದ್ದಳು. ಫಿಸಿಯೋ ಥೆರಪಿ, ಬಲವಾದ ಪೇನ್​ ಕಿಲ್ಲರ್​, ಇಂಜೆಕ್ಷನ್​​ ಹೀಗೆ 100ಕ್ಕೂ ಹೆಚ್ಚು ಚಿಕಿತ್ಸೆಗೆ ಒಳಗಾಗಿದ್ದಳು. ಆದರೆ ಇದ್ಯಾವುದು ಕೂಡ ಆಕೆಗೆ ಸಹಾಯವಾಗಲಿಲ್ಲ.
    ಇದೀಗ ರೂಬಿಗೆ ಸ್ವಲ್ಪ ನೆಮ್ಮದಿ ಸಿಕ್ಕಿದೆ. ಏಕೆಂದರೆ ಕೊನೆಗೂ ಈಕೆಯ ನಿದ್ರಾಹೀನತೆಯ ಸಮಸ್ಯೆಯನ್ನು ಪರಿಹರಿಸಲು ವೈದ್ಯಲೋಕ ಯಶಸ್ವಿಯಾಗಿದೆ. ಈಕೆಯ ನಿದ್ದೆಗಾಗಿ ರಿಮೋಟ್​ ಕಂಟ್ರೋಲರ್​ ಕಂಡುಹಿಡಿಯಲಾಗಿದೆ!

    ಕೊನೆಗೂ ಈಕೆ ಬೆನ್ನು ಮೂಳೆಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಈ ಶಸ್ತ್ರ ಚಿಕಿತ್ಸೆ ಬಳಿಕ ಆಕೆ ಬೆನ್ನಿಗೆ ಬ್ಯಾಟರಿಯನ್ನ ಅಳವಡಿಸಲಾಗಿದೆ. ಹಾಗೂ ಅದನ್ನ ಆಕೆಯ ಮೊಣಕೈಯಲ್ಲಿ ಅಳವಡಿಸಲಾದ ಎಲೆಕ್ಟ್ರೋಡ್ಸ್ ಜೊತೆ ಸಂಪರ್ಕ ಮಾಡಲಾಗಿದೆ. ರೂಬಿ ರಿಮೋಟ್​​ನಿಂದ ಬಟನ್​ ಒತ್ತಿದರೆ ಸಾಕು ಈ ಎಲೆಕ್ಟ್ರೋಡ್ಸ್​ಗಳು ಆಕೆಯ ಮೆದುಳಿಗೆ ನೋವಿನ ಸಂದೇಶವನ್ನ ತಲುಪಿಸೋಕೇ ಬಿಡೋದಿಲ್ಲ. ಹೀಗಾಗಿ ಆಕೆ ಆರಾಮಾಗಿ ನಿದ್ದೆ ಮಾಡಬಹುದಾಗಿದೆ.

    ‘ನನಗೀಗ 22 ವರ್ಷ. ನನಗೆ ನನ್ನ ಗೆಳೆಯರನ್ನೂ ಭೇಟಿಯಾಗಲು ಈ ಕಾಯಿಲೆಯಿಂದ ಸಾಧ್ಯವಾಗುತ್ತಿರಲಿಲ್ಲ. ಈ ಕಾಯಿಲೆಯಿಂದ ನಾನು ಉದ್ಯೋಗವನ್ನೂ ಬಿಡಬೇಕಾಯಿತು. ಆದರೆ ಈಗ ನನಗೆ ನೆಮ್ಮದಿ ಸಿಕ್ಕಿದೆ ಎಂದು ರೂಬಿ ಹೇಳಿಕೊಂಡಿದ್ದಾಳೆ. ರಿಮೋಟ್​ ಕಂಟ್ರೋಲ್​​ನ ನೆರವಿನಿಂದ ನಾನು ವ್ಯಾಸಂಗ ಮುಂದುವರಿಸುತ್ತಿದ್ದೇನೆ. ಯೋಗಾಸನವನ್ನು ಮಾಡುತ್ತಿದ್ದೇನೆ. ಎಲ್ಲಕ್ಕಿಂತ ಮಿಗಿಲಾಗಿ ಚೆನ್ನಾಗಿ ನಿದ್ದೆಯನ್ನೂ ಮಾಡುತ್ತಿದ್ದೇನೆ ಎಂದಿದ್ದಾಳೆ ರೂಬಿ.

    ಪೋಲಿಯೋ ಡ್ರಾಪ್ಸ್​ ಬದಲು ಸ್ಯಾನಿಟೈಸರ್​: ಕಂದಮ್ಮಗಳ ಪ್ರಾಣದ ಜತೆ ಆರೋಗ್ಯ ಸಿಬ್ಬಂದಿ ಚೆಲ್ಲಾಟ

    ದನಿ ಕೇಳಿಯೇ ಲವ್​ ಆಯ್ತು ಎಂದು ರಾತ್ರಿಯಿಡೀ ನಿದ್ದೆಗೆಡಿಸುತ್ತಾನೆ- ಅವನ ಮನಸ್ಸು ತಿಳಿಯುವುದು ಹೇಗೆ?

    ಪತ್ನಿಯನ್ನು ಕೊಂದು ಮನೆಯೊಳಕ್ಕೇ ಸುಟ್ಟುಹಾಕಿದ ಮಾಜಿ ಕಾರ್ಪೋರೇಟರ್​ ಅಪ್ಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts