More

    ಎಸ್‍ಬಿಐಗೆ ಬೇಕಾಗಿದ್ದಾರೆ 100 ಯುವ ಮ್ಯಾನೇಜರ್ಸ್

    ಮುಂಬೈನ ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾದ (ಎಸ್‍ಬಿಐ) ಸ್ಪೆಷಲಿಸ್ಟ್ ಕೇಡರ್ ಆಫೀಸರ್ ವಿಭಾಗದಲ್ಲಿನ ಮ್ಯಾನೇಜರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಮುಂಬೈ ಅಥವಾ ನವಿಮುಂಬೈನಲ್ಲಿ ನೇಮಕ ಮಾಡಲಾಗುವುದು. ಒಟ್ಟೂ ಹುದ್ದೆಗಳು 100.

    ನೇಮಕಾತಿಗಾಗಿ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ಸೇರಿ ವಿವಿಧ ರಾಜ್ಯಗಳ ಪ್ರಮುಖ ನಗರಗಳಲ್ಲಿ ಆನ್‍ಲೈನ್ ಲಿಖಿತ ಪರೀಕ್ಷೆ ನಡೆಸಲಾಗುವುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ತಮ್ಮ ಇಚ್ಛೆ ಅನುಸಾರ 3 ಪರೀಕ್ಷಾ ಕೇಂದ್ರಗಳನ್ನು ಗುರುತಿಸಬೇಕು. ಹುದ್ದೆಗಳಲ್ಲಿ ಸಾಮಾನ್ಯ ವರ್ಗಕ್ಕೆ 44, ಎಸ್‍ಸಿಗೆ 15, ಎಸ್ಟಿಗೆ 7, ಇತರ ಹಿಂದುಳಿದ ವರ್ಗಕ್ಕೆ 25, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 9 ಸ್ಥಾನ ಮೀಸಲಿರಿಸಲಾಗಿದೆ.

    ಹುದ್ದೆ, ಸಂಖ್ಯೆ ವಿವರ
    * ಅಸಿಸ್ಟೆಂಟ್ ಮ್ಯಾನೇಜರ್ (ಸೆಕ್ಯುರಿಟಿ ಅನಾಲಿಸ್ಟ್) – 40
    * ಡೆಪ್ಯುಟಿ ಮ್ಯಾನೇಜರ್ (ಸೆಕ್ಯುರಿಟಿ ಅನಾಲಿಸ್ಟ್) – 60

    ಶೈಕ್ಷಣಿಕ ಅರ್ಹತೆ: ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್,  ಇನ್​ಫೋರ್ಮೇಷನ್​ ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್‍ನಲ್ಲಿ ಬಿಇ, ಬಿ.ಟೆಕ್, ಸೈಬರ್ ಸೆಕ್ಯುರಿಟಿ, ಇನ್​ಫೋರ್ಮೇಷನ್​ ಟೆಕ್ನಾಲಜಿಯಲ್ಲಿ ಎಂ.ಟೆಕ್, ಕಂಪ್ಯೂಟರ್ ಸೈನ್ಸ್‍ನಲ್ಲಿ ಎಂಸಿಎ/ ಎಂಎಸ್ಸಿ, ಎಂಎಸ್ಸಿ (ಐಟಿ). ಹುದ್ದೆಗೆ ಅನುಗುಣವಾಗಿ ವಿಶೇಷ ಕೌಶಲ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

    ವಯಸ್ಸೆಷ್ಟು?: 31.10.2020ಕ್ಕೆ ಅಸಿಸ್ಟೆಂಟ್ ಮ್ಯಾನೇಜರ್‍ಗೆ ಗರಿಷ್ಠ 28 ವರ್ಷ, ಡೆಪ್ಯುಟಿ ಮ್ಯಾನೇಜರ್‍ಗೆ ಗರಿಷ್ಠ 33 ವರ್ಷ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ ಆಧರಿಸಿ ಶಾರ್ಟ್ ಲಿಸ್ಟ್ ಸಿದ್ಧಪಡಿಸಿ, ಆನ್‍ಲೈನ್ ಲಿಖಿತ ಪರೀಕ್ಷೆ ನಡೆಸಲಾಗುವುದು. ಲಿಖಿತ ಪರೀಕ್ಷೆಯ ಸಂಭಾವ್ಯ ದಿನಾಂಕ 2.2.2021. ಲಿಖಿತ ಪರೀಕ್ಷೆಯಲ್ಲಿ ಜನರಲ್ ಆಪ್ಟಿಟ್ಯೂಡ್ ಹಾಗೂ ವೃತ್ತಿ ಸಂಬಂಧಿತ ಜ್ಞಾನದ ಪ್ರಶ್ನೆಗಳನ್ನು ಕೇಳಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 750 ರೂ. ಪಾವತಿಸಬೇಕು.

    ವೇತನ: ಜೂನಿಯರ್ ಮ್ಯಾನೇಜ್‍ಮೆಂಟ್ ಗ್ರೇಡ್ ಸ್ಕೇಲ್ 1 ಅಡಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್‍ಗೆ ಮಾಸಿಕ 23,700 ರೂ.ನಿಂದ 42,020 ರೂ. ಇದೆ, ಮಿಡ್ಲ್ ಮ್ಯಾನೇಜ್‍ಮೆಂಟ್ ಗ್ರೇಡ್ ಸ್ಕೇಲ್ 2ರ ಅಡಿಯಲ್ಲಿ ಡೆಪ್ಯುಟಿ ಮ್ಯಾನೇಜರ್‍ಗೆ ಮಾಸಿಕ 31,705 ರೂ.ನಿಂದ 45,950 ರೂ. ನಿಗದಿಯಾಗಿದ್ದು, ಡಿಎ, ಮನೆ ಬಾಡಿಗೆ ಭತ್ಯೆ, ಸಿಸಿಎ, ಪಿಎï, ಪೆನ್ಷನ್, ಎಲ್‍ಎïಸಿ, ವೈದ್ಯಕೀಯ ಭತ್ಯೆ ಸೇರಿ ವಿವಿಧ ಭತ್ಯೆಗಳನ್ನು ನಿಯಮದನ್ವಯ ನೀಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೆಯ ದಿನ: 11.1.2021
    ಅಧಿಸೂಚನೆಗೆ: https://bit.ly/38tfCW2

    ಮಾಹಿತಿಗೆ: https://bank.sbi/web/careers

    ಇನ್ನೂ ಹೆಚ್ಚಿನ ಉದ್ಯೋಗದ ಮಾಹಿತಿಗೆ ಇಲ್ಲಿ ಕ್ಲಿಕ್​

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಕೇಂದ್ರ ಸರ್ಕಾರದ ಉದ್ಯೋಗ ಬಯಸಿದವರಿಗೆ ಇಲ್ಲಿವೆ ವಿವಿಧ ಹುದ್ದೆಗಳು

    ನಿರುದ್ಯೋಗಿಗಳಿಗೆ ಬಂಪರ್‌ ಅವಕಾಶ: ಅಂಚೆ ಇಲಾಖೆಯಲ್ಲಿದೆ 2443 ಹುದ್ದೆ- ಕರ್ನಾಟಕದಲ್ಲಿ ಕೆಲಸ

    ವಿವಿಧ ಪದವೀಧರರಿಗೆ ಐಡಿಬಿಐ ಬ್ಯಾಂಕ್‌ನಲ್ಲಿವೆ 134 ಹುದ್ದೆಗಳು

    ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಖಾಲಿ ಇವೆ ಫೈರ್ ಇಂಜಿನಿಯರ್ ಹುದ್ದೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts