More

    ಒಳ ಉಡುಪು ಕಳಚಿಟ್ಟು ನೀಟ್​ ಬರೆದ ವಿದ್ಯಾರ್ಥಿನಿಯರಿಗೆ ಪುನಃ ಪರೀಕ್ಷೆ: ಎನ್​ಟಿಎ ಮಹತ್ವದ ಘೋಷಣೆ

    ತಿರುವನಂತಪುರ: ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್) ಬರೆಯುವ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದೊಳಗೆ ಲೋಹದ ವಸ್ತು ತೆಗೆದುಕೊಂಡು ಹೋಗುವಂತಿಲ್ಲ ಎನ್ನುವ ನಿಯಮವಿದೆ. ಆದರೆ ಈ ಬಾರಿ ನಡೆದ ನೀಟ್​ ಪರೀಕ್ಷೆಯ ಸಮಯದಲ್ಲಿ ಹಲವು ವಿದ್ಯಾರ್ಥಿನಿಯರು ತೊಟ್ಟಿದ್ದ ಒಳ ಉಡುಪಿನಲ್ಲಿ (ಬ್ರಾ) ಅಂಡರ್‌ವೈರಿಂಗ್ ಇದ್ದ ಕಾರಣ ಅದು ಮೆಟಲ್ ಡಿಟೆಕ್ಟರ್‌ನಲ್ಲಿ ಡಿಟೆಕ್ಟ್ ಆಗಿತ್ತು. ಆ ಹಿನ್ನೆಲೆ 100ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಬ್ರಾ ತೆಗೆದಿಟ್ಟು ಪರೀಕ್ಷೆ ಬರೆಸಲಾಗಿದೆ.

    ಈ ಮುಜುಗರಿಂದ ಹಲವು ವಿದ್ಯಾರ್ಥಿನಿಯರು ಸರಿಯಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ, ಈ ಘಟನೆಯಿಂದ ವಿದ್ಯಾರ್ಥಿನಿಯರು ಶಾಕ್​ಗೆ ಒಳಗಾಗಿದ್ದರು. ಎಲ್ಲರ ಎದುರೇ ತಮ್ಮ ಮರ್ಯಾದೆ ಹೋಗಿದ್ದರಿಂದ ಪರೀಕ್ಷೆ ಬರೆದರೂ ಅದನ್ನು ಸರಿಯಾಗಿ ಬರೆಯಲು ಸಾಧ್ಯವಾಗಿರಲಿಲ್ಲ. ಈ ಘಟನೆ ಭಾರಿ ಟೀಕೆಗೆ ಗುರಿಯಾಗಿತ್ತು.

    ಅದರಲ್ಲಿಯೂ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನೀಟ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯರಿಗೆ ಇಂಥದ್ದೊಂದು ತೊಂದರೆ ಎದುರಾಗಿತ್ತು. ಇದೀಗ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‍ಟಿಎ) ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಕೊಲ್ಲಂ ಜಿಲ್ಲೆಯಲ್ಲಿ ನೀಟ್​ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಒಳ ಉಡುಪು ಕಳಚಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯರಿಗೆ ಮತ್ತೊಂದು ಅವಕಾಶವನ್ನು ಕಲ್ಪಿಸಿದೆ.

    ಬರುವ ಸೆಪ್ಟೆಂಬರ್ 4 ರಂದು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು ಎಂದು ಎನ್​ಟಿಎ ಹೇಳಿದೆ. ಈಗಾಗಲೇ ವಿದ್ಯಾರ್ಥಿನಿಯರಿಗೆ ಎನ್‍ಟಿಎ ಇಮೇಲ್ ಕೂಡ ಕಳುಹಿಸಿದೆ.

    ತಮ್ಮ ಪುತ್ರಿಗೆ ಆದ ಅವಮಾನವನ್ನು ವ್ಯಕ್ತಿಯೊಬ್ಬರು ಕೊಟ್ಟಾರಕರ ಪೊಲೀಸರಲ್ಲಿ ದೂರಿದ್ದರು. ಚಾತಮಂಗಲಂನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ತಮ್ಮ ಮಗಳು ಸೇರಿದಂತೆ ಮಹಿಳಾ ನೀಟ್ ಆಕಾಂಕ್ಷಿಗಳು ತಮ್ಮ ಬ್ರಾಗಳನ್ನು ತೆಗೆಯುವಂತೆ ಹೇಳಿದ್ದಾರೆ ಎಂದು ಆರೋಪಿಸಿದ್ದರು.

    ಈ ಘಟನೆ ಭಾರಿ ವಿವಾದ ಸೃಷ್ಟಿಸಿತ್ತು. ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಹೆಂಗಸಿನ ಮಾನಭಂಗ ಮಾಡುವ ಉದ್ದೇಶದಿಂದ ಅವಳ ಮೇಲೆ ಹಲ್ಲೆ ಅಥವಾ ಆಪರಾಧಿಕ ಬಲಪ್ರಯೋಗ ಮಾಡುವುದು) ಮತ್ತು 509 (ಒಬ್ಬ ಮಹಿಳೆಯ ಮಾನಕ್ಕೆ ಕುಂದುಂಟು ಮಾಡುವ ಉದ್ದೇಶವಿರುವ ಶಬ್ದ, ಸಂಜ್ಞೆ ಅಥವಾ ಕೃತ್ಯ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿತ್ತು.

    ನಂತರ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದರು. ಬಂಧಿತರಲ್ಲಿ ನೀಟ್ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದ ಇಬ್ಬರು ಕಾಲೇಜು ಸಿಬ್ಬಂದಿ ಮತ್ತು ಕೇಂದ್ರದ ಭದ್ರತೆಯನ್ನು ವಹಿಸಿಕೊಂಡಿದ್ದ ಏಜೆನ್ಸಿಯ ಮೂವರು ಸೇರಿದ್ದಾರೆ. ಕೊನೆಗೆ ಎಲ್ಲಾ ಆರೋಪಿಗಳಿಗೂ ಜಾಮೀನು ಸಿಕ್ಕಿದೆ. ಘಟನೆಯಿಂದ ವಿದ್ಯಾರ್ಥಿನಿಯರು ನೊಂದುಕೊಂಡಿರುವ ಹಿನ್ನೆಲೆಯಲ್ಲಿ ಇನ್ನೊಂದು ಅವಕಾಶ ಕಲ್ಪಿಸಲಾಗಿದೆ. (ಏಜೆನ್ಸೀಸ್​)

    ಮತ್ತೊಂದು ಚಿನ್ನ ಮುಡಿಗೇರಿಸಿಕೊಂಡ ನೀರಜ್​​ ಛೋಪ್ರಾ: ಡೈಮಂಡ್​ ಲೀಗ್​ನಲ್ಲಿ​ ಗೆದ್ದ ಮೊದಲ ಭಾರತೀಯ!

    ಶಿವಮೊಗ್ಗದಲ್ಲಿ ಚಾಕು ಇರಿದ ಆರೋಪಿಗಳಿಗೆ ಬಿಗ್​ ಶಾಕ್​! ಯುಎಪಿಎ ಅಡಿ ಕೇಸ್​ ದಾಖಲು- ಏನಿದು ಕಾಯ್ದೆ?

    ದೇವರ ಸನ್ನಿಧಿಯಲ್ಲಿಯೇ ಚಿತ್ರಹಿಂಸೆ ಅನುಭವಿಸಿದ ಸುಂದರ್​ ಇನ್ನಿಲ್ಲ: ಈತನ ಕರಾಳ ಬದುಕಿನ ಕಣ್ಣೀರ ಕಥೆಯಿದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts