More

    ಅಡಕೆ ಬೆಳೆಗಾರರಿಗೆ ಶಾಕ್‌ ನೀಡಿದ ಸಂಸದ- ಬ್ಯಾನ್‌ ಮಾಡಿ, ಜನರು ಸೇವಿಸದಂತೆ ನಿಷೇಧಿಸಿ ಎಂದು ಪ್ರಧಾನಿಗೆ ಪತ್ರ!

    ನವದೆಹಲಿ: ಕರೊನಾದಿಂದಾಗಿ ವಿದೇಶಗಳಿಂದ ಅಡಕೆಯ ಆಮದು, ಕಳ್ಳಸಾಗಾಣಿಕೆಗೆ ತಡೆ ಬಿದ್ದಿರುವ ಕಾರಣದಿಂದಾಗಿ ಅಡಕೆ ಬೆಲೆ ಹೆಚ್ಚಾಗಿದ್ದು, ಅಡಕೆ ಬೆಳೆದಾರರು ತುಂಬಾ ಸಂತಸದಲ್ಲಿ ಕುಣಿದಾಡುತ್ತಿದ್ದಾರೆ. ಅಡಕೆಯ ಕುರಿತಾಗಿ ಇದಾಗಲೇ ಸಾಕಷ್ಟು ಪ್ರಯೋಗಗಳು ನಡೆದಿವೆ. ಇದರಿಂದ ಇರುವ ಲಾಭಗಳ ಬಗ್ಗೆಯೂ ಸಾಕಷ್ಟು ವರದಿಗಳು ಬಂದಿವೆ. ಮಾತ್ರವಲ್ಲದೇ ಅಡಕೆಯನ್ನು ಬಳಸಿ ವಿವಿಧ ಪದಾರ್ಥಗಳ ಪ್ರಯೋಗ ಕೂಡ ನಡೆಯುತ್ತಿದ್ದು, ಇದಕ್ಕೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ತಜ್ಞರು ಪ್ರಯೋಗಶೀಲರಾಗಿದ್ದಾರೆ.

    ಆದರೆ, ಇದರ ಬೆನ್ನಲ್ಲೇ ಇದೀಗ ಬಿಜೆಪಿ ಸಂಸದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಅಡಕೆ ಬೆಳೆಗಾರರಿಗೆ ಶಾಕ್‌ ನೀಡಿದ್ದಾರೆ. ಅಡಕೆಯನ್ನು ಬ್ಯಾನ್‌ ಮಾಡಿ, ಜನರು ಅದರ ಸೇವನೆ ಮಾಡದಂತೆ ತಡೆಯಬೇಕಿದೆ ಎಂದು ಪತ್ರದಲ್ಲಿ ಜಾರ್ಖಂಡ್‌ನ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಒತ್ತಾಯಿಸಿದ್ದಾರೆ. ಇದಕ್ಕೆ ಅವರು ಕೊಟ್ಟಿರುವ ಕಾರಣ ಅಡಕೆಯಿಂದ ಕ್ಯಾನ್ಸರ್‌ ಬರುತ್ತದೆ ಎಂದು.

    ‘ವೈಯಕ್ತಿಕ ಅನುಭವದಲ್ಲಿ ಹೇಳುತ್ತಿದ್ದೇನೆ. ಪಾನ್‌ ಮಸಾಲದ ಪ್ರಮುಖ ಭಾಗವಾದ ಅಡಕೆ ಸೇವಿಸುವ ಮೂಲಕ ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಇದು ಜೀವಹಾನಿಯಾಗಿದೆ. ಇದನ್ನು ನಾನು ಕಣ್ಣಾರೆ ಕಂಡಿರುವ ಹಿನ್ನೆಲೆಯಲ್ಲಿ ಈ ಪತ್ರ ಬರೆಯುತ್ತಿದ್ದಾರೆ. ಜನರ ಬಳಕೆಯಿಂದ ಅಡಕೆಯನ್ನು ನಿಷೇಧಿಸಬೇಕು ಎಂದು ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ’ ಎಂದು ಸಂಸದ ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

    ಇಷ್ಟೇ ಅಲ್ಲದೇ ಅಡಕೆಯಿಂದ ಆಗುವ ಅನಾಹುತಗಳ ಪಟ್ಟಿ ಮಾಡಿರುವ ಅವರು, ಈ ಬಗ್ಗೆ ಪತ್ರದಲ್ಲಿ ತಿಳಿಸಿದ್ದಾರೆ. ಅದೇನೆಂದರೆ, ‘ಅಡಕೆ ಸೇವನೆಯಿಂದ ಆಸ್ತಮಾ ರೋಗ ಹೆಚ್ಚುತ್ತದೆ, ಮಾತ್ರವಲ್ಲದೇ ಹೃದಯದ ರಕ್ತನಾಳ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಉಸಿರಾಟ ಸಮಸ್ಯೆ ಉಂಟಾಗುತ್ತದೆ. ಇದೇ ಕಾರಣದಿಂದಾಗಿಯೇ 2018ರಲ್ಲಿ ಮಹಾರಾಷ್ಟ್ರ ಸರ್ಕಾರ ಅಡಕೆ ಮಾರಾಟ ಮತ್ತು ಬಳಕೆಯ ನಿಷೇಧಿಸಿತ್ತು. ಆದ್ದರಿಂದ ನೇರವಾಗಿ ಇದರ ಬಳಕೆ ಬೇಡ, ಬೇಕಿದ್ದರೆ ಧಾರ್ಮಿಕ ವಿಧಿ ವಿಧಾನಗಳಿಗೆ ಬಳಸಲು ಅನುಮತಿ ಮುಂದುವರೆಯಲಿ’ ಎಂದಿದ್ದಾರೆ.

    VIDEO: ಅಪ್ಪುವಿನ ಆತ್ಮದ ಜತೆಗೆ ಮಾತನಾಡಿದ ಸ್ಟೀವ್‌ ಹಫ್‌? ವಿಡಿಯೋ ಇಲ್ಲಿದೆ ನೋಡಿ…

    ನೋವಿನಲ್ಲಿಯೂ ದೊಡ್ಡತನ ಮರೆದ ಅಪ್ಪು ಪತ್ನಿ: ಪೊಲೀಸರಿಗೆ ಪತ್ರ ಬರೆದು ಧನ್ಯವಾದ ಸಲ್ಲಿಸಿದ ಅಶ್ವಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts