More

    ಕೆಯುಐಡಿಎಫ್‌​ಸಿಯಲ್ಲಿ ಉದ್ಯೋಗಾವಕಾಶ: 90 ಸಾವಿರ ರೂ.ವರೆಗೆ ಸಂಬಳ

    ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತದಲ್ಲಿ (ಕೆಯುಐಡಿಎಫ್‌ಸಿ) ಗುತ್ತಿಗೆ ಆಧಾರದ ಮೇಲೆ ವಿವಿಧ 10 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಆನ್​ಲೈನ್​ ಅರ್ಜಿ ಸಲ್ಲಿಕೆಗೆ ಮಾತ್ರ ಅವಕಾಶವಿದ್ದು, ಅರ್ಜಿಯು ಕೆಯುಐಡಿಎಫ್‌ಸಿ ವೆಬ್​ಸೈಟ್​ನಲ್ಲಿ ಲಭ್ಯವಿದೆ. ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಗರಿಷ್ಠ 62 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    ಅಭ್ಯರ್ಥಿಗಳ ಪದವಿ/ ಸ್ನಾತಕೋತ್ತರ/ ಇಂಜಿನಿಯರಿಂಗ್​ ಇತ್ಯಾದಿ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಅಂಕಪಟ್ಟಿ/ ಪದವಿ ಪತ್ರಗಳ ನೈಜತೆ ಪರಿಶೀಲನೆಗಾಗಿ ಸಂಬಂಧಿಸಿದ ವಿಶ್ವವಿದ್ಯಾಲಯಗಳಿಗೆ ಕಳುಹಿಸಲಾಗುವುದು. ಪರಿಶೀಲನಾ ವೆಚ್ಚವನ್ನು ಆಯ್ಕೆಯಾದ ಅಭ್ಯರ್ಥಿಗಳು ಭರಿಸತಕ್ಕದ್ದು ಎಂದು ಸೂಚಿಸಲಾಗಿದೆ. ಪ್ರತಿ ಹುದ್ದೆಗೂ ಪ್ರತ್ಯೇಕ ಅಧಿಸೂಚನೆ ನೀಡಿದ್ದು, ವಿದ್ಯಾರ್ಹತೆ, ವೃತ್ತಿ ಅನುಭವ ಹಾಗೂ ಇತರ ಮಾಹಿತಿಗಳ ಜತೆ ಅರ್ಜಿ ಸಲ್ಲಿಕೆ ಲಿಂಕ್​ ಅನ್ನು ನೀಡಲಾಗಿದೆ.

    ಹುದ್ದೆ ವಿವರ
    * ಸಹಾಯಕ ಪ್ರಧಾನ ವ್ಯವಸ್ಥಾಪಕ (ಎಬಿಡಿ) ಯೋಜನಾ ಹಣಕಾಸು ವಿಭಾಗ – 1
    * ಉಪ ಪ್ರಧಾನ ವ್ಯವಸ್ಥಾಪಕ/ ಸಹಾಯಕ ಪ್ರಧಾನ ವ್ಯವಸ್ಥಾಪಕ (ಟ್ರಸ್ಟ್​) ಕೆಡಬ್ಲ್ಯುಎಸ್​ಪಿಎ್​ ಟ್ರಸ್ಟ್​ ವಿಭಾಗ – 1
    * ವ್ಯವಸ್ಥಾಪಕರು (ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ) – 1
    * ಸಹಾಯಕ ವ್ಯವಸ್ಥಾಪಕರ (ಮೆಗಾಸಿಟಿ) ಹಣಕಾಸು ಮತ್ತು ಲೆಕ್ಕಪತ್ರ ವಿಭಾಗ – 1
    * ಸಹಾಯಕ ವ್ಯವಸ್ಥಾಪಕರ (ಮಾನವ ಸಂಪನ್ಮೂಲ) ಆಡಳಿತ ವಿಭಾಗ – 1
    * ಶೀಘ್ರಲಿಪಿಗಾರರು (ಕಾರ್ಯನಿರ್ವಾಹಕ ಸಹಾಯಕರು)- 3
    * ಕಿರಿಯ ಕಾರ್ಯನಿರ್ವಾಹಕ ಸಹಾಯಕರು, ಆಡಳಿತ ವಿಭಾಗ – 2

    ಶೈಕ್ಷಣಿಕ ಅರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಕಮರ್ಷಿಯಲ್‌ ಪ್ರಾಕ್ಟೀಸ್​ (ಕನ್ನಡ)ದಲ್ಲಿ ಡಿಪ್ಲೊಮಾ/ ಪದವಿ ಜತೆ ಕನ್ನಡ ಶಾರ್ಟ್​ಹ್ಯಾಂಡ್​ ಆ್ಯಂಡ್​ ಟೈಪಿಂಗ್​ (ಸೀನಿಯರ್​ ಗ್ರೇಡ್​), ಕಂಪ್ಯೂಟರ್​ ಸಟಿರ್ಫಿಕೇಟ್​ ಕೋರ್ಸ್​, ಯಾವುದೇ ಪದವಿ, ಸಿಎ/ ಐಸಿಡಬ್ಲ್ಯುಎ/ ಎಂಕಾಂ/ ಎಂಬಿಎ ಪದವಿ ಮಾಡಿರಬೇಕು. ಕನ್ನಡದಲ್ಲಿ ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು. ಎಲ್ಲ ಹುದ್ದೆಗಳಿಗೂ ವೃತ್ತಿ ಅನುಭವ ಕೇಳಲಾಗಿದೆ.

    ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 31,044 ರೂ.ನಿಂದ 89,822 ರೂ. ವೇತನ ಇದೆ.
    ಹುದ್ದೆಗಳ ದರ್ಜೆಗೆ ಅನ್ವಯವಾಗುವಂತೆ ಭತ್ಯೆಗಳಿರುತ್ತದೆ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ವಿದ್ಯಾರ್ಹತೆ, ಮೆರಿಟ್​, ವೃತ್ತಿ ಅನುಭವ ಆಧಾರದ ಮೇಲೆ ಮೌಖಿಕ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 29.7.2021
    ಅಧಿಸೂಚನೆಗೆ: http://www.kuidfc.com/careers/#!

    ಮಾಹಿತಿಗೆ: http://www.kuidfc.com

    ಬಿಎಸ್‌ವೈ ಚಮಚ ಅಲ್ಲದಿರೋದೇ ದೊಡ್ಡ ಸಮಸ್ಯೆ- ಅದಕ್ಕೇ ಇಲ್ಲಸಲ್ಲದ ಪಿತೂರಿ ಎಂದ ಸುಬ್ರಮಣಿಯನ್‌ ಸ್ವಾಮಿ

    ಉತ್ತಮ ಉದ್ಯೋಗಿಗಳಿಗೆ ಬೆಂಜ್‌ ಕಾರ್‌ ಗಿಫ್ಟ್‌: ಕೋವಿಡ್‌ ನಡುವೆಯೂ ಉಡುಗೊರೆಗಳ ಮಹಾಪೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts