More

    ವಿಶ್ವದ ಅತಿ ಎತ್ತರದ ಕುದುರೆ ಬಿಗ್‌ ಜೇಕ್‌ ಸಾವು- ಇದರ ವಿಶೇಷತೆ ಏನು ಗೊತ್ತಾ?

    ನ್ಯೂಯಾರ್ಕ್‌: ವಿಶ್ವದ ಅತ್ಯಂತ ಎತ್ತರದ ಕುದುರೆ ಎಂದೇ ಎನಿಸಿಕೊಂಡಿರುವ ಬಿಗ್‌ ಜೇಕ್‌ ಮೃತಪಟ್ಟಿದೆ. ಅಮೆರಿಕದ ವಿಸ್ಕ್‌ ಆನ್ಸಿನ್‌ನ ಪೋಯೆನೆಟ್​​​ನಲ್ಲಿರುವ ಸ್ಮೋಕಿ ಹಲೋ ಫಾರ್ಮ್​​​ನಲ್ಲಿ ಇದು ವಾಸವಾಗಿತ್ತು. 20 ವರ್ಷದ ಜೇಕ್‌ ಅನ್ನು ಫಾರ್ಮ್​ನ ಮಾಲೀಕ ಜೆರ್ರಿ ಗಿಲ್ಬರ್ಟ್ ಮತ್ತು ಅವರ ಪತ್ನಿ ವ್ಯಾಲೀಸಿಯಾ ಗಿಲ್ಬರ್ಟ್​ ಸಾಕುತ್ತಿದ್ದರು. ​

    ಕೆಲ ದಿನಗಳ ಹಿಂದೆಯೇ ಈ ಕುದುರೆ ಮೃತಪಟ್ಟಿದ್ದು, ಇದೀಗ ಬೆಳಕಿಗೆ ಬಂದಿದೆ. ಬಿಗ್‌ ಜೇಕ್‌ನಲ್ಲಿ ಹಲವು ವಿಶೇಷತೆಗಳು ಇದ್ದವು. ಅದೇನೆಂದರೆ, ಈ ಕುದುರೆ 6 ಅಡಿ 10 ಇಂಚು ಅಂದರೆ ಸುಮಾರು 201 ಮೀಟರ್​ ಎತ್ತರ ಇತ್ತು. 1,136 ಕೆಜಿ ತೂಕವಿತ್ತು. ಸಾಮಾನ್ಯವಾಗಿ ಅತಿದೊಡ್ಡ ಕುದುರೆ ಎಂದು ಐದು ಅಡಿಗಳಷ್ಟು ಎತ್ತರವಿರುತ್ತದೆ. 300 ರಿಂದ 1000 ಕೆ.ಜಿಯವರೆಗೆ ತೂಗುತ್ತದೆ.

    ಆದರೆ ಜೇಕ್‌ ಇವುಗಳನ್ನು ಮೀರಿಸಿದ್ದ ಹಿನ್ನೆಲೆಯಲ್ಲಿ ವಿಶ್ವದ ಅತ್ಯಂತ ಎತ್ತರದ ಕುದುರೆ ಎಂದು 2020ರಲ್ಲಿ ಗಿನ್ನೆಸ್‌ ವಿಶ್ವದಾಖಲೆ ಪುಟ ಸೇರಿತ್ತು. ನೆಬ್ರಾಸ್ಕಾದಲ್ಲಿ ಹುಟ್ಟಿದ್ದ ಈ ಕುದುರೆ ಅದಾಗಲೇ 109 ಕೆಜಿ ತೂಕ ಇತ್ತು. ಎತ್ತರಕ್ಕೆ, ದಷ್ಟಪುಷ್ಟವಾಗಿದ್ದ ಈ ಪ್ರಾಣಿಯನ್ನು ನೋಡಲು ತುಂಬ ಖುಷಿಯಾಗುತ್ತಿತ್ತು ಎಂದು ಮಾಲೀಕ ಜೆರ್ರಿ ನೆನೆದು ದುಃಖಿಸುತ್ತಿದ್ದಾರೆ.

    ಜೇಕ್‌ ನಮ್ಮ ಕುಟುಂಬದವರಂತೆ ಇದ್ದ. ಅವನ ಸಾವು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದನ್ನು ಕಟ್ಟಲಾಗುತ್ತಿದ್ದ ಸ್ಥಳವನ್ನು ಹಾಗೆಯೇ ಖಾಲಿ ಬಿಡುತ್ತಿದ್ದೇವೆ. ಈ ಸ್ಥಳದಲ್ಲಿ ಇಟ್ಟಿಗೆಯನ್ನು ಹಾಕಿ, ಹೊರಭಾಗದಲ್ಲಿ ಬಿಗ್‌ ಜೇಕ್‌ ಚಿತ್ರ ಮತ್ತು ಹೆಸರು ಇರುವ ಪೋಸ್ಟರ್ ಹಾಕುತ್ತೇವೆ. ಜೆಕ್​ ಇಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ. ಅವನಿಲ್ಲದೆ ದೊಡ್ಡ ಶೂನ್ಯ ಆವರಿಸಿದೆ ಎಂದು ಜೆರ್ರಿ ದಂಪತಿ ಕಣ್ಣೀರಾದರು.

    ವಿದ್ಯಾ ಬಾಲನ್‌ಗೆ ಭಾರತೀಯ ಸೇನೆ ಅತ್ಯುನ್ನತ ಗೌರವ: ಫೈರಿಂಗ್‌ ರೇಂಜ್‌ಗೆ ನಟಿಯ ಹೆಸರು

    ಕೇಂದ್ರದಲ್ಲಿ ಶೋಭಾಗೆ ಸಚಿವ ಸ್ಥಾನದ ನಿರೀಕ್ಷೆ- ಹುದ್ದೆ ಕಳೆದುಕೊಳ್ತಾರಾ ಸದಾನಂದಗೌಡ?

    VIDEO: ಮಾಟದಿಂದ ಆಸ್ತಿ ವಿಷಯ ಬಗೆಹರಿಸ್ತೇನೆ ಎಂದು ದುಡ್ಡು ಗುಳುಂ ಮಾಡಿದ ಮಂತ್ರವಾದಿಗೆ ಬಿತ್ತು ಗೂಸಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts