More

    ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಿಂದ ರಾಜ್ಯದ ವಿವಿಧೆಡೆ 21 ಅತಿಥಿ ಉಪನ್ಯಾಸಕರ ಹುದ್ದೆಗೆ ಆಹ್ವಾನ

    ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿತಾವಿ) 2021-22ನೇ ಸಾಲಿನಲ್ಲಿ ವಿಶ್ವವಿದ್ಯಾಲಯ ಗಣಕಯಂತ್ರ ವಿಜ್ಞಾನ ಮತ್ತು ಅಭಿಯಾಂತ್ರಿಕ ವಿಭಾಗದ ಬೆಳಗಾವಿ, ಕಲಬುರ್ಗಿ, ಮೈಸೂರು ಮತ್ತು ಮುದ್ದೇನಹಳ್ಳಿ ಕೇಂದ್ರಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಪ್ರತ್ಯೇಕವಾಗಿ ಆಯಾ ವಿಭಾಗಗಳ ಹೆಸರನ್ನು ನಮೂದಿಸಿ ಪ್ರತ್ಯೇಕ ಇಮೇಲ್ ಕಳುಹಿಸಲು ಸೂಚಿಸಲಾಗಿದೆ. ಅಧಿಸೂಚನೆ ಜತೆ ಅರ್ಜಿ ನಮೂನೆ ನೀಡಲಾಗಿದ್ದು, ಆ ಮಾದರಿಯಲ್ಲೇ ಅರ್ಜಿ ಭರ್ತಿ ಮಾಡಿ ಸಲ್ಲಿಸತಕ್ಕದ್ದು.

     ಒಟ್ಟು ಹುದ್ದೆಗಳು: 21

    ಹುದ್ದೆ ವಿವರ

    – ಬೆಳಗಾವಿ ವಿಟಿಯು ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್

    * ಎಂಟೆಕ್ ಇನ್ ಸಿಎಸ್​ಇ ಮತ್ತು ಸಿಎನ್​ಇ- 2

    * ಎಂಸಿಎ – 4

    * ಮ್ಯಾಥಮೆಟಿಕ್ಸ್ – 1

    * ಇಂಗ್ಲಿಷ್- 1

    – ಕಲಬುರಗಿ ವಿಟಿಯು

    * ಎಂ.ಟೆಕ್ ಇನ್ ಸಿಎಸ್​ಇ – 1

    * ಎಂಸಿಎ – 2

    – ಮೈಸೂರು ವಿಟಿಯು

    * ಎಂ.ಟೆಕ್ ಇನ್ ಸಿಎಸ್​ಇ – 1

    * ಎಂಸಿಎ – 5

    – ಮುದ್ದೇನಹಳ್ಳಿ ವಿಟಿಯು

    * ಎಂಸಿಎ – 3

    * ಮ್ಯಾಥಮೆಟಿಕ್ಸ್ – 1

    ಶೈಕ್ಷಣಿಕ ಅರ್ಹತೆ: ಬೋಧನಾ ವಿಷಯಕ್ಕೆ ಸಂಬಂಧಿಸಿದಂತೆ ಬಿಇ/ ಬಿ.ಟೆಕ್, ಎಂಇ/ ಎಂ.ಟೆಕ್, ಎಂಸಿಎ, ಎಂಎಸ್ಸಿ (ಮ್ಯಾಥಮೆಟಿಕ್ಸ್), ನೆಟ್, ಸ್ಲೆಟ್/ ಪಿಎಚ್.ಡಿ ಮಾಡಿರಬೇಕು. ಪದವಿಯನ್ನು ಪ್ರಥಮ ದರ್ಜೆಯಲ್ಲೇ ಉತ್ತೀರ್ಣರಾಗಿರಬೇಕು. ಎಂಎಸ್ಸಿಯಲ್ಲಿ ಶೇ.55 ಅಂಕ ಪಡೆದಿರಬೇಕು.

    ವೇತನ: ಮಾಸಿಕ 25,000 ರೂ. ವೇತನ ನಿಗದಿಪಡಿಸಲಾಗಿದೆ.

    ಸೂಚನೆ: ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಅಗತ್ಯ ದಾಖಲೆ, ಪ್ರಮಾಣಪತ್ರ ಹಾಗೂ ಶುಲ್ಕ ಪಾವತಿಯ ರಶೀದಿಯೊಂದಿಗೆ ನ.16ರ ಸಂಜೆ 5 ಗಂಟೆ ಒಳಗೆ ಗಣಕಯಂತ್ರ ವಿಜ್ಞಾನ ಮತ್ತು ಅಭಿಯಾಂತ್ರಿಕ ವಿಭಾಗ, ವಿ.ತಾ.ವಿ, ಬೆಳಗಾವಿ ವಿಳಾಸಕ್ಕೆ ಅಂಚೆ ಅಥವಾ ಖುದ್ದಾಗಿ ಸಲ್ಲಿಸಲು ತಿಳಿಸಲಾಗಿದೆ. ಆನ್​ಲೈನ್ ಅರ್ಜಿ ಸಲ್ಲಿಕೆ ವಿಧಾನವನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 250 ರೂ., ಇತರ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಆರ್​ಟಿಜಿಎಸ್/ ನೆಫ್ಟ್ ಮೂಲಕ ಪಾವತಿಸಲು ಸೂಚಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 16.11.2021

    ಅರ್ಜಿ ಸಲ್ಲಿಸುವ ಮೇಲ್ ವಿಳಾಸ: [email protected]

    ಅಧಿಸೂಚನೆಗೆ: https://bit.ly/3ktUvJY

    ಮಾಹಿತಿಗೆ: vtu.ac.in

    ಎಸ್‌ಎಸ್‌ಎಲ್‌ಸಿ, ಐಟಿಐ ಮುಗಿಸಿರುವಿರಾ? ರೈಲ್ವೆ ಇಲಾಖೆಯಲ್ಲಿ 1785 ಹುದ್ದೆಗಳಿಗೆ ಅರ್ಜಿ ಆಹ್ವಾನ

    ‘ನೈಜ ಹೋರಾಟಗಾರ ನೇತಾಜಿಯನ್ನೇ ಹಸ್ತಾಂತರಿಸಿದ ಕುತಂತ್ರಿಗಳು- ಸಾಕ್ಷಿ ನೋಡಿ… ಇನ್ನೊಂದು ಕೆನ್ನೆ ತೋರಿಸಿದ್ರೆ ಸಿಗೋದು ಭಿಕ್ಷೆ ಅಷ್ಟೇ…’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts