More

    ಅಪಘಾತದಲ್ಲಿ ಮಗ ಸತ್ತಿದ್ದಾನೆ ಎಂದು ಪಾಲಕರಿಗೆ ಗೊತ್ತಾದದ್ದು 27 ವರ್ಷಗಳ ಬಳಿಕ!

    ಗ್ರಾನ್ಡಾ (ಸ್ಪೇನ್​): ತಮ್ಮ ಮಗ ಅಪಘಾತದಲ್ಲಿ ಮೃತಪಟ್ಟಿರುವ ಸುದ್ದಿಯೊಂದು ಅವರ ಪಾಲಕರಿಗೆ 27 ವರ್ಷಗಳ ಬಳಿಕ ತಿಳಿದುಬಂದಿರುವ ವಿಚಿತ್ರ ಘಟನೆಯೊಂದು ಸ್ಪೇನ್​ನ​ ದಕ್ಷಿಣ ಭಾಗದ ಗ್ರಾನ್ಡಾ ಬಳಿಯ ಬಾಜಾ ಎಂಬ ಪಟ್ಟಣದಲ್ಲಿ ನಡೆದಿದೆ.

    1990ರಲ್ಲಿ ಮೃತಪಟ್ಟಿದ್ದ 24 ವರ್ಷದ ಯುವಕನ ಸಾವಿನ ಕುತೂಹಲದ ಪ್ರಕರಣವಿದು. ತಮ್ಮ ಮಗ ಕಾರಿನಲ್ಲಿ ಹೋದವನು ವಾಪಸ್​ ಬರಲಿಲ್ಲ ಎಂದು ಚಿಂತೆಗೀಡಾದ್ದ ಪಾಲಕರು ಆತನಿಗಾಗಿ ಹುಡುಕಾಟ ನಡೆಸದ ಜಾಗವಿಲ್ಲ. ಡಿಸೆಂಬರ್​ 8ರಂದು ಹೋಗಿದ್ದ ಮಗ ವಾಪಸ್​ ಆಗಿರಲಿಲ್ಲ. ನಾಲ್ಕು ದಿನ ಕಾದು ಕಾದು ಸುಸ್ತಾದ ಪಾಲಕರು ನಂತರ ಮಗ ಕಾಣೆಯಾಗಿರುವುದಾಗಿ ದೂರು ದಾಖಲು ಮಾಡಿದ್ದರು.

    ಇತ್ತ ಅವರ ಮಗ ಕಾರು ಅಪಘಾತದಲ್ಲಿ ಮೃತಪಟ್ಟಿದ್ದ. ಆದರೆ ಪೊಲೀಸರು ಆತನ ಗುರುತನ್ನು ಪತ್ತೆ ಹಚ್ಚಿದ್ದರೂ ಆ ಬಗ್ಗೆ ಪಾಲಕರಿಗೆ ಮಾಹಿತಿಯನ್ನೇ ನೀಡರಲಿಲ್ಲ.

    ಇದನ್ನೂ ಓದಿ: ಡಿವೋರ್ಸ್​ ವೇಳೆ ಏನೂ ಬೇಡ ಎಂದವಳು ಈಗ ಬಿಲ್​ ಕಳಿಸಿ ಹೆದರಿಸುತ್ತಿದ್ದಾಳೆ; ಪರಿಹಾರವೇನು?

    ಇತ್ತ ಪಾಲಕರು ಮಾತ್ರ ಪೊಲೀಸ್​ ಠಾಣೆ ಅಲೆದೂ ಅಲೆದೂ ಸುಸ್ತಾದರು. ತಮ್ಮ ಮಗ ಬದುಕಿರಬಹುದು ಎಂದು ಅಷ್ಟು ವರ್ಷ ಕಾದಿದ್ದ ಪಾಲಕರಿಗೆ ಈಗ ಶಾಕ್​ ಆಗಿದೆ. 27 ವರ್ಷಗಳ ನಂತರ ಅಂದರೆ 2017ರಲ್ಲಿ ಎಚ್ಚರಗೊಂಡ ಪೊಲೀಸ್​ ಇಲಾಖೆ 1990ರ ಫೈಲ್​ ಒಂದನ್ನು ತೆಗೆದು ನೋಡಿದೆ. ಆಗಲೇ ಪಾಲಕರಿಗೆ ತಿಳಿದದ್ದು ತಮ್ಮ ಮಗ ಸತ್ತಿದ್ದಾನೆಂದು.

    ಪೊಲೀಸ್​ ಅಧಿಕಾರಿಗಳ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪಾಲಕರು ಅದರ ವಿರುದ್ಧ ಕೋರ್ಟ್​ ಮೊರೆ ಹೋಗಿದ್ದರು. ಪೊಲೀಸರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಕೋರ್ಟ್​ ಪರಿಹಾರದ ರೂಪವಾಗಿ ಯುವಕನ ತಾಯಿಗೆ 65 ಸಾವಿರ ಡಾಲರ್​ (ಸುಮಾರು 48 ಲಕ್ಷ ರೂಪಾಯಿ) ಹಾಗೂ ಕುಟುಂಬದವರಿಗೆ 18 ಸಾವಿರ ಡಾಲರ್​ (ಸುಮಾರು 13 ಲಕ್ಷ ರೂಪಾಯಿ) ಪರಿಹಾರ ನೀಡುವಂತೆ ಪೊಲೀಸ್​ ಇಲಾಖೆಗೆ ಆದೇಶಿಸಿದೆ.

    ಮರಾಠಾ ಆಯ್ತು, ಈಗ ವೀರಶೈವ ನಿಗಮ-ಮುಖ್ಯಮಂತ್ರಿ ಹೊರಡಿಸಿದ್ರು ಆದೇಶ

    ವರ್ಷಗಟ್ಟಲೆ ಒಂದೇ ಮನೆಯಲ್ಲಿದ್ವಿ… ತನು-ಮನ ಎಲ್ಲಾ ಹಂಚಿಕೊಂಡ್ವಿ… ಆದ್ರೆ ಈಗ…

    ಪಟಾಕಿಗೆ ಬಲಿಯಾದ ಬಿಜೆಪಿ ಸಂಸದೆಯ ಏಕೈಕ ಮೊಮ್ಮಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts