More

    ಜಾಲತಾಣದಲ್ಲಿ ಆಕ್ಟಿವ್ ಇರೋ ಬಾಲಕಿಯರೇ ಇವನ ಟಾರ್ಗೆಟ್​- ಪಾಲಕರೇ ಎಚ್ಚರ…!

    ಬೆಂಗಳೂರು: ಅಪ್ರಾಪ್ತ ಮಕ್ಕಳ ಕೈಯಲ್ಲಿ ಸ್ಮಾರ್ಟ್​ಫೋನ್​ ಕೊಡಬಾರದು ಎಂದು ಹೇಳಲಾಗುತ್ತಿದ್ದರೂ, ಇದೀಗ ಅದು ಅಸಾಧ್ಯವಾದ ಮಾತೇ ಆಗಿಬಿಟ್ಟಿದೆ. ಅದರಲ್ಲಿಯೂ ಆನ್​ಲೈನ್​ ಕ್ಲಾಸ್​ ಬಂದ ಮೇಲಂತೂ ಮಕ್ಕಳಿಗೆ ಸ್ಮಾರ್ಟ್​ಫೋನ್​ ಅಗತ್ಯವಾಗಿಬಿಟ್ಟಿದೆ.

    ಆದರೆ ಇದೇ ವಿಷಯವನ್ನು ದುರ್ಬಳಕೆ ಮಾಡಿಕೊಂಡಿರುವ ಹಲವು ಮಕ್ಕಳು ತಮ್ಮ ಹುಟ್ಟಿದ ದಿನವನ್ನು ಹೆಚ್ಚು ಮಾಡಿಕೊಂಡು ಫೇಸ್​ಬುಕ್​ ಸೇರಿದಂತೆ ಇತರ ಜಾಲತಾಣದಲ್ಲಿ ಖಾತೆ ತೆಗೆಯುತ್ತಿದ್ದಾರೆ. 18 ವರ್ಷ ವಯಸ್ಸಾದಂತೆ ಬಿಂಬಿಸಿ ಪಾಲಕರ ಗಮನಕ್ಕೂ ಬಾರದೇ (ಕೆಲವೊಮ್ಮೆ ಇದು ಪಾಲಕರಿಗೆ ತಿಳಿದಿದ್ದರೂ ಸುಮ್ಮನಾಗುತ್ತಾರೆ!) ಖಾತೆ ತೆರೆದಿದ್ದಾರೆ. ಕೆಲವು ತಾಣಗಳಿಗೆ ವಯಸ್ಸಿನ ಮಿತಿ ಇರುವುದಿಲ್ಲ. ಅದರಲ್ಲಿಯೂ ಅಪ್ರಾಪ್ತೆಯರು ಆ್ಯಕ್ಟೀವ್​ ಇರುತ್ತಾರೆ.

    ತಮ್ಮ ಮಕ್ಕಳು ಅದರಲ್ಲಿಯೂ ಹೆಣ್ಣುಮಕ್ಕಳು ಜಾಲತಾಣದಲ್ಲಿ ಏನು ಮಾಡುತ್ತಾರೆ ಎಂದು ಪಾಲಕರಿಗೂ ತಿಳಿಯುತ್ತೋ, ಬಿಡತ್ತೋ, ಆದರೆ ಇಂಥ ಕಾಮುಕರಿಗಂತೂ ಸದಾ ಅವರ ಮೇಲೆ ಕಣ್ಣಿರುತ್ತದೆ.

    ಅಂಥದ್ದೇ ಒಬ್ಬ ಕಾಮುಕ ಈ ಚಿತ್ರದಲ್ಲಿ ಇರುವಾತ. ಬೆಂಗಳೂರಿನ ಕಾಡುಗೋಡಿ ನಿವಾಸಿ ಜಗದೀಶ್ ಎಂಬುದು ಈತನ ಹೆಸರು. ಈತನ ಟಾರ್ಗೆಟ್​ ಸಾಮಾಜಿಕ ಜಾಲತಾಣದಲ್ಲಿ ಇರುವ ಬಾಲಕಿಯರನ್ನು ಟಾರ್ಗೆಟ್​ ಮಾಡುವುದು.

    ಇದನ್ನೂ ಓದಿ: ಒಮ್ಮೊಮ್ಮೆ ಇಂಥ ವಿಚಿತ್ರವೂ ಆಗುತ್ತೆ! ಎಮ್ಮೆಯೇ ಬಂದು ಜಗಳ ಬಗೆಹರಿಸಿತು…

    ಯುವತಿಯರ ಹೆಸರಿಲ್ಲಿ ನಕಲಿ ಇನ್​ಸ್ಟಾಗ್ರಾಮ್ ಅಕೌಂಟ್ ತೆರೆದು ಈತ ಬಾಲಕಿಯರ ಮೇಲೆ ಕಣ್ಣಿಡುತ್ತಿದ್ದ. ಅವರನ್ನೇ ಟಾರ್ಗೆಟ್​ ಮಾಡುತ್ತಿದ್ದ. ಬೆತ್ತಲೆ ಫೋಟೋಗೆ ಡಿಮಾಂಡ್​ ಮಾಡುತ್ತಿದ್ದ. ಕೆಲವರು ಈತನ ಬಗ್ಗೆ ತಿಳಿಯದೇ ಫೋಟೋ ಕಳಿಸಿದ್ದೂ ಇದೆ.

    ನಂತರ ಅದೇ ಫೋಟೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ. ನಂತರ ಅವರ ನಂಬರ್​ ಪಡೆದು ಫೋಟೋ ಕಳುಹಿಸಿ ತನ್ನ ಕಾಮುಕತನ ತೋರಿಸುತ್ತಿದ್ದ.
    ಇದೀಗ ಈತನ ವಿರುದ್ಧ ದೂರು ದಾಖಲಾಗಿದೆ. ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಿರುವ ಪೊಲೀಸರು ಕೊನೆಗೂ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಿಜೆಪಿ ಟಿಕೆಟ್ ಬಿಕ್ಕಟ್ಟು ಶಮನ- ಅಧಿಕೃತ ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆ?

    ಉಸಿರಾಟದ ಸಮಸ್ಯೆ: ರಾಷ್ಟ್ರಪತಿ ಪದಕ ಪುರಸ್ಕೃತ ನಿವೃತ್ತ ಎಸ್​ಪಿ ನೂರುಲ್ಲಾ ವಿಧಿವಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts