More

    ಬೆಳ್ಳಂಬೆಳಗ್ಗೆ ಚಡಡಣದಲ್ಲಿ ತಡೆಗೋಡೆ ಕುಸಿತ: ತಪ್ಪಿದ ಭಾರಿ ದುರಂತ

    ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಧೂಳಖೇಡ ಗ್ರಾಮದ ಮುಂಭಾಗದಲ್ಲಿ ಓವರ್ ಬ್ರಿಡ್ಜಗೆ ಹೊಂದಿಕೊಂಡ ರಸ್ತೆ ತಡೆಗೋಡೆ ಕುಸಿದ ಘಟನೆ ಬೆಳಗ್ಗೆ ನಡೆದಿದೆ.
    ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಮಾಡುತ್ತಿರುವ ಸಂದರ್ಭದಲ್ಲಿ ಧೂಳಖೇಡ ಗ್ರಾಮದ ಮುಂಭಾಗದಲ್ಲಿ ಓವರ್ ಬ್ರಿಡ್ಜ್ ನಿರ್ಮಾಣಗೊಂಡಿದೆ. ಅದಕ್ಕೆ ಹೊಂದಿಕೊಂಡು ರಸ್ತೆ ತಡೆಗೋಡೆ ನಿರ್ಮಿಸಿದ್ದಾರೆ. ರಸ್ತೆ ಕಾಮಗಾರಿ ಮಾಡಲು ಜೆಸಿಬಿ ಚಲಾಯಿಸುತ್ತಿರುವ ಸಂದರ್ಭದಲ್ಲಿ ತಡೆಗೋಡೆ ಕುಸಿದಿದೆ. ಅದೃಷ್ಟ ಎಂಬಂತೆ ರಸ್ತೆ ಬದಿಯಲ್ಲಿ ಯಾರು ಬಂದಿರಲಿಲ್ಲ. ಇದರಿಂದ ಯಾವುದೇ ಪ್ರಾಣಪಾಯ ಕಂಡು ಬಂದಿಲ್ಲ.

    ಇದನ್ನು ಕಂಡ ಗ್ರಾಮಸ್ಥರು ರಸ್ತೆ ಸಂಪೂರ್ಣ ಕಳಪೆ ಮಟ್ಟದ್ದಾಗಿದೆ. ಕೂಡಲೇ ಮೇಲಧಿಕಾರಿಗಳು ಕಾಮಗಾರಿ ಪಾಶೀಲಿಸಿ ಕಳಪೆ ಕಾಮಗಾರಿಯಿಂದ ನಿರ್ಮಾಣವಾಗಿರುವ ತಡೆಗೋಡೆ ತೆರವುಗೊಳಿಸಿ ಕಂಕ್ರಿಟ್ ತಡೆಗೋಡೆ ನಿರ್ಮಿಸಿ ರಸ್ತೆ ಮಾಡಬೇಕು ಎಂದು ಆಗ್ರಹಿಸಿದರು. ಅಧಿಕಾರಿಗಳು ಹಾಗೂ ಗುತ್ತಿದಾರರು ಸೇರಿಕೊಂಡು ಮುಗ್ದ ಜನರ ಜೊತೆ ಚಲ್ಲಾಟ ಆಡಬೇಡಿ ಎಂದ ಅವರು, ಇದೆ ಕಾಮಗಾರಿ ಮುಂದುವರೆದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

    ಗ್ರಾಮಸ್ಥರಾದ ಭೀಮಾಶಂಕರ ವಾಲಿಕಾರ ರಮೇಶ ಬೇಳ್ಳೆನವರ ಬಂದೇನವಾಜ ಮುಲ್ಲಾ ರಾಜಕುಮಾರ್ ಬಿರಾದಾರ ದಿಲೀಪ್ ಶಿವಶರಣರ ಗ್ರಾಮಸ್ಥರು ಇದ್ದರು.

    ‘ಪಶ್ಚಿಮ ಬಂಗಾಳ’ ಬೇಡ ಎಂದ ಮಮತಾ ಬ್ಯಾನರ್ಜಿ: ಹೆಸರು ಬದಲಿಸಲು ಪ್ರಧಾನಿಗೆ ಮನವಿ

    ಐಷಾರಾಮಿ ಕಾರಿಗೆ ತೆರಿಗೆ ಕಟ್ಟದೇ ಕೋರ್ಟ್​ನಿಂದ ಛೀಮಾರಿ ಹಾಕಿಸಿಕೊಂಡಿದ್ದ ನಟನೀಗ ಸ್ವಲ್ಪ ನಿರಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts