More

    ಅನುದಾನ ಸಿಕ್ಕರೂ ನಿರ್ಮಿಸದ ಶೌಚಗೃಹ: ಗ್ರಾ.ಪಂ ಅಧ್ಯಕ್ಷೆಯನ್ನೇ ಕೂಡಿ ಹಾಕಿದ ಗ್ರಾಮಸ್ಥರು!

    ಬಳ್ಳಾರಿ: ಗ್ರಾಮದಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ ಎಂಬ ಕಾರಣಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯನ್ನೇ ಕೂಡಿ ಹಾಕಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

    ಸಂಡೂರು ತಾಲೂಕಿನ ತೋರಣಗಲ್ ಹೋಬಳಿ ವಿಠಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾ. ಪಂ ಅಧ್ಯಕ್ಷೆ ಮಂಗಳಮ್ಮ ಜತೆ ಗ್ರಾ.ಪಂ ಸದಸ್ಯ ಮಹಾಂತೇಶ್‌ ಅವರನ್ನೂ ಕೂಡ ಹಾಕಿದ್ದಾರೆ. ನಂತರ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.

    ಗ್ರಾಮದ 2ನೇ ವಾರ್ಡಿನಲ್ಲಿ ಮಹಿಳಾ ಶೌಚಾಲಯ ನಿರ್ಮಿಸಲು ಒತ್ತಾಯಿಸಿ ಈ ಪ್ರತಿಭಟನೆ. ಸಮರ್ಪಕ ಶೌಚಗೃಹ ಇಲ್ಲದೇ ನಿತ್ಯ ಮಹಿಳೆಯರು, ವೃದ್ದರು ಪರದಾಡುವಂತಾಗಿದೆ. ಆದರೆ ಎಷ್ಟೇ ಮನವಿ ಮಾಡಿದರೂ ಈ ಸಮಸ್ಯೆಯನ್ನು ಇದುವರೆಗೆ ಬಗೆಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಅಧ್ಯಕ್ಷೆ ಮತ್ತು ಸದಸ್ಯರನ್ನು ಕೂಡಿ ಹಾಕಿದ್ದಾರೆ.

    ಸರ್ಕಾರದಿಂದ ಮನೆಗೊಂದು ಶೌಚಗೃಹಕ್ಕೆ ಅನುದಾನ ಸಿಗುತ್ತಿದೆ. ಇದರ ಹೊರತಾಗಿಯೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನುವುದು ಸ್ಥಳೀಯರ ಆಕ್ರೋಶ. ಒಳಚರಂಡಿ ವ್ಯವಸ್ಥೆಯೂ ಸರಿಯಾಗಿ ಆಗಿಲ್ಲ. ಇದರಿಂದ ಜನರಿಗೆ ತೀವ್ರ ತೊಂದರೆ ಆಗಿದೆ ಎಂದಿದ್ದಾರೆ ಜನರು.

    ಇದರ ಜತೆಗೆ, ವಿಠಲಾಪುರ ಗ್ರಾಮದಲ್ಲಿ ಕಲ್ಲಿನ ಸಮಸ್ಯೆಯಿಂದಾಗಿ ಗುಂಡಿಗಳನ್ನ ತೆಗೆಯಲು ಸರ್ಕಾರದ ಪ್ರೋತ್ಸಾಹ ಸಾಕಾಗುತ್ತಿಲ್ಲ. ಆದ್ದರಿಂದ ಶೌಚಗೃಹ ನಿರ್ಮಿಸುವ ಯೋಜನೆ ಈ ಗ್ರಾಮದಲ್ಲಿ ವಿಫಲವಾಗಿದೆ.ಹೆಚ್ಚಿನ ಪ್ರೋತ್ಸಾಹಧನ ನೀಡಿ ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

    ಅನುದಾನ ಸಿಕ್ಕರೂ ನಿರ್ಮಿಸದ ಶೌಚಗೃಹ: ಗ್ರಾ.ಪಂ ಅಧ್ಯಕ್ಷೆಯನ್ನೇ ಕೂಡಿ ಹಾಕಿದ ಗ್ರಾಮಸ್ಥರು!

    ಎಸ್‌ಬಿಐ ಗ್ರಾಹಕರಾಗಿದ್ದರೆ ಕೂಡಲೇ ಈ ಕೆಲಸ ಮಾಡಿ: ಇಲ್ಲದಿದ್ದರೆ ಸಮಸ್ಯೆಗೆ ಸಿಲುಕಲಿದೆ ಬ್ಯಾಂಕ್‌ ಅಕೌಂಟ್‌!

    ಸತ್ತು ಹೋಗಿದ್ದಾನೆಂದ ಅಲ್‌ ಕೈದಾ ಮುಖ್ಯಸ್ಥ ಜೀವಂತ! 26/11 ಮಾದರಿಯ ಮತ್ತೊಂದು ದಾಳಿ ಭಯದಲ್ಲಿ ಅಮೆರಿಕ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts