More

    ಪಾಲಿಕೆ ಅಧಿಕಾರಿಗಳಿಂದ ಭಾರಿ ಗೋಲ್‌ಮಾಲ್‌- ನಕಲಿ ರಸೀತಿ ಕೊಟ್ಟು 4 ಲಕ್ಷ ರೂ. ಟೋಪಿ: ಕೇಸ್‌ ದಾಖಲು

    ಬೆಂಗಳೂರು: ಆಸ್ತಿ ಕಂದಾಯ ಪಾವತಿ ಮಾಡಿದ್ದ ವ್ಯಕ್ತಿಗೆ ನಕಲಿ ಕಂದಾಯ ರಸೀದಿ ಕೊಟ್ಟು ವಂಚನೆ ಮಾಡಿದ ಆರೋಪದ ಮೇಲೆ ಬಿಬಿಎಂಪಿಯ ನಾಲ್ವರ ಅಧಿಕಾರಿಗಳ ವಿರುದ್ಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಯಡಿಯೂರು ಆಂಜನೇಯ ದೇವಸ್ಥಾನ ನಿವಾಸಿ ಟಿ.ರಮೇಶ್​ ಎಂಬುವರು ದೂರು ನೀಡಿದ್ದಾರೆ. ಈ ಮೇರೆಗೆ ಯಡಿಯೂರು ಬಿಬಿಎಂಪಿ ಕಚೇರಿ ಕಂದಾಯ ಇನ್​ಸ್ಪೆಕ್ಟರ್​ ಎಚ್​.ರಾಮಯ್ಯ, ಕಂದಾಯ ವಸೂಲಿಗಾರ ಶ್ರೀನಿವಾಸ, ಕಂಪ್ಯೂಟರ್​ ಆಪರೇಟರ್​ ಪ್ರದಿಪ್​ ಮತ್ತು ಮಂಜುನಾಥ್​ ಎಂಬುವರ ವಿರುದ್ಧ ಎಫ್‌ಐಆರ್​ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    2010ರ ಜನವರಿಯಲ್ಲಿ ರಮೇಶ್​, ಕಂದಾಯ ಪಾವತಿ ಮಾಡಲು ಯಡಿಯೂರು ಬಿಬಿಎಂಪಿ ಕಚೇರಿಗೆ ಹೋಗಿದ್ದಾಗ 2010ರಿಂದ 2018ರ ವರೆಗೆ 4 ಲಕ್ಷ ರೂ. ಕಂದಾಯ ಸ್ವೀಕರಿಸಿ ಆರೋಪಿತ ಅಧಿಕಾರಿಗಳು ರಸೀದಿ ನೀಡಿದ್ದರು. ಮತ್ತೆ ಏಪ್ರಿಲ್​ನಲ್ಲಿ 2018ರಿಂದ ಇಲ್ಲಿಯವರೆಗೆ ಕಂದಾಯ ಪಾವತಿ ಮಾಡಲು ಯಡಿಯೂರು ಪಾಲಿಕೆ ಕಚೇರಿಗೆ ಹೋಗಿದ್ದಾಗ 2010ರಿಂದ ಪಾವತಿ ಮಾಡಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಬರಿಗೊಂಡ ರಮೇಶ್​, ಈ ಹಿಂದೆ ಕಂದಾಯ ಪಾವತಿ ಮಾಡಿದ್ದ ರಸೀದಿ ತೋರಿಸಿದ್ದಾಗ ಪರಿಶೀಲನೆ ನಡೆಸಿದ ಅಧಿಕಾರಿಗಳು ನಕಲಿ ರಸೀದಿ ಎಂದು ಖಚಿತಪಡಿಸಿದ್ದಾರೆ.

    ಕೊನೆಗೆ ದಿಕ್ಕು ತೋಚದೆ ಈ ಹಿಂದೆ 4 ಲಕ್ಷ ರೂ. ಪಡೆದು ನಕಲಿ ರಸೀದಿ ನೀಡಿದ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ಇದರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿವುದಾಗಿ ಬನಶಂಕರಿ ಪೊಲೀಸರು ತಿಳಿಸಿದ್ದಾರೆ.

    ಊಟಕ್ಕೂ ಮೊದಲು ಪ್ರಾರ್ಥನೆ ಮಾಡುವ ನಾಯಿ- ಸಕತ್‌ ವೈರಲ್‌ ಆಗ್ತಿದೆ ಈ ವಿಡಿಯೋ

    ಆಕ್ಸಿಜನ್‌ಗಾಗಿ ಅರಳಿ ಮರದ ಕೆಳಗೆ ಸೋಂಕಿತರ ದೌಡು- ಜಪ್ಪಯ್ಯ ಎಂದ್ರೂ ಆಸ್ಪತ್ರೆಗೆ ಬರಲೊಲ್ಲರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts