More

    ಕೋಟಿ ಬೆಲೆಯ ಪುರಾತನ ವಸ್ತುಗಳ ಮಾರಾಟಕ್ಕೆ ಯತ್ನಿಸಿದ ಬೆಂಗಳೂರಿಗನ ಬಂಧನ: ಇದು ಇಂಗ್ಲೆಂಡ್‌ ಲೇಡಿಯ ಕಥೆ…

    ಬೆಂಗಳೂರು: ಪುರಾತನ ವಸ್ತುಗಳನ್ನು ಕಾನೂನು ಬಾಹಿರವಾಗಿ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಯಲಹಂಕದ ಕಟ್ಟಿಗೇನಹಳ್ಳಿಯ ಆರ್ಯನ್ ಖಾನ್ (32) ಬಂಧಿತ. ಆನೆ ಪಾದ, ಯು ಬೋಸ್ಟ್ ವೆಸ್ಟ್ ವರ್ಲ್ಡ್ ಪುಸ್ತಕ, ತಾಮ್ರದ ಪ್ಲೇಟ್, ಜರ್ಮನ್ ಸಿಲ್ವರ್ ಸೌಟು ಸೇರಿದಂತೆ ಪ್ರಾಚೀನ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯ ಅಂದಾಜು 1 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ ಎಂದು ಪೂರ್ವ ವಿಭಾಗ ಡಿಸಿಪಿ ಡಾ.ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ.

    ಆಂಗ್ಲೋ ಇಂಡಿಯನ್ ಮಹಿಳೆ ಮನೆಯಲ್ಲಿ ಆರೋಪಿ ಆರ್ಯನ್ ಖಾನ್, ಕುಟುಂಬದ ಹಿರಿಯರು ಕೆಲಸ ಮಾಡಿದ್ದರು. ಆಂಗ್ಲೋ ಇಂಡಿಯನ್ ಲೇಡಿ, ಇಂಗ್ಲೆಂಡ್‌ಗೆ ವಾಪಸ್ ಹೋಗುವಾಗ ನೆನಪಿಗೆ ತನ್ನ ನೌಕರರಿಗೆ ಬ್ರಿಟಿಷ್‌ರಿಂದ ಬಂದಿದ್ದ ಕೆಲ ಪ್ರಾಚೀನ ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಇವುಗಳನ್ನು ಆರ್ಯನ್ ಖಾನ್, ಕುಟುಂಬಸ್ಥರು ಯಾರಿಗೂ ತೋರಿಸದೆ ಗೌಪ್ಯವಾಗಿ ಮನೆಯಲ್ಲಿ ಪ್ರಾಚೀನ ವಸ್ತುಗಳಾಗಿ ಕಾಪಾಡಿಕೊಂಡು ಬಂದಿದ್ದರು. ಕೆಲ ದಿನಗಳ ಹಿಂದೆ ಆರ್ಯನ್ ಖಾನ್ ಅವರ ಅಣ್ಣನ ಮಗ ಅನಾರೋಗ್ಯಕ್ಕೆ ತುತ್ತಾಗಿದ್ದ. ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದೇ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಆರ್ಯನ್ ಖಾನ್ ಕುಟುಂಬಸ್ಥರು, ತಮ್ಮ ಬಳಿ ಇರುವ ಪ್ರಾಚೀನ ಕಾಲದ ವಸ್ತುಗಳನ್ನು ಮಾರಾಟ ಮಾಡಿದರೆ ಕೈ ತುಂಬ ಹಣ ಸಿಗುತ್ತದೆ ಎಂದು ತಿಳಿದು ಗಿರಾಕಿಗಾಗಿ ಹುಡುಕಾಟ ನಡೆಸುತ್ತಿದ್ದರು.

    ಇತ್ತೀಚೆಗೆ ಕಾಡುಗೊಂಡನಹಳ್ಳಿಯ ಬಿಡಿಎ ಕಾಂಪ್ಲೆಕ್ಸ್ ಹಿಂಭಾಗ ಜೆ.ಎಸ್.ಎಸ್. ಶಾಲೆ ರಸ್ತೆಯ ಬಳಿ ವನ್ಯ ಜೀವಿಗಳ ಪಳೆಯುಳಿಕೆ ಮತ್ತು ಪ್ರಾಚೀನ ವಸ್ತುಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಆರ್ಯನ್ ಖಾನ್‌ನನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಆನೆ ಪಾದ, ದಂತದಿಂದ ತಯಾರಿಸಿದ ಶೂ ರಿಮೂವರ್ ಇನ್ನಿತ್ತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಾಚೀನ ಕಾಲದ ವಸ್ತುಗಳು: ಆನೆ ಪಾದ, ಆನೆಯ ದಂತದಿಂದ ಮಾಡಿದ ಶೂ ರಿಮೂವರ್, ಯು ಬೋಟ್ಸ್ ವೆಸ್ಟ್ ವರ್ಲ್ಡ್ ಪುಸ್ತಕ, ಆನೆಯ ಪಾದವನ್ನು ಮುಚ್ಚುವ ತಾಮ್ರದ ಪ್ಲೇಟ್, ಮಿಲ್ಕಿ ಜಗ್, ಟೀ ಪಾಟ್, ಷುಗರ್ ಸ್ಪೇಯರ್, ಭೂತಾನ್ ಷೋ ಪೀಸ್, ಐರೀಷ್ ಟೀ ಮೇಕರ್, ಷುಗರ್ ಪಾಟ್, ಸ್ಮಾಲ್ ಮಿಲ್ಕ್ ಜಂಗ್, ಜರ್ಮನ್ ಸಿಲ್ವರ್ ಸೌಟು, ಜರ್ಮನ್ ಸಿಲ್ವರ್ ಆ್ಯಶ್ ಟ್ರೇ, 5 ಚಿಕ್ಕ ಮಸ್ಟರ್ಡ್ ಟ್ರೇ, ಚಿಕ್ಕ ಮಂಚುಗಳು, ಆಫ್ರಿಕನ್ ಆರ್ಟ್‌ವುಡ್ ಸ್ಪೂನ್ಸ್, ಪ್ರಾಣಿಯ ಮೂಳೆಯಿಂದ ತಯಾರಿಸಿದ ಸ್ಪೂನ್, ಜರ್ಮನ್ ಸಿಲ್ವರ್ ಪೋರ್ಕ್ ಸ್ಪೂನ್ಸ್, ಟೇಬಲ್ ಶಾರ್ಪ್‌ನರ್ ಜಪ್ತಿ ಮಾಡಿದ ವಸ್ತುಗಳು.

    ಕಾನೂನು ಉಲ್ಲಂಘನೆ ಏಕೆ: ಆಂಗ್ಲೋ ಇಂಡಿಯನ್ ಪ್ರಜೆಗಳಿಗೆ ಪ್ರಾಚೀನ ಮತ್ತು ವನ್ಯ ಜೀವಿಗಳ ಪಳೆಯುಳಿಕೆ ಸಂಗ್ರಹಿಸಲು ಅವಕಾಶವಿತ್ತು. ಆದರೆ, ಅವರಿಂದ ಆ ವಸ್ತುಗಳನ್ನು ಪಡೆದಾಗ ಅದಕ್ಕೆ ಅಧಿಕೃತವಾಗಿ ಕಾನೂನು ಬದ್ಧವಾಗಿ ಸರ್ಕಾರದಿಂದ ಪತ್ರ ವ್ಯವಹಾರದ ಮೂಲಕ ಉಡುಗೊರೆ ಸ್ವೀಕರಿಸಬೇಕಿದೆ. ಆನಂತರ ಮಾರಾಟದ ಸಮಯದಲ್ಲಿ ಸಹ ಅರಣ್ಯ ಇಲಾಖೆ ಮತ್ತು ಪುರಾತತ್ವ ಇಲಾಖೆಯಿಂದ ಮಾರಾಟಕ್ಕೆ ಅನುಮತಿ ತರಬೇಕಿತ್ತು. ಆದರೆ, ಕಾನೂನು ಪಾಲನೆ ಮಾಡದೆ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ‘500 ಮಂದಿಯೊಂದಿಗೆ ಮಲಗಿರುವೆ- ಆರು ವರ್ಷಗಳಲ್ಲಿ 1000 ಪುರುಷರೇ ನನ್ನ ಗುರಿ’ ಎಂದು ಅನುಭವ ಬಿಚ್ಚಿಟ್ಟ ರೂಪದರ್ಶಿ!

    ಈ ಹೋರಿಗೆ ಕೋಟಿ ರೂ, ಒಂದು ಡೋಸ್‌ ವೀರ್ಯಕ್ಕೆ ಸಾವಿರಾರು ರೂ! ಕೃಷಿ ಮೇಳದಲ್ಲಿ ಹೋರಿ, ಹೋತಗಳ ಅಚ್ಚರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts