More

    ಎಲ್ಲೆಡೆ ಕಲ್ಲಂಗಡಿ ದಾಂಗುಡಿ ಖರೀದಿ ಭರಾಟೆ ಜೋರು

    ಬಿಸಿಲಿನ ತಾಪಕ್ಕೆ ಬಳಲಿದ ಜನ

    ಹೆಚ್ಚಿದ ತಂಪು ಪಾನೀಯ ಬೇಡಿಕೆ





    ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ


    ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬೇಸಿಗೆಯ ಬಿಸಿಲಿನ ತಾಪದಿಂದ ಬವಸವಳಿದವರ ದಾಹ ತಣಿಸಲು ಎಲ್ಲೆಡೆ ಕಲ್ಲಂಗಡಿ ದಾಂಗುಡಿ ಇಟ್ಟಿದೆ. ತಾಲೂಕಿನ ಹಲವೆಡೆ ರಸ್ತೆ ಬದಿ, ಪಾದಚಾರಿ ಮಾರ್ಗದಲ್ಲಿ ತಾತ್ಕಾಲಿಕ ಅಂಗಡಿ ತೆರೆದು ಕಲ್ಲಂಗಡಿ ವ್ಯಾಪಾರಿ ಶುರುವಾಗಿದೆ.


    ಬಿಸಿಲಿನ ಬೇಗೆಯಿಂದ ದಣಿವಾರಿಸಿಕೊಳ್ಳಲು ಜನರು ಎಳನೀರು ಹಾಗೂ ಕಲ್ಲಂಗಡಿ ಹಣ್ಣಿನ ಮೊರೆಹೋಗುತ್ತಿದ್ದು, ಪಟ್ಟಣದ ಎಲ್ಲ ವೃತ್ತಗಳಲ್ಲೂ ಕಲ್ಲಂಗಡಿಗಳ ರಾಶಿ ತುಂಬಿರುವ ದೃಶ್ಯ ಕಂಡು ಬರುತ್ತಿದೆ. ಪ್ರತಿ ಎಳನೀರು ಒಂದಕ್ಕೆ 30 ರಿಂದ 40 ರೂ. ಮಾರಾಟವಾಗುತ್ತಿದೆ. ಆದರೆ ಕಡಿಮೆ ಬೆಲೆಗೆ ಸಿಗುವ ಕಲ್ಲಂಗಡಿ ಖರೀದಿಗೆ ಜನರು ಒಲವು ತೋರಿದ್ದಾರೆ. ಬೇಡಿಕೆಗೆ ತಕ್ಕಂತೆ ವ್ಯಾಪಾರಸ್ಥರೂ ಲೋಡುಗಟ್ಟಲೇ ಕಲ್ಲಂಗಡಿ ಶೇಖರಿಸಿ ಇಟ್ಟುಕೊಂಡಿದ್ದಾರೆ.


    ಕಲ್ಲಂಗಡಿ ಹಣ್ಣು ಸೇವನೆ ಆರೋಗ್ಯಕ್ಕೆ ಉತ್ತಮವಾಗಿದ್ದು, ಹಣ್ಣಿನಲ್ಲಿ ಶೇ.90 ನೀರಿನಾಂಶವಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಬೇಸಿಗೆಯ ವೇಳೆ ಅನಾರೋಗ್ಯ ಸಮಸ್ಯೆಯಿಂದ ಮುಕ್ತರಾಗಲು ಕಲ್ಲಂಗಡಿ ಸೇವನೆ ಉಪಯುಕ್ತವಾಗಿದೆ. ಕಳೆದ ವರ್ಷ ಕೆಜಿಗೆ 20 ರೂ. ಇದ್ದ ಕಲ್ಲಂಗಡಿ ಈ ಭಾರಿ 40 ರೂ.ಗೆ ಮಾರಾಟಮಾಡಲಾಗುತ್ತಿದೆ. ಬೇಡಿಕೆ ಹೆಚ್ಚಿದ್ದರಿಂದ ವ್ಯಾಪಾರವೂ ಭರ್ಜರಿಯಾಗಿದೆ.

    ಬಿಸಿಲು ಹೆಚ್ಚಾದಂತೆ ಕಲ್ಲಂಗಡಿ ಹಣ್ಣಿನ ವ್ಯಾಪಾರ ಜೋರಾಗಿದೆ. ಪ್ರತಿ ಪೀಸ್‌ಗೆ 20 ರೂ. ಮಾರಾಟ ಮಾಡಲಾಗುತ್ತಿರುವುದರಿಂದ ಪ್ರತಿ ದಿನ 5 ಸಾವಿರ ರೂ. ವ್ಯಾಪಾರವಾಗುತ್ತಿದೆ. ಜನರು ಹಣಕ್ಕಿಂತ ಹಣ್ಣಿನ ರುಚಿಗೆ ಗಮನ ಹರಿಸುತ್ತಾರೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಉತ್ತಮ ಹಣ್ಣು ತಂದು ಮಾರಾಟ ಮಾಡಲಾಗುತ್ತಿದೆ.
    ಗಿರೀಶ್ ಕಲ್ಲಂಗಡಿ ವ್ಯಾಪಾರಿ

    ಎಲ್ಲ ಬೆಲೆಗಳು ಗಗನ ಕುಸುಮವಾಗಿರುವ ನಡುವೆ ಬಡವರಿಗೆ ಕಲ್ಲಂಗಡಿ ಕೈಗೆ ಸಿಗುತ್ತಿರುವುದರಿಂದ ಬೇಸಿಗೆಯಲ್ಲಿ ದಣಿವಾರಿಸಿಕೊಳ್ಳಲು ಅನುಕೂಲವಾಗಿದೆ. ಮಳೆ ಇಲ್ಲದೆ ಇದೇ ರೀತಿ ಮುಂದುವರಿದರೆ ಕಲ್ಲಂಗಡಿ ಹಣ್ಣು ಸಿಗದಂತಾಗುತ್ತದೆ.
    ಮಂಜುನಾಥ್
    ಗ್ರಾಪಂ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts