More

  ಗ್ರಾಮೀಣ ಜನರು ಆರೋಗ್ಯ ಕಾಳಜಿ ವಹಿಸಿ

  ಬೈಲಕುಪ್ಪೆ: ಹಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಲಾರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕು ರೋಟರಿ ಮಿಡ್ ಟೌನ್ ಸಹಭಾಗಿತ್ವದಲ್ಲಿ ಲಕ್ಷ್ಮೀ ಹೆಲ್ತ್ ಕೇರ್ ಸೆಂಟರ್ ವತಿಯಿಂದ ಶುಕ್ರವಾರ ಆರೋಗ್ಯ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

  ತಾಲೂಕು ರೋಟರಿ ಮಿಡ್ ಟೌನ್ ಅಧ್ಯಕ್ಷ ತಿರುಮಲಪುರ ರಾಜೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಜನರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಕೆಲಸದ ಒತ್ತಡ ನಡುವೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು ಎಂದು ಹೇಳಿದರು.

  ತಾಲೂಕು ಕಾರ್ಯದರ್ಶಿ ವೈ.ಕೆ. ಹೆಗಡೆ ಮಾತನಾಡಿದರು. ಸದಸ್ಯ ಎ.ಜೆ. ಬಸವೇಗೌಡ, ಹೇಮೇಶ್, ಹೆಲ್ತ್ ಕೇರ್ ಸೆಂಟರ್‌ನ ಡಾ. ಭಗತ್, ಗ್ರಾಮದ ಪ್ರಮುಖ ಕೆ.ನಾಗರಾಜ್, ಶೇಷಾದ್ರಿ, ಮಲ್ಲೇಶ್, ಸಂತೃಪ್ತಿ, ಶೃತಿ, ವೆಂಕಟೇಶ್ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts