More

    ಅಗ್ರಸ್ಥಾನಕ್ಕಾಗಿ ಇಂದು ಕೆಕೆಆರ್​-ರಾಜಸ್ಥಾನ ಸೆಣಸಾಟ; ಗೆಲುವಿನ ಲಯ ಕಾಯ್ದುಕೊಳ್ಳುವ ಹಂಬಲದಲ್ಲಿ ಶ್ರೇಯಸ್​-ಸ್ಯಾಮ್ಸನ್​ ಬಳಗ

    ಕೋಲ್ಕತ: ಐಪಿಎಲ್​-17ರ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್​ ಹಾಗೂ ಎರಡು ಬಾರಿಯ ಚಾಂಪಿಯನ್​ ಕೋಲ್ಕತ ನೈಟ್​ರೈಡರ್ಸ್​ ತಂಡಗಳು ಮಂಗಳವಾರ ಈಡನ್​ ಗಾರ್ಡನ್ಸ್​ನಲ್ಲಿ ಪರಸ್ಪರ ಎದುರಾಗಲಿದ್ದು, ಗೆಲುವಿನ ಓಟ ಕಾಯ್ದುಕೊಳ್ಳುವ ಜತೆಗೆ ಅಗ್ರಸ್ಥಾನಕ್ಕಾಗಿ ಹೋರಾಟ ನಡೆಸಲಿವೆ.

    ಉಭಯ ತಂಡಗಳು ಟೂರ್ನಿಯಲ್ಲಿ ಸಮತೋಲನದಿಂದ ಕೂಡಿದ್ದು, ಮಾಜಿ ಚಾಂಪಿಯನ್​ಗಳ ಮುಖಾಮುಖಿ ಕುತೂಹಲ ಕೆರಳಿಸಿದೆ. ರಾಜಸ್ಥಾನ ಹಿಂದಿನ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ಎದುರು ಕೊನೇ ಓವರ್​ನಲ್ಲಿ ರೋಚಕ ಗೆಲುವು ದಾಖಲಿಸಿ ಆಡಿರುವ 6 ಪಂದ್ಯಗಳಲ್ಲಿ 5 ಗೆಲುವು, 1 ಸೋಲಿನೊಂದಿಗೆ 10 ಅಂಕ ಕಲೆಹಾಕಿದೆ. ಲಖನೌ ಎದುರು ಸುಲಭ ಗೆಲುವು ದಾಖಲಿಸಿ ಜಯದ ಹಾದಿಗೆ ಮರಳಿರುವ ಕೆಕೆಆರ್​, ಆಡಿರುವ 5 ಪಂದ್ಯಗಳಲ್ಲಿ 4 ಗೆಲುವು, 1 ಸೋಲಿನೊಂದಿಗೆ 8 ಪಾಯಿಂಟ್​ ಹೊಂದಿದೆ. ಸ್ಪಿನ್ನರ್​ಗಳಿಗೆ ಹೆಚ್ಚಿನ ನೆರವು ಒದಗಿಸುವ ಅಂಗಣದಲ್ಲಿ ಉಭಯ ತಂಡಗಳ ಸ್ಪಿನ್​ ವಿಭಾಗ ಪ್ರಮುಖ ಪಾತ್ರ ವಹಿಸಲಿದೆ. ಗೌತಮ್​ ಗಂಭೀರ್​ ಕೆಕೆಆರ್​ ಮೆಂಟರ್​ ಆದ ಬಳಿಕ ಹೊಸ ಪಾತ್ರದೊಂದಿಗೆ ಕಾಣಿಸಿಕೊಂಡಿರುವ ಸುನೀಲ್​ ನಾರಾಯಣ್​ ಪಂದ್ಯದ ಆಕರ್ಷಣೆ ಎನಿಸಲಿದ್ದಾರೆ.

    ಫಾರ್ಮ್​ನಲ್ಲಿ ಆರ್​ಆರ್​ ಬ್ಯಾಟರ್ಸ್​
    ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ಬಳಿಕ ಅದನ್ನು ಪುನಾರಾವರ್ತಿಸಲು ವಿಲವಾಗಿರುವ ರಾಜಸ್ಥಾನ ಈ ಬಾರಿ ಪ್ರಶಸ್ತಿ ಜಯಿಸುವ ಗುರಿ ಹೊಂದಿದ್ದು, ಆಟಗಾರರು ಭರ್ಜರಿ ಲಯದಲ್ಲಿದ್ದಾರೆ. ಗಾಯದ ಸಮಸ್ಯೆಯಿಂದ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದ ಜೋಸ್​ ಬಟ್ಲರ್​, ಆರ್​. ಅಶ್ವಿನ್​ ಮರಳಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ನಾಯಕ ಸಂಜು ಸ್ಯಾಮ್ಸನ್​, ರಿಯಾನ್​ ಪರಾಗ್​ (284 ರನ್​) ಹಾಲಿ ಟೂರ್ನಿಯಲ್ಲಿ ಉತ್ತಮ ಫಾರ್ಮ್​ನಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್​ ಸಹ ಹಿಂದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಲಯ ಕಂಡುಕೊಂಡಿದ್ದಾರೆ. ಆರಂಭಿಕ ಮೂರು ಪಂದ್ಯಗಳ ಬಳಿಕ ಟ್ರೆಂಟ್​ ಬೌಲ್ಟ್​ ವಿಕೆಟ್​ ಕಬಳಿಸುವಲ್ಲಿ ವೈಲ್ಯ ಕಂಡಿದ್ದಾರೆ. ಯಜುವೇಂದ್ರ ಚಾಹಲ್​ ಗರಿಷ್ಠ ವಿಕೆಟ್​ ಪಡೆದವರ ರೇಸ್​ನಲ್ಲಿದ್ದಾರೆ.

    ಲಯದಲ್ಲಿದೆ ಕೆಕೆಆರ್​
    ಫಿಲ್​ ಸಾಲ್ಟ್​ ಹಾಗೂ ಸುನೀಲ್​ ನಾರಾಯಣ್​ ಭರ್ಜರಿ ಫಾರ್ಮ್​ನಲ್ಲಿದ್ದು, ಆರ್​ಆರ್​ ಬೌಲರ್​ಗಳಿಗೆ ಕಠಿಣ ಪರೀಕ್ಷೆ ನೀಡಲಿದ್ದಾರೆ. ನಾಯಕ ಶ್ರೇಯಸ್​ ಅಯ್ಯರ್​ ಕಳೆದ ಪಂದ್ಯದಲ್ಲಿ ಉತ್ತಮ ಜತೆಯಾಟ ನೀಡಿದರೂ ಸ್ಟ್ರೆ$ಕ್​ರೇಟ್​ ಮೇಲೆ ಗಮನಹರಿಸಬೇಕಿದೆ. ಇದು ಮಾತ್ರ ಕೆಕೆಆರ್​ಗೆ ಹಿನ್ನಡೆ ಎನಿಸಿದೆ. ರಿಂಕು ಸಿಂಗ್​ ಟೂರ್ನಿಯಲ್ಲಿ ಇನ್ನೂ ರನ್​ ಹರಿಸಿಲ್ಲ. ಇದುವರೆಗೆ 63 ರನ್​ ಮಾತ್ರ ಕಲೆಹಾಕಿದ್ದಾರೆ. ದುಬಾರಿ ಆಟಗಾರ ಮಿಚೆಲ್​ ಸ್ಟಾರ್ಕ್​ ಫಾರ್ಮ್​ಗೆ ಮರಳಿರುವುದು ಬೌಲಿಂಗ್​ ಬಲ ಹೆಚ್ಚಿಸಿದ್ದು, ವೈಭವ್​ ಆರೋರ, ಹರ್ಷಿತ್​ ರಾಣಾ ಸಹ ಲಯದಲ್ಲಿದ್ದಾರೆ.

    ಮುಖಾಮುಖಿ: 28
    ರಾಜಸ್ಥಾನ:13
    ಕೆಕೆಆರ್​: 14
    ರದ್ದು: 1
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಸಿನಿಮಾ.

    IPL 2024: ತವರಿನಲ್ಲೂ ಸೋಲಿನ ಸರಪಳಿ ಕಳಚದ ಆರ್​ಸಿಬಿ; ರನ್​ಮಳೆಯಲ್ಲಿ ಸನ್​ರೈಸರ್ಸ್ ಎದುರು ವೀರೋಚಿತ ಸೋಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts