More

    ನೂರು ಕೋಟಿ ಕ್ಲಬ್​ಗೆ ಸೇರುತ್ತಾ ರಾಬರ್ಟ್​? ಅಷ್ಟಕ್ಕೂ ಮೊದಲ ವಾರದ ಕಲೆಕ್ಸೆನ್ ಎಷ್ಟು ?

    ಬೆಂಗಳೂರು: ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ನೂರು ಕೋಟಿ ಕ್ಲಬ್ ಸೇರುವತ್ತ ದಾಪುಗಾಲು ಹಾಕುತ್ತಿದೆ ಎಂಬುದು ಕಂಡು ಬರುತ್ತಿದೆ. ಏಕೆಂದರೆ ರಾಬರ್ಟ್​​ ಮೊದಲ ವಾರದ ಕಲೆಕ್ಸನ್ ಕೇಳಿದರೆ, ಸಿನಿಮಾ ನೂರು ಕೋಟಿ ದಾಟುವುದು ಪಕ್ಕಾ ಎನ್ನುತ್ತಿದ್ದಾರೆ ಸಿನಿಮಾ ಮಂದಿ.

    ಮಾರ್ಚ್​ 11 ರಂದು ಬಿಡುಗಡೆಯಾಗಿರುವ ರಾಬರ್ಟ್​​ಗೆ ಕರ್ನಾಟಕದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಂಧ್ರ ತೆಲಂಗಾಣದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಡುಗಡೆಯಾಗಿ ಎರಡು ದಿನದಲ್ಲಿ 18 ಕೋಟಿ ರುಪಾಯಿ ಗಳಿಸಿದ್ದ ರಾಬರ್ಟ್ ಇದೀಗ ಒಂದೇ ವಾರದಲ್ಲಿ 70 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಚಿತ್ರತಂಡ ಹೇಳುತ್ತಿದೆ.

    ಇದನ್ನೂ ಓದಿ: ಅಯೋಧ್ಯೆಯಲ್ಲಿ ‘ರಾಮ ಸೇತು’ ಚಿತ್ರದ ಶುಭಾರಂಭ

    ರಾಬರ್ಟ್​​ಗೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ ನೋಡಿದರೇ ಇನ್ನೆರಡು ವಾರದಲ್ಲಿ ಚಿತ್ರ ನೂರು ಕೋಟಿ ಕ್ಲಬ್​ ಸೇರುವುದರಲ್ಲಿ ಸಂದೇಹವಿಲ್ಲ ಎನ್ನಲಾಗುತ್ತಿದೆ. ಈ ಮೊದಲು ಕನ್ನಡ ಚಿತ್ರವೊಂದು ನೂರು ಕೋಟಿ ಕ್ಲಬ್​ ದಾಟಿದ್ದೆಂದರೆ ಅದು ಕೆಜಿಎಫ್. ಕೆಜಿಎಫ್ ಚಾಪ್ಟರ್ 1 ಹೊರತುಪಡಿಸಿದರೇ ನೂರು ಕೋಟಿ ಕ್ಲಬ್ ಸೇರುತ್ತಿರುವ ಎರಡನೇ ಚಿತ್ರ ರಾಬರ್ಟ್​ ಆಗಲಿದೆ.

    ಸಿಎಂ ನಿವಾಸಕ್ಕೆ ಸುದೀಪ್ ದಿಢೀರ್​ ಭೇಟಿ!​

    ಅಕ್ಷಯ್ ‘ರಾಮಸೇತು’ವಿಗೆ ಅಮೆಜಾನ್ ಬಂಡವಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts