More

    ಮೋರಿ ಕುಸಿದು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತ ; ಪರ್ಯಾಯ ಮಾರ್ಗವಿಲ್ಲದೆ ಎರಡು ಹಳ್ಳಿಗರ ಪರದಾಟ

    ಬಾಗೇಪಲ್ಲಿ: ಮೋರಿಯ ಛಾವಣಿ ಕುಸಿದು ತಾಲೂಕಿನ ರಾಶ್ಚೇರುವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಮಾಕಲಪಲ್ಲಿ ಮತ್ತು ಪ್ಯಾಯಲವಾರಪಲ್ಲಿ ಗ್ರಾಮಗಳು ಪರ್ಯಾಯ ಮಾರ್ಗವಿಲ್ಲದೆ ಎರಡು ವಾರಗಳಿಂದ ರಸ್ತೆ ಸಂಪರ್ಕ ಕಡಿದುಕೊಂಡಿವೆ.

    ತಾಲೂಕಿನ ಪ್ಯಾಲಯವಾರಪಲ್ಲಿ ಬಳಿಯ ದೇವರಮಾಕಲಪಲ್ಲಿ ಮಾರ್ಗದಲ್ಲಿ ನಿರ್ಮಿಸಿರುವ ಮೋರಿಯ ಛಾವಣಿ ಕುಸಿದು 15 ದಿನಗಳಾಗಿವೆ. ದೇವರಮಾಕಲಪಲ್ಲಿ ಮತ್ತು ಪ್ಯಾಯಲವಾರಪಲ್ಲಿಗೆ ಇದೊಂದೆ ಮಾರ್ಗವಾಗಿರುವುದರಿಂದ ಸರಕು ಸಾಗಣೆ, ಇನ್ನಿತರ ಕಾರ್ಯಗಳ ಸಂಚಾರಕ್ಕೆ ಗ್ರಾಮಸ್ಥರು ಪರದಾಡುವಂತಾಗಿದೆ.

    ತರಕಾರಿ ಸಾಗಿಸಲು, ರಸಗೊಬ್ಬರ ಸಾಗಣೆ, ಹಾಲು ಸಬರಾಜು ಸೇರಿ ಇತರೆ ವ್ಯವಹಾರಗಳಿಗಾಗಿ ಇದೇ ರಸ್ತೆಯಲ್ಲಿ ವಾಹನಗಳು ಸಂಚರಿಸಬೇಕು. ಮೊದಲೇ ರಸ್ತೆ ತುಂಬ ಕಿರಿದಾಗಿದೆ, ಈಗ ಎರಡು ವಾರಗಳ ಹಿಂದೆ ಮೊರಿ ಕುಸಿದಿರುವುದರಿಂದ ಸರಕು ಸಾಗಣೆಗೆ ಟ್ರ್ಯಾಕ್ಟರ್, ಟೆಂಪೋ ಸೇರಿದಂತೆ ಯಾವುದೇ ವಾಹನಗಳು ಗ್ರಾಮಗಳ ಒಳಗೆ ಮತ್ತು ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರಾದ ಪಿ.ಸುಬ್ಬಿರೆಡ್ಡಿ, ಪಿ.ಜಿ.ಮದ್ದಿರೆಡ್ಡಿ, ಲಕ್ಷ್ಮನ್ನ.

    ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿವೆ, ಆದರೆ ಮೋರಿ ಸಮಸ್ಯೆಯಿಂದಾಗಿ ರಸಗೊಬ್ಬರ, ಬಿತ್ತನೆ ಬೀಜ ತರುವುದು, ಇಲ್ಲಿನ ಉತ್ಪನ್ನಗಳನ್ನು ಮಾರುಕಟ್ಟೆ ಸಾಗಿಸುವುದೇ ಚಿಂತೆಯಾಗಿದೆ. ಸಮಸ್ಯೆ ಕುರಿತು ರಾಶ್ಚೇರುವು ಗ್ರಾಮ ಪಂಚಾಯತಿ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಹಳ್ಳಿಗರಾದ ಶ್ರೀನಿವಾಸ್, ನರಸಿಂಹಪ್ಪ, ಪ್ರಭಾಕರ ಅವರ ಆರೋಪ.

    ಪ್ಯಾಯಲವಾರಪಲ್ಲಿ ರಸ್ತೆ ಸಮಸ್ಯೆ ಕುರಿತು ಗ್ರಾಮಸ್ಥರು ಮಾಹಿತಿ ನೀಡಿದ್ದು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲಿಸಲಾಗಿದೆ. ಮೊರಿ ದುರಸ್ಥಿ ಕಾಮಗಾರಿಗೆ ವಿಶೇಷ ಅನುದಾನ ಬಿಡುಗಡೆಗೆ ಸದಸ್ಯರು ಒಪ್ಪದ ಕಾರಣ ನರೇಗಾ ಯೋಜನೆಯಡಿ ಕಾಮಗಾರಿ ಮಾಡುವುದಾಗಿ ತಿಳಿಸಿದ್ದೇವೆ.
    ನಾರಾಯಣಸ್ವಾಮಿ, ಪಿಡಿಒ ರಾಶ್ಚೆರುವು ಗ್ರಾ.ಪಂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts