More

    ನಿರುದ್ಯೋಗ ಹೆಚ್ಚುತ್ತಿರುವುದೇ ಅತ್ಯಾಚಾರ ಜಾಸ್ತಿಯಾಗಲು ಕಾರಣ: ಸುಪ್ರೀಂ ಮಾಜಿ ನ್ಯಾಯಮೂರ್ತಿ

    ನವದೆಹಲಿ: ನಿರ್ಭಯಾ ಪ್ರಕರಣವನ್ನು ನೆನಪಿಸುವ, ಭಯಾನಕ ಗ್ಯಾಂಗ್​ರೇಪ್​ ನಿನ್ನೆ ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದಿದೆ. ಯುವತಿಯೋರ್ವಳನ್ನು ನಾಲ್ವರು ಕಾಮುಕರು ಅತ್ಯಾಚಾರ ಮಾಡಿ, ನಾಲಿಗೆಯನ್ನೂ ಕತ್ತರಿಸಿದ್ದರು. ಕೊನೆಗೂ ಆ ಸಂತ್ರಸ್ತೆ ಬದುಕುಳಿಯಲಿಲ್ಲ.

    ಈ ಘಟನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಅವರು ಎಸ್​ಐಟಿ (ವಿಶೇಷ ತನಿಖಾ ತಂಡ) ರಚಸಿ, ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಜಾಲತಾಣದಲ್ಲಿ ಹರಿದಾಡ್ತಿರೋ ಫೋಟೋ ಹತ್ರಾಸ್ ಗ್ಯಾಂಗ್​ರೇಪ್​ ಸಂತ್ರಸ್ತೆಯದ್ದಾ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!

    ಹತ್ರಾಸ್ ಗ್ಯಾಂಗ್​ ರೇಪ್​ ಬಗ್ಗೆ ಸುಪ್ರೀಂಕೋರ್ಟ್​ನ ಮಾಜಿ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಅವರು ಫೇಸ್​ಬುಕ್ ಪೋಸ್ಟ್ ಹಾಕಿದ್ದು, ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದಿಂದಾಗಿ ಅತ್ಯಾಚಾರ ಪ್ರಕರಣಗಳೂ ಅಧಿಕವಾಗುತ್ತಿವೆ ಎಂದು ಹೇಳಿದ್ದಾರೆ.

    ದೇಶದ ಅನೇಕ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇದೇ ಕಾರಣದಿಂದ ಅವರಿಗೆ ವಿವಾಹವೂ ಆಗುತ್ತಿಲ್ಲ. ಹಾಗಾಗಿ ರೇಪ್​ ಕೇಸ್​​ಗಳೂ ಹೆಚ್ಚಾಗುತ್ತಿವೆ ಎಂದು ಬರೆದುಕೊಂಡಿದ್ದಾರೆ.
    ಹತ್ರಾಸ್​​ನಲ್ಲಿ ನಡೆದ ಗ್ಯಾಂಗ್​ ರೇಪ್​​ನ್ನು ನಾನು ಖಂಡಿಸುತ್ತೇನೆ. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು. ಲೈಂಗಿಕ ಬಯಕೆ ಎಂಬುದು ಪುರುಷರ ಸಹಜ ವಾಂಛೆ. ಕೆಲವರಿಗೆ ಆಹಾರ ಬಿಟ್ಟರೆ, ಸೆಕ್ಸ್​ ಎಂಬುದೇ ಮುಂದಿನ ಅವಶ್ಯಕತೆ ಎಂದಾಗಿಬಿಟ್ಟಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: VIDEO| ಪೇಂಟ್​ ರೋಲರ್​ನಲ್ಲಿ ವಧುವಿಗೆ ಅರಿಶಿನ ಹಚ್ಚಿದ ಮಹಿಳೆ! ಫನ್ನಿ ಅನ್ನಿಸಿದ್ರೂ ಡಿಫರೆಂಟ್​

    ಭಾರತ ಸಂಪ್ರದಾಯಬದ್ಧ ದೇಶ. ಮದುವೆಯ ನಂತರವೇ ಲೈಂಗಿಕ ಕ್ರಿಯೆ ನಡೆಸಬೇಕು. ಆದರೆ ಈ ನಿರುದ್ಯೋಗ ಹೆಚ್ಚುತ್ತಿದೆ..ಅನೇಕ ಯುವಕರು ಮದುವೆಯಾಗಲು ಕಷ್ಟಪಡುವಂತಾಗಿದೆ. ಯಾವ ಹೆಣ್ಣುಮಕ್ಕಳೂ ನಿರುದ್ಯೋಗಿಯನ್ನು ಮದುವೆಯಾಗಲು ಮುಂದೆ ಬರುತ್ತಿಲ್ಲ. ಹಾಗಾಗಿ ಅವರು ತಮ್ಮ ವಾಂಛೆ ತೀರಿಸಿಕೊಳ್ಳಲು ಹಪಹಪಿಸುತ್ತಾರೆ. ರೇಪ್​ನಂತ ಕೆಟ್ಟ ಕೆಲಸಕ್ಕೆ ಇಳಿಯುತ್ತಿದ್ದಾರೆ ಎಂದು ಮಾಜಿ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

    ನಾನು ಅತ್ಯಾಚಾರವನ್ನು ಸಮರ್ಥಿಸುತ್ತಿಲ್ಲ. ಎಲ್ಲೇ ಈ ದುಷ್ಕೃತ್ಯ ನಡೆದರೂ ನಾನದನ್ನು ಖಂಡಿಸುತ್ತೇನೆ. ರೇಪ್​ ನಡೆಯಬಾರದು. ಅತ್ಯಾಚಾರ ಪ್ರಕರಣವನ್ನು ಕಡಿಮೆ ಮಾಡಬೇಕೆಂದರೆ ಭಾರತದಲ್ಲಿ ಸಾಮಾಜಿಕ, ಆರ್ಥಿಕ ವ್ಯವಸ್ಥೆಯನ್ನು ರೂಪಿಸಬೇಕು. ನಿರುದ್ಯೋಗ ಕಡಿಮೆ ಮಾಡಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ಇನ್ನೊಂದು ನಿರ್ಭಯಾ ಕೇಸ್​: ಹತ್ರಾಸ್​ ಗ್ಯಾಂಗ್​ರೇಪ್​ ಪ್ರಕರಣ ಎಸ್​ಐಟಿ ತನಿಖೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts